Home
ಕಂಪ್ಯೂಟರ್‌‌

ಕಳೆದುಹೋದಾಗ ನಿಮ್ಮ ನಡೆ ಹೀಗಿರಲಿ

By Super
ಕಳೆದುಹೋದಾಗ ನಿಮ್ಮ ನಡೆ ಹೀಗಿರಲಿ
ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ...

1. ಪೊಲೀಸ್ ಕಂಪ್ಲೇಂಟ್ ಕೊಡಿ
ನಿಮ್ಮ ಲ್ಯಾಪ್ ಟಾಪ್ ಕಳೆದು ಹೋದ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಡಿ. ಅವರು ನಿಮ್ಮ ಲ್ಯಾಪ್ ಟಾಪ್ ಹುಡುಕಿಕೊಡದಿದ್ದರೂ ಅದನ್ನು ಕದ್ದು ಮಾರಾಟ ಮಾಡಲು ಯತ್ನಿಸಿದರೆ ಸಿಕ್ಕಿಬೀಳುವ ಸಂಭವ ಇಲ್ಲದಿಲ್ಲ. ಹಾಗೇ ಕಾಲೇಜ್ ಕ್ಯಾಂಪಸ್ ನಲ್ಲಿ ಕಳೆದುಕೊಂಡಿದ್ದರೆ ಸೆಕ್ಯುರಿಟಿ ಹಾಗೂ ಕ್ಯಾಂಪಸ್ ಪೊಲೀಸ್ ಗೆ ಕಂಪ್ಲೇಂಟ್ ಕೊಡಲು ಖಂಡಿತ ಮರೆಯಬೇಡಿ.

2. ಸ್ಥಳೀಯ ರಿಪೇರಿ ಹಾಗೂ ಗಿರವಿ ಅಂಗಡಿಗೆ ಕಳೆದಿರುವ ಬಗ್ಗೆ ಮಾಹಿತಿ ನೀಡಿ
ಕಳೆದು ಹೋಗಿರುವ ನಿಮ್ಮ ಲ್ಯಾಪ್ ಟಾಪ್ ಸೀರಿಯಲ್ ನಂಬರ್, ಸುಲಭವಾಗಿ ಗುರ್ತು ಹಿಡಿಯಬಲ್ಲ ಯಾವುದಾದರೂ ಮಾರ್ಕ್ ಅಥವಾ ಸ್ಕ್ರಾಚಸ್ ಬಗ್ಗೆ ಸ್ಥಳೀಯ ರಿಪೇರಿಗಾರರು ಹಾಗೂ ಗಿರವಿ ಅಂಗಡಿಗೆ ಮಾಹಿತಿ ನೀಡಿ. ಅವರುಗಳು ಸಾಮಾನ್ಯವಾಗಿ ಹಳೆಯ ವಸ್ತುಗಳನ್ನು ಕೊಳ್ಳುವಾಗ ಸ್ಥಳೀಯ ಪೊಲೀಸ್ ಸ್ಟೇಷನ್ ನೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ

3. ಇನ್ಸುರೆನ್ಸ್ ಏಜೆಂಟ್ ಸಂಪರ್ಕಿಸಿ
ಬಹಳಷ್ಟು ಇನ್ಸುರೆನ್ಸ್ ಪಾಲಸಿಗಳು ಕಳುವಾಗಿರುವ ಹಾರ್ಡ್ ವೇರ್ ಗಳಿಗೂ ಕೂಡ ಸಂಬಂಧಿಸುರುತ್ತವೆ. ಆದರೆ ಈ ಕಳುವು ನಿಮ್ಮ ಮನೆಯಿಂದ ಹೊರಗೆ ಆಗಿರಬೇಕು. ನಿಮ್ಮ ವಾಹನಗಳಲ್ಲಿದ್ದ ಲ್ಯಾಪ್ ಟಾಪ್ ಕಳುವಾಗಿದ್ದರೆ ಆಟೋಮೊಬೈಲ್ಸ್ ಇನ್ಸುರೆನ್ಸ್ ಅದನ್ನು ಪಾವತಿಸುತ್ತದೆ. ನಿಮ್ಮ ಕಳೆದು ಹೋದ ಲ್ಯಾಪ್ ನೀವು ಕೆಲಸ ಮಾಡುವ ಕಂಪೆನಿಯ ಆಸ್ತಿಯಾಗಿದ್ದರೆ ಕಂಪೆನಿಯ ಇನ್ಸುರೆನ್ಸ್ ಪಾಲಸಿ ಆಸರೆಯಾಗುತ್ತದೆ. ಯಾವುದಕ್ಕೂ ನಿಮ್ಮ ಇನ್ಸುರೆನ್ಸ್ ಏಜಂಟ್ ಸಂಪರ್ಕಿಸುವುದನ್ನು ಮರೆಯಬೇಡಿ. ಇವೆಲ್ಲದಕ್ಕೂ, ನೀವು ಮೊದಲು ಕೊಟ್ಟ ಪೊಲೀಸ್ ಕಂಫ್ಲೇಂಟ್ ಹಾಗೂ ಪಡೆದ ರಿಪೋರ್ಟ್ ಮುಖ್ಯವಾಗಿರುತ್ತದೆ, ಮರೆಯಬೇಡಿ!

4. ಲ್ಯಾಪ್ ಟಾಪ್ ಕಳುವಾಗಿರುವ ಬಗ್ಗೆ ನಿಮ್ಮ ಸುತ್ತಮುತ್ತಲಿರುವ ಜನರಿಗೆ ತಿಳಿಸಿ
ನಿಮ್ಮ ಆಸ್ತಿ, ಲ್ಯಾಪ್ ಟಾಪ್ ಕಳುವಾಗಿರುವ ಬಗ್ಗೆ ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಆತ್ಮೀಯರಿಗೆ ತಕ್ಷಣ ತಿಳಿಸಿ. ಹಾಗೇ ಹತ್ತಿರದ ದಿನಸಿ ಅಂಗಡಿಯಲ್ಲಿ, ಸ್ಥಳೀಯ ಪತ್ರಿಕೆಗಳಲ್ಲಿ ತಂದುಕೊಟ್ಟವರಿಗೆ ಸೂಕ್ತ ಬಹುಮಾನ ಘೋಷಿಸಿ ಜಾಹೀರಾತು ನೀಡಿ. ಇದರಿಂದ ಹಣ ಹೋದರೂ ನಿಮ್ಮ ಅತ್ಯಮೂಲ್ಯ ಮಾಹಿತಿ ಹಾಗೂ ಡಾಟಾ ನಿಮ್ಮ ಕೈಸೇರುತ್ತದೆ.

5. ಜಾಹೀರಾತು ಹಾಗೂ ಸುದ್ದಿಮೂಲಗಳ ಮೇಲೊಂದು ಕಣ್ಣಿರಲಿ
ಪೊಲೀಸ್ ಕಂಪ್ಲೇಂಟ್, ಹಾಗೂ ನ್ಯೂಸ್ ಪೇಪರ್ ಜಾಹೀರಾತು ಕೊಟ್ಟ ನಂತರ ನ್ಯೂಸ್ ಪೇಪರ್ ಗಳಲ್ಲಿ ಹಾಗೂ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆ ಗಮನಹರಿಸಿ. ನಿಮ್ಮ ಕಳುವಾಗಿರುವ ಲ್ಯಾಪ್ ಟಾಪ್ ಜಾಹೀರಾತು ಕಾಣಿಸಿಕೊಳ್ಳಬಹುದು. ಗ್ರಾಹಕರಂತೆ ಹೋಗಿ ನೋಡಿ ನೀವು ಪತ್ತೆ ಹಚ್ಚಿ ನಂತರ ಕ್ರಮ ಕೈಗೊಳ್ಳಬಹುದು.

ಕಳೆದುಕೊಳ್ಳದಿರಲು ಏನು ಮಾಡಬೇಕೆಂದು ಮುಂದಿನ ಪುಟ ನೋಡಿ ಅರಿತುಕೊಳ್ಳಿ...

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+