ಲ್ಯಾಪ್ ಟಾಪ್ ಎಂಬ ಮಾಹಿತಿ ಖಜಾನೆ ಕಳೆದುಕೊಳ್ಳಬೇಡಿ

By Super
|
ಲ್ಯಾಪ್ ಟಾಪ್ ಎಂಬ ಮಾಹಿತಿ ಖಜಾನೆ ಕಳೆದುಕೊಳ್ಳಬೇಡಿ
ಇತ್ತೀಚಿನ ದಿನಗಳಲ್ಲಿ ಬಹುಪಯೋಗಿ ಲ್ಯಾಪ್ ಟಾಪ್ ಬಿಸಿನೆಸ್ ಮನ್ ಗಳ ಅಗತ್ಯಗಳಲ್ಲಿ ಒಂದಾಗಿದೆ. ಕೇವಲ ಬಿಸಿನೆಸ್ ಮನ್ ಗಳಿಗಲ್ಲದೇ ಜನಸಾಮಾನ್ಯರೂ ಉಪಯೋಗಿಸುವ ಟ್ರೆಂಡ್ ಕೂಡ ಅತೀ ಸಮೀಪದಲ್ಲಿದೆ. ಈ ಲ್ಯಾಪ್ ಟಾಪ್ ನಲ್ಲಿ ಮಾಲೀಕರ ಎಲ್ಲ ವೈಯಕ್ತಿಕ ಹಾಗೂ ವ್ಯವಹಾರಗಳ ಮಾಹಿತಿಗಳು, ಸಾಕಷ್ಟು ಸೂಕ್ಷ್ಮ ಡಾಟಾಗಳೂ ಇರುತ್ತವೆ.

ಒಟ್ಟಿನಲ್ಲಿ ಅದೊಂದು ಅತ್ಯಮೂಲ್ಯ ವಸ್ತುವಾಗಿ ಮಾರ್ಪಟ್ಟಿರುತ್ತದೆ. ಬೆಲೆಯೂ ಸಾಕಷ್ಟು ಜಾಸ್ತಿಯೇ ಇರುವುದರಿಂದ ಸಹಜವಾಗಿಯೇ ಅದನ್ನು "ಅಮೂಲ್ಯ" ಆಸ್ತಿ ಎಂದೇ ಪರಿಗಣೀಸಬೇಕಾಗುತ್ತದೆ. ಇಂತಹ ಅತ್ಯಮೂಲ್ಯ ಲ್ಯಾಪ್ ಟಾಪ್ ಕಳುವಾದರೆ ಅಥವಾ ಕಳೆದುಹೋದರೆ..!?

ಹೀಗೇ ಯೋಚಿಸಿದರೇ ಮೈ ನಡುಗುತ್ತದೆ. ಆದರೆ ಸಾಕಷ್ಟು ಜನ ಈಗಾಗಲೇ ಕಳೆದುಕೊಂಡು ಕಂಗಾಲಾಗಿದ್ದಾರೆ; ಮುಂದೆ ಕೂಡ ಕಳೆದು ಹೋಗುವ ಸಂಭವ ಇದ್ದೇ ಇದೆ. ಕಳುವಾಗಲೇಬೇಕೆಂದೇನೂ ಇಲ್ಲವಲ್ಲ, ಎಲ್ಲೋ ನೀವೇ ಮರೆತು ಬಿಡಬಹುದು. ಅದು ಯಾರದೋ ಕೈಗೆ ಸಿಕ್ಕಿ ಎಲ್ಲಿಯೋ ಹೋಗಿಬಿಡಬಹುದು.

ಹಾಗಾದರೆ ಈ ಲ್ಯಾಪ್ ಟಾಪ್ ಕಳೆದು ಹೋದಾಗ ಏನು ಮಾಡಬೇಕು? ನಿಮ್ಮ ಇಡಬೇಕಾದ ಮುಂದಿನ ಹೆಜ್ಜೆಯ ಬಗ್ಗೆ ಮಾಹಿತಿ ಮುಂದಿನ ಪುಟದಲ್ಲಿದೆ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X