Subscribe to Gizbot

ಸದ್ಯದಲ್ಲೇ ಆಲ್ ಇನ್ ವನ್ ಎಚ್ ಪಿ ಕಂಪ್ಯೂಟರ್

Posted By: Staff

ಸದ್ಯದಲ್ಲೇ ಆಲ್ ಇನ್ ವನ್ ಎಚ್ ಪಿ ಕಂಪ್ಯೂಟರ್
ಜಗತ್ರಪಸಿದ್ಧ ಎಲೆಕ್ಟ್ರಾನಿಕ್ಸ್ ಕಂಪೆನಿ ಎಚ್ ಪಿ ಇದೀಗ " ಆಲ್ ಇನ್ ವನ್ " ಕಂಪ್ಯೂಟರ್ ಮಾರುಕಟ್ಟೆಗೆ ಬಿಡಲು ಸಜ್ಜಾಗುತ್ತಿದೆ. ಬರಲಿರುವ ಇ ಕಂಪ್ಯೂಟರ್ ಹೆಸರು ಎಚ್ ಪಿ ಕಾಂಪಾಕ್ 8200 ಈಲೈಟ್. ಇದು ಅತ್ಯಾಧುನಿಕವಾದ ಎಲ್ಲಾ ವಿಶೇಷತೆಗಳನ್ನು ಹೊಂದಿರುವ ವಿಶೇಷವಾದ ಕಂಪ್ಯೂಟರ್.

ಇದು, ನೋಡಲು ಮಾಮೂಲಿ ಕಂಪ್ಯೂಟರ್ ನಂತೆ ಕಂಡರೂ ಇದರಲ್ಲಿರುವ ಫೀಚರ್ಸ್ ಮಾಮೂಲಿಯಲ್ಲ. 2ನೇ ಜನರೇಶನ್ ಇಂಟೆಲ್ ಕೋರ್ ಪ್ರೊಸೆಸರ್ i7 – 2600 2.80 GHz ಹೊಂದಿರುವ ಇದು ಕ್ವಾಲಿಟಿ ಸೇವೆ ನೀಡಲು ಬದ್ಧವಾಗಿದೆ.

vPro ಸಪೋರ್ಟ್, ಬ್ರಿಲಿಯಂಟ್ ಸೆಕ್ಯುರಿಟಿ ಫೀಚರ್ಸ್, ಹಾಗೂ ಸುಪೀರಿಯರ್ ಪಿಸಿಗೆ ಇರಬೇಕಾದ ಎಲ್ಲವೂ ಇದೆ. ಇದಲ್ಲದೇ ಸಾಕಷ್ಟು ವಿಶಾಲವಾದ 23 ಇಂಚ್ ಸ್ಕ್ರೀನ್, HD ಸಪೋರ್ಟ್ ಇದರಲ್ಲಿದೆ. HD WLED LCD ಮಾನಿಟರ್, 1920 X 1080 ಪಿಕ್ಸೆಲ್ ರೆಸೊಲ್ಯೂಷನ್, 8 GB RAM ಇದ್ದು ಒಳ್ಳೆಯ ಕಾರ್ಯಕ್ಷಮತೆ ಇದೆ.

ಅತಿವೇಗದ ಡಾಟಾ ಪ್ರೊಸೆಸಿಂಗ್, 160 GB ಹಾರ್ಡ್ ಡಿಸ್ಕ್ ಕೆಪಾಸಿಟಿ, HD ಗ್ರಾಫಿಕ್ಸ್ 3000, 1.3 ಮೆಗಾ ಪಿಕ್ಸೆಲ್ ವೆಬ್ ಕ್ಯಾಮೆರಾ, 6 USB ಪೋರ್ಟ್ಸ್ 2.0 ಆವೃತ್ತಿ, ಹೊರ ಸ್ಪೀಕರ್ ಜಾಕ್ಸ್, ಕಾರ್ಡ್ ರೀಡರ್, ಮಿನಿ PCIe x ಸ್ಲಾಟ್, vPro ಸಹಕಾರ, ವೈ-ಫೈ ಎಲ್ಲವೂ ಇದೆ.

ಅತ್ಯಾಧುನಿಕವಾದ ಈ ಹೊಸ ಎಚ್ ಪಿ ಕಾಂಪಾಕ್ 8200 ಈಲೈಟ್ ಬೆಲೆ ರು. 45,644. ಅಬ್ಬಾ! ಎನ್ನುವಷ್ಟು ಫೀಚರ್ಸ್ ಇರುವ ಈ ಕಂಪ್ಯೂಟರ್ ಕೊಂಡರೆ ಆಹಾ..! ಎನ್ನುವ ಶಬ್ಧ ತನ್ನಿಂದ ತಾನೇ ಬಾಯಲ್ಲಿ ಬರುವಂತಿದೆ ಈ ಕಂಫ್ಯೂಟರ್...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot