ನಿಮ್ಮ ಗ್ಯಾಜೆಟ್ಸ್ ಗಳು ರೋಗಾಣುರಹಿತವಾಗಿ ಇರಲಿ

Posted By: Staff

ನಿಮ್ಮ ಗ್ಯಾಜೆಟ್ಸ್ ಗಳು ರೋಗಾಣುರಹಿತವಾಗಿ ಇರಲಿ
ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವ ವಸ್ತು ಗ್ಯಾಜೆಟ್ಸ್ ಗಳು. ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ಸ್, ಕ್ಯಾಮೆರಾ ಹೀಗೇ ಸಾಲು ಸಾಲು ಉತ್ಪನ್ನಗಳು ಎಲ್ಲಾ ವರ್ಗದ ಜನರಿಂದ ಅವರವರ ಅಗತ್ಯ ಹಾಗೂ ಬಜೆಟ್ ಗೆ ತಕ್ಕಂತೆ ನಾನಾ ರೀತಿಯಲ್ಲಿ ಉಪಯೋಗಿಸಲ್ಪಡುತ್ತಿವೆ.

ಅದರಲ್ಲೂ ಮೊಬೈಲ್ ಹಾಗು ಕಂಪ್ಯೂಟರ್ ಗಳಂತೂ ವಿಶ್ವವ್ಯಾಪಿಯಾಗಿ ಪ್ರತಿಯೊಬ್ಬರ ಆಫೀಸ್, ಮನೆ-ಮನಸ್ಸನ್ನು ಈಗಾಗಲೇ ಆಕ್ರಮಿಸಿಬಿಟ್ಟಿವೆ.

ಎರಡರಲ್ಲೂ ಇರುವ ಸಾಮಾನ್ಯ ಫೀಚರ್ಸ್ ಎಂದರೆ ಹೊರಕವಚ ಹಾಗೂ ಕೀ ಬೋರ್ಡ್. ಪ್ರತಿಯೊಬ್ಬರೂ ಸಾಕಷ್ಟು ಹೊತ್ತು ಇವುಗಳ ಸಂಗಾತಿಯಾಗಿರಬೇಕಾಗಿರುವುದು ಈ ಕಾಲದಲ್ಲಿ ಅನಿವಾರ್ಯವೂ, ಅಗತ್ಯವೂ ಆಗಿದೆ.

ಆರೋಗ್ಯವಂತರಾಗಿರಲು ಎಲ್ಲರೂ ಕಾಣುವ ಕನಸಿಗೆ ಕಲ್ಲೆನ್ನೆತ್ತಿ ಹಾಕುತ್ತಿವೆ ಈ ಕೀಬೋರ್ಡ್ ಹಾಗೂ ಹೊರಕವಚಗಳು. ಏಕೆಂದರೆ ಅವುಗಳಲ್ಲಿ ಮನೆಮಾಡಿವೆ ಹೇರಳವಾದ ರೋಗಾಣುಗಳು. ಕಾಲನ ಕಾಣದ ಕೈ ಜೀವನದಲ್ಲಿ ಸಾಕಷ್ಟು ಆಟವಾಡುವಂತೆ ಈ ಸಾಧನಗಳಲ್ಲಿ ಅಡಗಿಕೊಂಡಿರುವ ರೋಗಾಣುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಮೂಲಕ ನಮ್ಮ ಆರೋಗ್ಯದ ಮೇಲೆ ಬಹಳಷ್ಡು ದುಷ್ಪರಿಣಾಮ ಉಂಟುಮಾಡುತ್ತವೆ.

ಇದಕ್ಕೆಲ್ಲ ನಾವು ಪರಿಹಾರ ಕಂಡುಕೊಳ್ಳದಿದ್ದರೆ ಹೇಗೆ? ದುಡಿದಿದ್ದನ್ನೆಲ್ಲ ಆಸ್ಪತ್ರೆಗೇ ಸುರಿಯುವಂತಾದರೆ ಊಟಕ್ಕೇನು ಮಾಡುವುದು? ಹಾಗಾಗಿ ಈ ಉಪಕರಣಗಳಲ್ಲಿರಿಬಹುದಾದ ಸೂಕ್ಷ್ಮ ರೋಗಾಣುಗಳು, ಅವುಗಳಿಂದ ತಗಲಬಹುದಾದ ಸೋಂಕು ಇವುಗಳ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದುದು ಅಗತ್ಯ.

ಈ ಹಾನಿಕಾರಕ ಫಂಗಸ್, ಪಾಚಿ ಹಾಗೂ ಬ್ಯಾಕ್ಟೀರಿಯಾಗಳು ನಮಗೆ ಸಾಕಷ್ಟು ಹಾನಿ ಉಂಟುಮಾಡುವುದರಿಂದ ಅವುಗಳ ವಿರುದ್ಧ ನಾವು ರಕ್ಷಣೆಪಡೆಯಬೇಕಾದುದು ಅತ್ಯವಶ್ಯ.

ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು, ಪರಿಹಾರದ ದಾರಿಗಳು ಇದೀಗ ಗೋಚರಿಸತೊಡಗಿವೆ. ಅವುಗಳ ಕುರಿತು ತಿಳಿಯಲು ಮುಂದಿನ ಪುಟ ನೋಡಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot