ಶೀಘ್ರದಲ್ಲಿ ಮಾರುಕಟ್ಟೆಗೆ ರೋಗಾಣುರಹಿತ ಗ್ಯಾಜೆಟ್ಸ್ ಗಳು

Posted By: Staff

ಶೀಘ್ರದಲ್ಲಿ ಮಾರುಕಟ್ಟೆಗೆ ರೋಗಾಣುರಹಿತ ಗ್ಯಾಜೆಟ್ಸ್ ಗಳು
ಅದರಲ್ಲಿ ಒಂದು ಅಮೇರಿಕಾದಲ್ಲಿ ಇದೀಗ ಚಾಲ್ತಿಗೆ ಬಂದಿರುವ ಉನ್ನತ ತಂತ್ರಜ್ಞಾನದ ಕೀಬೋರ್ಡ್. ಇದರಲ್ಲಿ ಸಿಲಿಕಾನ್ ಶೀಟ್ ನಿಂದ ಮಾಡಿದ ಕೀ ಬೋರ್ಡ್ ಪ್ರೊಟೆಕ್ಟರ್ ಇದ್ದು ಇದು ತೀರಾ ತೆಳುವಾಗಿದೆ. ಹಾಗಾಗಿ ಇದನ್ನು ಉಪಯೋಗಿಸಿ, ಟಚ್ ಮಾಡಿ ಮಾಡಬಹುದಾದ ಎಲ್ಲಾ ಕಾರ್ಯಗಳನ್ನೂ ಮಾಡಬಹುದು ಹಾಗೂ ರೋಗಾಣುಗಳು ಒಳ ಪ್ರವೇಶಿಸುವುದನ್ನೂ ತಡೆಯಬಹುದು.

ಆಗಾಗ ಇದನ್ನು ಡಿಶ್ ಪ್ಯಾನ್ ನಲ್ಲಿ ತೊಳೆದು ಒಣಗಿಸಿ ಮತ್ತೆ ಉಪಯೋಗಿಸಬಹುದು. ಅಮೇರಿಕಾದ ಗ್ರೀನ್ ಓನಿಯನ್ಸ್ ಸಪ್ಲೈ ಮತ್ತು ಅಮೇಜಾನ್ ರಿಟೇಲರ್ಸ್ ಗಳಲ್ಲಿ ಸದ್ಯ ಇವು ಲಭ್ಯವಿದೆ. ಹೇಗಿದೆ ನೋಡಿ ಚಮತ್ಕಾರ! ಆರೋಗ್ಯದ ಕಾಳಜಿಗೂ ಸೈ, ರೋಗಾಣುಗಳ ವಿರುದ್ಧ ರಕ್ಷಣೆಗೂ ಜೈ!


ಇಷ್ಟೇ ಅಲ್ಲ, ದೊರೆತಿರುವ ಮಾಹಿತಿಯ ಪ್ರಕಾರ ಇನ್ನೂ ಸಾಕಷ್ಟು ಪರಿಹಾರ ಕ್ರಮಗಳಿವೆ. ಹೀಗೊಂದು ಕಂಪೆನಿ "ಪ್ರಪಂಚದ ಪ್ರಪ್ರಥಮ ಡಿಶ್ ವಾಶರ್ ಸೇಫ್ ಗ್ಯಾಜೆಟ್ಸ್" ಕಂಡುಹಿಡಿದಿರುವುದಾಗಿ ಹೇಳಿಕೊಂಡಿದೆ. ಕೊಳೆಯಾದ ಉಪಕರಣಗಳನ್ನು ಕಂಪೆನಿಯ ಸೂಚನೆಯನ್ನನುಸರಿಸಿ ಡಿಶ್ ವಾಶರ್ ಗೆ ಹಾಕಿ ತೊಳೆದರಾಯಿತು. ಕೆಲವೊಂದು ಸಾಧನಗಳು ಪ್ಲಾಸ್ಟಿಕ್ ಮೂಲದ ಆಂಟಿಮೈಕ್ರೋಬಯಲ್ ಸುರಕ್ಷೆ ಹೊಂದಿವೆ.

ಅದು ಮಾರುಕಟ್ಟೆಗೆ ಬಂದರೆ 'ಕಂಪ್ಯೂಟರ್ ಮುಟ್ಟಿ ಕೈತೊಳೆಯಬೇಕಾದ' ಅಗತ್ಯವಿರುವುದಿಲ್ಲ. ಈ ಕಂಪೆನಿಯು ಡಿಶ್ ವಾಶರ್ ಸೇಫ್ ಕೀಬೋರ್ಡ್, ಮೌಸ್, ಸೆಲ್ ಫೋನ್, ಮತ್ತು ಟಿವಿ ರಿಮೋಟ್ ಕಂಟ್ರೋಲ್ ಎಲ್ಲವನ್ನೂ ತಯಾರಿಸಲಿದೆಯಂತೆ. ನಿಜವಾಗಿಯೂ ಸಂತೋಷದ ಸಮಾಚಾರ!

ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಂಡುಹಿಡಿಯಲಾಗಿದೆ "ಸೈಬರ್ ಕ್ಲೀನ್" ಎಂಬ ಹಳದಿ ಬಣ್ಣದ ಪೌಚ್ ಅಥವಾ ಕಪ್. ತೊಳೆಯಬೇಕಾಗಿರುವ ಸಾದನದ ಮೇಲೆ ಇದನ್ನು ಹಚ್ಚಿ ಸಲ್ಪಹೊತ್ತಿನ ನಂತರ ಒರೆಸಿದರಾಯಿತು. ಉಪಕರಣ ಫಳಫಳ ಹಾಗೂ ರೋಗಾಣುರಹಿತ!

ಹೀಗಾಗಿ ಸದ್ಯಕ್ಕೆ ಇಂತಹ ಉಪಕರಣಗಳ ಉಪಯೋಗವನ್ನು ಮಾಡಿದ ಮೇಲೆ ಸೋಪಿನಿಂದ ಕೈತೊಳೆಯುವ ಅಭ್ಯಾಸಮಾಡಿಕೊಂಡಿರುವ ನೀವು ಮುಂದೆ ಅದನ್ನು ಬದಲಾಯಿಸಿ ಉಪಕರಣವನ್ನೇ ತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಅಷ್ಟೇ!

ನಮ್ಮ ಕೈ ಮಾತ್ರ ನಾವು ತೊಳೆಯಯಬಹುದು, ಎಲ್ಲರ ಕೈಯನ್ನಲ್ಲವಲ್ಲ! ಹಾಗಾಗಿ ಈ ಸುಧಾರಿತ ತಂತ್ರಜ್ಞಾನ ಆದಷ್ಟು ಬೇಗ ಭಾರತದ ಮಾರುಕಟ್ಟೆಗೆ ಬರಲಿ ಎಂಬುದು ಎಲ್ಲರ ಹಾರೈಕೆಯಾಗಬೇಕು...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot