Subscribe to Gizbot

ಇಲ್ಲೆರಡು ಟ್ಯಾಬ್ಲೆಟ್ ಗಳಿವೆ; ಹೋಲಿಕೆ ಸಾಕಷ್ಟಿದೆ

Posted By: Super

ಇಲ್ಲೆರಡು ಟ್ಯಾಬ್ಲೆಟ್ ಗಳಿವೆ; ಹೋಲಿಕೆ ಸಾಕಷ್ಟಿದೆ
ಪ್ರಪಂಚದೆಲ್ಲೆಡೆ ಈಗ ಮೊಬೈಲ್ ನೊಂದಿದೆ ಸ್ಪರ್ಧೆಗೆ ಬಿದ್ದಿದೆ- ಕಂಪ್ಯೂಟರ್, ಟ್ಯಾಬ್ಲೆಟ್, ಲ್ಯಾಪ್ ಟಾಪ್. ಹೊಸ ಹೊಸ ಕಂಪೆನಿಗಳ ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಗ್ರಾಹಕರಿಗೆ ಆಯ್ಕೆಯಲ್ಲಿ ಸಂತಸ ಹಾಗೂ ಗೊಂದಲ ಒಟ್ಟಿಗೆ ಉಂಡುಮಾಡುತ್ತಿವೆ.

ಇದೀಗ ಮಾರುಕಟ್ಟೆಯಲ್ಲಿರುವ ಹೊಸ ಟ್ಯಾಬ್ಲೆಟ್ ಗಳೆರಡು ಸ್ಪರ್ಧೆಗೆ ಬೀಳಲಿವೆ. ಅವುಗಳಲ್ಲಿ ಒಂದು ಈಗಾಗಲೇ ಇರುವ ರಿಲಯನ್ಸ್ 3G ಟ್ಯಾಬ್ ಹಾಗೂ ಇನ್ನೊಂದು ಬರಲಿರುವ ಎಮ್ ಎಸ್ ಐ ಎಂಜಾಯ್ 7.

ಎರಡರಲ್ಲೂ ಆಂಡ್ರಾಯ್ಡ್ 2.3 ಆವೃತ್ತಿಯ OS ಇದೆ. ಈ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಪ್ಲಾಟ್ ಫಾರ್ಮ್ ಒನ್ ಟಚ್ ವರ್ಡ್ ಸೆಲೆಕ್ಷನ್ ಜೊತೆ ಕಾಪಿ & ಪೇಸ್ಟ್ ಆಯ್ಕೆ ಇದೆ.

ಎರಡರಲ್ಲೂ, 7 ಇಂಚುಗಳ ಒಂದೇ ಅಳತೆಯ TFT-LCD ಮಲ್ಟಿ ಟಚ್ ಸ್ಕ್ರೀನ್ 800 x 480 ಪಿಕ್ಸೆಲ್ ಇರುವುದು ಆಶ್ಚರ್ಯಕರವಾಗಿದೆ. ರಿಲಯನ್ಸ್ ಹಾಗೂ ಎಂಜಾಯ್ ನಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ರಿಲಾಯನ್ಸ್ ನಲ್ಲಿರುವ 0.3 ಫ್ರಂಟ್ ಕ್ಯಾಮೆರಾ ವಿಡಿಯೋ ಕಾಲಿಂಗ ಹಾಗೂ ಚಾಟಿಂಗ್ ಮಾಡಲು ಸಹಾಯಕವಾಗಿದ್ದರೆ ಎಂಜಾಯ್ ನಲ್ಲಿ ಅದು ಇರುವ ಬಗ್ಗೆ ಮಾಹಿತಿ ಸದ್ಯಕ್ಕಿಲ್ಲ.

ಮ್ಯೂಸಿಕ್ & ವಿಡಿಯೋ ಫಿಚರ್ಸ್ ನಲ್ಲಿ ಆಡಿಯೋ ಪ್ಲೇಯರ್, 3.5 mm ಆಡಿಯೋ ಜಾಕ್, ವಿಡಿಯೋ ಪ್ಲೇಯರ್ ಎರಡಲ್ಲಿಯೂ ಇದೆ. ವೈ-ಫೈ, ಬ್ಲೂ ಟೂಥ್, USB ಪೋರ್ಟ್, ವೆಬ್ ಬ್ರೌಸಿಂಗ್ ಎಲ್ಲವೂ ಎರಡರಲ್ಲಿಯೂ ಇದೆ.

ಎಂಜಾಯ್ 4700 mAh ಬ್ಯಾಟರಿ ಬ್ಯಾಕಪ್ ಹೊಂದಿದ್ದರೆ ರಿಲಯನ್ಸ್ 3400mAh ಹೊಂದಿದೆ. ಎಂಜಾಯ್ ನಲ್ಲಿ ವಿಸ್ತರಿಸಬಹುದಾದ 64 GB ಮೆಮೊರಿ ಇದೆ. ಆದರೆ ರಿಲಯನ್ಸ್ ನಲ್ಲಿ 32 GB ಮೆಮೊರಿ ಇದೆ. ಎಂಜಾಯ್ 395 ಗ್ರಾಮ್ ತೂಕವಿದ್ದರೆ ರಿಲಯನ್ಸ್ 389 ತೂಕವಿದ್ದು ಎರಡರಲ್ಲೂ ಸಾಕಷ್ಟು ಸಾಮ್ಯತೆ ಇದೆ.

ಇನ್ನು ಬೆಲೆಯ ವಿಷಯಕ್ಕೆ ಬಂದರೆ ರಿಲಾಯನ್ಸ್ ಬೆಲೆ ರು. 12,999 ಹಾಗೂ ಎಂಜಾಯ್ ಬೆಲೆ ರು. ಸುಮಾರು 14,999 ಆಗಬಹುದೆಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot