ಹೊಸ ಚೈತನ್ಯ ನೀಡಲಿದೆ ಡೆಲ್ ಇನ್ಸ್ ಪಿರೇಶನ್

ಈ ಹೊಸ ಲ್ಯಾಪ್ ಟಾಪ್, 14 ಹಾಗೂ 15 ಇಂಚುಗಳ ಸ್ಕ್ರೀನ್ ಡಿಸ್ ಪ್ಲೇ ಹೊಂದಿದ್ದು ಆಯ್ಕೆಗೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಕಟಿಂಗ್ ಎಡ್ಜ್ ತಂತ್ರಜ್ಞಾನ ಹಾಗೂ ಕ್ವಾಲಿಟಿ ಡಿಸ್ ಪ್ಲೇ ಹೊಂದಿರುವ ಇದರ ಬ್ಯಾಟರಿ ಕೂಡ ಸಾಕಷ್ಟು ದಕ್ಷತೆ ಹೊಂದಿದೆ. ಬಹಳಷ್ಟು ವಿಧದ ಅಪ್ಲಿಕೇಶನ್ ಗಳನ್ನು ಹೊಂದಿರುವ ಇದರಲ್ಲಿ ಹೈ ಡೆಫನಿಷನ್ ಡಿಸ್ ಪ್ಲೇ ಇದೆ.
ಇದರಲ್ಲಿ 4GB ಮೆಮೊರಿ, ಪ್ರೀಮಿಯಮ್ ಹೋಮ್ ವಿಂಡೋಸ್ 7 , HD ಸಹಕಾರ, ಗ್ಯಾಲರಿಗಳಾದ ಮ್ಯೂಸಿಕ್, ವಿಡಿಯೋಸ್, ಚಿತ್ರಗಳು, ಸೋಷಿಯಲ್ ನೆಟ್ ವರ್ಕಿಂಗ್ ಎಲ್ಲಾ ಇವೆ. 6 ಸೆಲ್ ಬ್ಯಾಟರಿ, ಬ್ಲೂ ರೇ 3D ಪ್ಲೇ ಬ್ಯಾಕ್ ಹೊಂದಿರುವ ಇದು ಸಾಕಷ್ಟು ಆಕರ್ಷಕವಾಗಿರುವುದರ ಜೊತೆಗೆ ಅತ್ಯಾಧುನಿಕವಾಗಿಯೂ ಇದೆ.
ಎಸ್ ಎಮ್ ಬಿ ಯ ಜನರಲ್ ಮ್ಯಾನೇಜರ್ ಹಾಗೂ ಕಾರ್ಯಕಾರಿ ನಿರ್ದೇಶಕ ಮಹೇಶ್ ಭಲ್ಲಾ ನೀಡಿರುವ ಹೇಳಿಕೆಯ ಪ್ರಕಾರ, ಇದೊಂದು ಲೇಟೆಸ್ಟ್ ತಂತ್ರಜ್ಞಾನ ಹಾಗೂ ಗ್ರಾಹಕರ ಜೀವನಶೈಲಿಗೆ ಒಗ್ಗುವಂತಹ ವಿಶೇಷ ಲ್ಯಾಪ್ ಟ್ಯಾಪ್. ಗ್ರಾಫಿಕ್ಸ್ ಹಾಗೂ ಬಣ್ಣಗಳು ಕೂಡ ವಿಶಿಷ್ಟವಾಗಿವೆ.
ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಹೊಸ ಇನ್ಸ್ ಪಿರೇಶನ್ ಬೆಲೆ ಹೀಗಿದೆ. 14 ಇಂಚಿನ ಲ್ಯಾಪ್ ಟಾಪ್ ಬೆಲೆ ರು. 34,000 ಹಾಗೂ 15 ಇಂಚಿನದರ ಬೆಲೆ ರು. 35,000. ಈಸಿ ಚೇಂಜ್ ಲಿಡ್ಸ್ ಬೆಲೆ ರು. 1,999 ರಿಂದ ಪ್ರಾರಂಭವಾಗಲಿದೆ.


Click it and Unblock the Notifications








