ನಿಮ್ ಹಾರ್ಟ್ ಬೀಟ್ಸ್ ಹೆಚ್ಚಿಸಲಿರುವ ಟ್ಯಾಬ್ಲೆಟ್ಸ್

Posted By: Staff

ನಿಮ್ ಹಾರ್ಟ್ ಬೀಟ್ಸ್ ಹೆಚ್ಚಿಸಲಿರುವ ಟ್ಯಾಬ್ಲೆಟ್ಸ್
ಏರ್ ಟೆಲ್ ಕಂಪೆನಿ ಜಗತ್ತಿನ ಜನಪ್ರಿಯ ಕಂಪೆನಿಗಳಲ್ಲೊಂದು. ಇದರಿಂದ ಹೊರಬರುವ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಜಗತ್ತಿನೆಲ್ಲೆಡೆ ಸಾಕಷ್ಟು ಬೇಡಿಕೆಯಿದೆ. ಇದು ಮೊಬೈಲ್ ಹಾಗೂ ಕಂಪ್ಯೂಟರ್ ಕ್ಷೇತ್ರದಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ ಎಲ್ ಎ ಸಿ ಎಸ್ ಸಹ ಪ್ರಖ್ಯಾತ ಕಂಪೆನಿ.

ಏರ್ ಟೆಲ್ ಕಂಪೆನಿಯ ಬೀಟೆಲ್ ಮ್ಯಾಜಿಕ್ ಮತ್ತು ಎಲ್ ಎ ಸಿ ಎಸ್ ಟ್ಯಾಬ್ಲೆಟ್ಸ್ ಗಳು ಇದೀಗ ಬಿಡುಗಡೆಯಾಗಿವೆ. ಎರಡರಲ್ಲೂ ಅಂತರಾಷ್ಟ್ರೀಯ ಮಟ್ಟದ ವಿಶೇಷತೆಗಳು ಹಾಗೂ ದರಗಳು ಗ್ರಾಹಕರಿಗೆ ಲಭ್ಯವಿದೆ. ಆಂಡ್ರಾಯ್ಡ್ ಫ್ರೋಯೋ 2.2 ಫ್ರೋಯೋ OS ಹೊಂದಿರುವ ಇವು ಉತ್ತಮ ಕಾರ್ಯಕ್ಷಮತೆ ಹೊಂದಿವೆ. ಎಲ್ ಎ ಸಿ ಎಸ್, 7 ಇಂಚಿನ (pepper M74V) ಟ್ಯಾಬ್ ಆಗಿದೆ.

ಎರಡರಲ್ಲೂ ಒಂದೇ ಸೈಜಿನ ಸ್ಕ್ರೀನ್ ಇರುವುದು ಇನ್ನೊಂದು ವಿಶೇಷ. ಬೀಟೆಲ್ ಮ್ಯಾಜಿಕ್ ನಲ್ಲಿ ಎರಡು ಕ್ಯಾಮೆರಾಗಳಿವೆ. ಒಂದು ಫ್ರಂಟ್ VGA ಕ್ಯಾಮೆರಾ ಹಾಗೂ ಮತ್ತೊಂದು ರೇರ್ ಕ್ಯಾಮೆರಾ. ಅದು 2 ಮೆಗಾ ಪಿಕ್ಸೆಲ್ ಆಗಿದ್ದು ಚಿತ್ರಗಳನ್ನು ಕ್ಯಾಪ್ಚರ್ ಮಾಡುತ್ತದೆ. ಇದರ ಮೂಲಕ ವಿಡಿಯೋ ಕಾನ್ಫರೆನ್ಸ್ ಮತ್ತು ಚಾಟಿಂಗ್ ಮಾಡಬಹುದು.

ಇನ್ನು ಕನೆಕ್ಟಿವಿಟಿಯಲ್ಲಿ ಡಾಟಾಗೆ ಸಂಬಂಧಿಸಿದ USB ಪೋರ್ಟ್, ವೈ-ಫೈ, ಬ್ಲೂ ಟೂಥ್ ಇದೆ. ಇದರಿಂದ ಬಹು ಸುಲಭವಾಗಿ ಡಾಟಾ ಟ್ರಾನ್ಸ್ ಫರ್ ಮಾಡುವುದರ ಜೊತೆಗೆ ಮನರಂಜನೆಗೂ ಸಾಕಷ್ಟು ಅವಕಾಶವಿದೆ. 8 GB ಆಂತರಿಕ ಮೆಮೊರಿ ಇರುವುದರ ಜೊತೆಗೆ ವಿಸ್ತರಿಸಬಲ್ಲ 32 GB ಇದೆ. ಎಲ್ ಎ ಸಿ ಎಸ್ ನಲ್ಲಿ 4 GB ಆಂತರಿಕ ಮೆಮೊರಿಯ ಜೊತೆ 32 GB ಗೆ ವಿಸ್ತರಿಸಬಲ್ಲ ಮೆಮೊರಿ ಇದೆ. ಇನ್ನು ಮೀಡಿಯಾ ಪ್ಲೇಯರ್, ಆಡಿಯೋ ಪ್ಲೇಯರ್, ಒಳ್ಳೆಯ ಬ್ಯಾಟರಿ ಬ್ಯಾಕಪ್ ಎರಡರಲ್ಲೂ ಇದೆ.

ಹೊರಗೆ ಹೋಗುವಾಗ ತೆಗೆದುಕೊಂಡು ಹೋಗಲೂ ಕೂಡ ಬಲು ಸುಲಭ. ಅತಿ ಮುಖ್ಯವಾದ ಬೆಲೆಯ ವಿಷಯಕ್ಕೆ ಬಂದರೆ, ಬೀಟೆಲ್ ಮ್ಯಾಜಿಕ್ ಬೆಲೆ ರು. 9,999 ಹಾಗೂ ಎಲ್ ಎ ಸಿ ಎಸ್ ಬೆಲೆ ರು. 6,500. ವಿಶೇಷತೆಗಳು ಹಾಗೂ ಬೆಲೆ ತಿಳಿದ ಮೇಲೆ ಇನ್ನು ಆಯ್ಕೆ ನಿಮ್ಮದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot