ಹೋಲಿಕೆ: ಆಸಸ್ ಈ ಪ್ಯಾಡ್, ಎಚ್ ಟಿಸಿ ಆ ಪ್ಯಾಡ್

By Super
|
ಹೋಲಿಕೆ: ಆಸಸ್ ಈ ಪ್ಯಾಡ್, ಎಚ್ ಟಿಸಿ ಆ ಪ್ಯಾಡ್
ಮುಗಿಯದ ಧಾರವಾಹಿಗಳಂತೆ ಹಲವು ವಿನೂತನ ಡಿಜಿಟಲ್ ಸಾಧನಗಳು ಮಾರುಕಟ್ಟೆಗೆ ಆಗಮಿಸುತ್ತಿವೆ. ಅದರಲ್ಲಿ Asus EE Pad ಮತ್ತು HTC Flyer ಹೆಚ್ಚು ಜನಪ್ರಿಯವಾಗಿವೆ. ಆ ಪ್ಯಾಡಿಗೂ ಈ ಪ್ಯಾಡಿಗೂ ಏನೆಲ್ಲ ವ್ಯತ್ಯಾಸಗಳಿವೆ? ಯಾವೆಲ್ಲ ಸಾಮ್ಯತೆ? ಭಿನ್ನತೆಗಳಿವೆ? ಅಂತ ಹುಡುಕಿದಾಗ ಸಿಕ್ಕಿದ್ದು ಈ ಸೀರುಂಡೆ.

ಇವೆರಡು ಸ್ಟೈಲ್, ಫೀಚರ್ ವಿಷ್ಯಗಳಲ್ಲಿ ಒಂದಕ್ಕೊಂದು ಪೈಪೋಟಿ ನೀಡುವಂತ್ತಿದೆ. ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಇದೇ ಕಾರಣಕ್ಕೆ ಇವೆರಡು ಜನಪ್ರಿಯತೆ ಗಳಿಸಿದೆ ಎಂದೆನಿಸಿತ್ತದೆ. ಇವೆರಡು ಟ್ಯಾಬ್ಲೆಟುಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಸಹಜವಾಗಿ ಭಿನ್ನತೆಗಳೂ ಇವೆ.

* ಆಸಸ್ ಇಇ ಪ್ಯಾಡಿನಲ್ಲಿ ಡಕ್ ಫೆಸಿಲಿಟಿ ಇದೆ. ಅಂದ್ರೆ ಇದಕ್ಕೆ ನಿಮಗೆ ಬೇಕಾದಾಗ ಕೀಬೋರ್ಡ್ ಜೋಡಿಸಬಹುದು. ಬೇಡವೆಂದರೆ ತೆಗೆದು ಪಕ್ಕಕ್ಕಿಡಬಹುದು. ಆದರೆ ಎಚ್ ಟಿಸಿ ಫ್ಲೈಯರ್ ನಲ್ಲಿ ಹೆಚ್ಚುವರಿಯಾಗಿ ಡಿಜಿಟಲ್ ಪೆನ್ ಇದೆ. ಈ ಪೆನ್ನಿನಲ್ಲಿ ಟ್ಯಾಬ್ಲೆಟ್ ಪರದೆ ಮೇಲೆ ಸುಲಭವಾಗಿ ಕಾರ್ಯನಿರ್ವಹಿಸಬಹುದಾಗಿದೆ.

* ಮೊಬೈಲ್ ಕಂಪ್ಯೂಟರಿನಂತೆ ಇವೆರಡು ಟ್ಯಾಬ್ಲೆಟುಗಳ ಇನ್ ಪುಟ್ ಸಾಧನಗಳು ಒಂದೇ ರೀತಿ ಇವೆ. ಎರಡೂ ಸಾಧನಗಳ ಇನ್ ಪುಟ್ ಗಳು ಗ್ರಾಹಕರಿಗೆ ಕಂಫರ್ಟ್ ಅಪರೇಟಿಂಗ್ ಗೆ ಅನುವು ಮಾಡಿಕೊಡುತ್ತದೆ.

* ಗಾತ್ರದ ವಿಷ್ಯಕ್ಕೆ ಬಂದ್ರೆ ಇವೆರಡರ ನಡುವೆ ಕೆಲವು ಇಂಚುಗಳ ವ್ಯತ್ಯಾಸವಿದೆ. ಅಂದ್ರೆ ಎಚ್ ಟಿಸಿ ಫೈಯರ್ 7 ಇಂಚಿನ ಡಿಸ್ ಪ್ಲೇ ಹೊಂದಿದ್ದರೆ ಆಸಸ್ ಇಇ ಪ್ಯಾಡ್ 10.1 ಇಂಚಿನ ಡಿಸ್ ಪ್ಲೇ ಹೊಂದಿದೆ.

* ಇವೆರಡು ಟ್ಯಾಬ್ಲೆಟುಗಳು 5 ಮೆಗಾ ಫಿಕ್ಸೆಲ್ ಕ್ಯಾಮರಾ ಹೊಂದಿವೆ. ಎರಡರ ಕ್ಯಾಮರಾ ಗುಣಮಟ್ಟ ಅತ್ಯುತ್ತಮವಾಗಿದೆ. ಆದರೆ ಮುಂಭಾಗದಲ್ಲಿರುವ ಕ್ಯಾಮರಾದಲ್ಲಿ ತುಸು ಭಿನ್ನತೆಯಿದೆ. ಎಚ್ ಟಿಸಿಯಲ್ಲಿ 1.3 ಎಂಪಿ ಕ್ಯಾಮರಾ, ಆಸಸ್ ನಲ್ಲಿ 1.2 ಎಂಪಿ ಕ್ಯಾಮರಾವಿದೆ. ವಿಡಿಯೋ ಚಾಟಿಂಗ್ ಗುಣಮಟ್ಟವೂ ಅನನ್ಯವಾಗಿದೆ.

* ಅಪರೇಟಿಂಗ್ ಸಿಸ್ಟಮ್: ಎಚ್ ಟಿಸಿ ಜಿಂಜರ್ ಬ್ರೀಡ್ ಮತ್ತು ಆಸಸ್ ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಗಳನ್ನು ಹೊಂದಿದೆ.

* ಉಳಿದಂತೆ ಇವೆರಡರಲ್ಲೂ ಬ್ಲೂಟೂಥ್, ವೈಫೈ, ಇತ್ಯಾದಿ ಫೀಚರುಗಳಿವೆ. ಇವೆರಡು 16 ಜಿಬು ಮೆಮೊರಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು ಇದನ್ನು ಮೆಮೊರಿ ಕಾರ್ಡ್ ಮೂಲಕ 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ.

* ದರದ ವಿಷ್ಯದಲ್ಲೂ ಇವೆರಡರ ನಡುವೆ ಕೊಂಚ ಭಿನ್ನತೆಯಿದೆ. ಆಸಸ್ ಇಇ ಪ್ಯಾಡ್ ದರ 28 ಸಾವಿರ ರು. ಮತ್ತು ಎಚ್ ಟಿಸಿ ಫೈಯರ್ ದರ ಸುಮಾರು 30 ಸಾವಿರ ರು. ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X