ಎರಡು ಡೆಲ್ ಲ್ಯಾಪ್ ಟಾಪ್: ಯಾವುದು ಡಲ್?

Posted By: Staff

ಎರಡು ಡೆಲ್ ಲ್ಯಾಪ್ ಟಾಪ್: ಯಾವುದು ಡಲ್?
ಮಕ್ಕಳಿಗೆ ಲಾಲಿಪಪ್ ಇಷ್ಟವಾಗುವಂತೆ ಹೆಚ್ಚಿನ ಜನರಿಗೆ ಡೆಲ್ ಲ್ಯಾಪ್ ಟಾಪ್ ಗಳು ಇಷ್ಟವಾಗುತ್ತವೆ. ಡೆಲ್ ಕುಟುಂಬದ ಎರಡು ಲ್ಯಾಪ್ ಟಾಪ್ ಗಳು ಇಲ್ಲಿವೆ. ಸಣ್ಣಗಿನ ವಿನ್ಯಾಸ, ಹೊಸ ಲುಕ್ಸ್, ಅತ್ಯಧಿಕ ಕಾರ್ಯಕ್ಷಮತೆ.. ಇವೆರಡರ ಸೌಂದರ್ಯ ಲಹರಿ ಮುಗಿಯುವುದೇ ಇಲ್ಲ.

ಕಂಪನಿಯ ಇತ್ತೀಚಿನ ಲ್ಯಾಪ್ ಆಪ್ ಗಳಾದ Dell Inspiron 13Z ಮತ್ತು Dell Inspiron 14R ಲ್ಯಾಪ್ ಟಾಪ್ ಗಳ ಹೋಲಿಕೆ ಇಲ್ಲಿದೆ. ಡೆಲ್ ಫ್ಯಾಮಿಲಿಯಿಂದ ಹೊರಬಂದ ಇವೆರಡು ಲ್ಯಾಪ್ ಟಾಪ್ ಗಳ ನಡುವೆ ಯಾವೆಲ್ಲ ವ್ಯತ್ಯಾಸಗಳಿವೆ, ಯಾವುದು ಡಲ್? ಯಾವುದು ಬುಲ್? .. ಇಲ್ಲಿದೆ ಉತ್ತರ.

* ಸಮರ್ಪಕ ಎಂಜಿನಿಯರಿಂಗ್ ಮತ್ತು ವಿನ್ಯಾಸದಿಂದ ಡೆಲ್ ಕುಟುಂಬದ ಈ ಎರಡೂ ಲ್ಯಾಪಿಗಳು ಇಷ್ಟವಾಗುತ್ತದೆ. ಇದರಲ್ಲಿ ಡೆಲ್ ಇನ್ಸಿಫಿರೇಷನ್ 14 ಆರ್ ಹಲವು ವಿಭಿನ್ನ ಗ್ಲೋಸಿ ಬಣ್ಣಗಳಿಂದ ದೊರಕುತ್ತದೆ. ಆದರೆ ಡೆಲ್ ಇನ್ಸಿಫಿರೇಷನ್ 13 ಝಡ್ ನಲ್ಲಿ ಈ ಬಣ್ಣದ ಮ್ಯಾಜಿಕ್ ಇಲ್ಲ.

* ಇವೆರಡು ಲ್ಯಾಪ್ ಟಾಪ್ ಗಳಲ್ಲಿ ಸಾಕಷ್ಟು ಸಮಾನತೆಗಳಿವೆ. 13 ಝಡ್ ಹಗುರವಾಗಿದ್ದು ಕೊಂಡೊಯ್ಯಲು ಸುಲಭ. ಅತ್ಯಧಿಕ ಡೆಫನಿಷನ್ ನ ಸ್ಕ್ರೀನ್ ಡಿಸ್ ಪ್ಲೇ ಇಷ್ಟವಾಗುತ್ತದೆ. ಚಾಟಿಂಗ್ ಮಾಡಲು ಅತ್ಯುತ್ತಮ ಗುಣಮಟ್ಟದ ವೆಬ್ ಕ್ಯಾಮ್ ಕೂಡ ಇದೆ. ಸೋಷಿಯಲ್ ನೆಟ್ ವರ್ಕಿಂಗ್ ಇದರಲ್ಲಿ ವಿನೂತನ ಅನುಭವ ನೀಡುತ್ತದೆ.

* 14ಆರ್ ಲ್ಯಾಪಿಯಲ್ಲಿರುವ ಆಕರ್ಷಕ ಫೀಚರ್ಸ್ ಗಳು ಗಮನ ಸೆಳೆಯುತ್ತವೆ. ವೆಬ್ ಕ್ಯಾಮ್ ಗಾಗಿ 1.3 ಮೆಗಾ ಫಿಕ್ಸೆಲ್ ಕ್ಯಾಮರಾ, ಸಾಮಾಜಿಕ ಜಾಲತಾಣ ಆಯ್ಕೆ, ಅತ್ಯುತ್ತಮ ಸಂಗ್ರಹ ಸಾಮರ್ಥ್ಯ, ಆಕರ್ಷಕ ಗ್ರಾಫಿಕ್ಸ್ ಬೆಂಬಲ ಸೇರಿದಂತೆ ಹಲವು ಫೀಚರುಗಳಿವೆ. ಜೊತೆಗೆ ಸುರಕ್ಷತೆಯ ಆನ್ ಲೈನ್ ಬ್ಯಾಕಪ್ ಮತ್ತು ಡೆಲ್ ಸಪೋರ್ಟ್ ಸೆಂಟರ್ ಇದೆ.

* ಇವೆರಡು ಲ್ಯಾಪಿಗು ಒಂದೇ ರೀತಿಯ ಅಪರೇಟಿಂಗ್ ಸಿಸ್ಟಮ್ ಮತ್ತು ಪ್ರೊಸೆಸರ್ ಹೊಂದಿವೆ. ಅಂದರೆ ಇವೆರಡೂ ಜಿನ್ಯೂನ್ ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಹೊಂದಿವೆ.

* RAM ಜಿಬಿ ಸಾಮರ್ಥ್ಯದಲ್ಲಿ ಕೊಂಚ ಭಿನ್ನತೆಯಿದೆ. ಅಂದ್ರೆ 14 ಆರ್ 6 ಜಿಬಿ 2 DIMM DDR3 1333Mhz ರಾಮ್ ಹೊಂದಿದ್ದರೆ, 13 ಝಡ್ ಲ್ಯಾಪಿ ನಾಲ್ಕು ಜಿಬಿಯ 1DIMM DDR3 1333Mhz ರಾಮ್ ಹೊಂದಿದೆ.

* ಇವೆರಡು ಲ್ಯಾಪ್ ಟಾಪ್ ಕೂಡ ಬ್ಲೂಟೂಥ್ ಮತ್ತು ವೈಫೈ ಸೌಲಭ್ಯದೊಂದಿಗೆ ಡೇಟಾ ಮ್ಯಾನೆಜ್ ಮೆಂಟ್ ಮತ್ತು ಡೇಟಾ ಟ್ರಾನ್ಸ್ ಫಾರ್ ಸೌಲಭ್ಯ ಹೊಂದಿವೆ. ಇವೆರಡು ಅತ್ಯುತ್ತಮ ಬಾಳಿಕೆಯ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಹೊಂದಿವೆ.

* ಕೊನೆಯದಾಗಿ ಮತ್ತು ಅತ್ಯಂತ ಪ್ರಮುಖವಾಗಿ ಇವೆರಡರ ದರದಲ್ಲಿ ಕೆಲವು ಸಾವಿರ ರು.ಗಳ ವ್ಯತ್ಯಾಸವಿದೆ. ಡೆಲ್ 13 ಝಡ್ ದರ 36,800 ರು. ಮತ್ತು 13ಝಡ್ ದರ 30, 500 ರು. ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot