Subscribe to Gizbot

ಹೊಸ ವರ್ಷಕ್ಕೆ ಎಲ್ ಜಿ ಸಿರೀಸ್ ಹೊಸ ಲ್ಯಾಪ್ ಟಾಪ್

Posted By: Super

ಹೊಸ ವರ್ಷಕ್ಕೆ ಎಲ್ ಜಿ ಸಿರೀಸ್ ಹೊಸ ಲ್ಯಾಪ್ ಟಾಪ್
ಸುಪ್ರಸಿದ್ಧ ಕಂಪೆನಿ ಎಲ್ ಜಿ ಇದೀಗ ಹೊಸ ಲ್ಯಾಪ್ ಟಾಪ್ ಸಿರೀಸನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡಲು ನಿರ್ಧರಿಸಿದೆ. ಬೃಹತ್ ಪ್ರಮಾಣದಲ್ಲಿ ಮಾರಾಟ ಹಾಗೂ ಯಶಸ್ಸು ಪಡೆಯಲು ಕಾರ್ಯತಂತ್ರ ರೂಪಿಸಿರುವ ಎಲ್ ಜಿ, ಕನಿಷ್ಟ ಶೇ. 15 ರಷ್ಟನ್ನಾದರೂ ಲಾಭ ಗಳಿಸಲು ಯೋಚಿಸಿದೆ. 2012ರೊಳಗೆ ರು. 1000 ಕೋಟಿ ಬಿಸಿನೆಸ್ ಮಾಡಲೇಬೇಕೆಂದು ಹಟತೊಟ್ಟು ಫೀಲ್ಡಿಗೆ ಇಳಿದಿದೆ.

ಸದ್ಯಕ್ಕೆ 3D ಡಿವೈಸ್ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿರುವ ಎಲ್ ಜಿ, ಸಾಕಷ್ಟು ವಿಶೇಷ ಫೀಚರ್ಸ್ ಗಳನ್ನು ಅದರಲ್ಲಿ ಅಳವಡಿಸಲು ನಿರ್ಧರಿಸಿದೆ. ಅದರಲ್ಲಿ ಹೆಚ್ಚಿನ ಪ್ರಾಧಾನ್ಯತೆ ಮನರಂಜನೆಗೆ ಮೀಸಲಾಗಿದೆ.

3D ಯೊಂದಿಗೆ ಹೈ ಡೆಫನಿಶನ್ LCD ಸ್ಕ್ರೀನ್ ಮತ್ತು ಡ್ಯುಯಲ್ ವೆಬ್ ಕ್ಯಾಮ್ ಕೂಡ ಪ್ರಮುಖ ಸ್ಥಾನ ಪಡೆಯಲಿದೆ. ಸಾಕಷ್ಟು ಹೆಚ್ಚು ತೆಳ್ಳಗಾಗಿ ಕಡಿಮೆ ತೂಕ ಹೊಂದಿರುವಂತೆ ರೂಪಿಸಲು ಯೋಜನೆ ಹಾಕಿಕೊಂಡಿದೆ. ಶೇ. 65 ರಷ್ಟು ಸ್ಲಿಮ್ ಹಾಗೂ ಶೇ. 25 ರಷ್ಟು ಲೈಟರ್ ಆಗಿ ಹೊಸ ಲ್ಯಾಪ್ ಟಾಪ್ ತಯಾರಿಕೆ ನಡೆಯಲಿದೆ.

ಹೈ ಪರ್ಫಾರಮನ್ಸ್ ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ ಹಾಗೂ ದೀರ್ಘ ಬಾಳೀಕೆ ಬರಲಿರುವ ಬ್ಯಾಟರಿ ಜೊತೆಗೆ 500 GB ಹಾರ್ಡ್ ಡಿಸ್ಕ್ ಕೂಡ ಇರಲಿದೆ. ಉತ್ತಮ ಕ್ವಾಲಿಟಿಯ ಕ್ಯಾಮೆರಾ ಇದಕ್ಕೆ ಜೊತೆಯಾಗಲಿರುವುದು ಇನ್ನೊಂದು ವಿಶೇಷ.

ಸಾಕಷ್ಟು ಆಧುನಿಕ ಹಾಗೂ ಸರಳ, ಸುಂದರ, 3D ಆಧಾರಿತ ಎಲ್ ಜಿ ಲೈಟರ್ ಲ್ಯಾಪ್ ಟಾಪ್ ಹೊಂದಲು ಭಾರತದ ಗ್ರಾಹಕರು 2012 ರ ವೆರೆಗೆ ಕಾಯಲೇಬೇಕು. ಒಳ್ಳೆಯ ಉತ್ಪನ್ನಕ್ಕಾಗಿ ಕಾಯುವುದರಲ್ಲಿ ಕೆಟ್ಟದ್ದೇನೂ ಇಲ್ಲ ಅನ್ನುತ್ತೀರಾ? ನೀವುಂಟು, ಎಲ್ ಜಿ ಉಂಟು... ಬೆಸ್ಟ ಆಫ್ ಲಕ್!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot