ನಿರೀಕ್ಷಿಸಿ, ಹೊಸ ಟ್ಯಾಬ್ಲೆಟ್ ಆಗಮನ ಸದ್ಯದಲ್ಲೇ!

Posted By: Staff

ನಿರೀಕ್ಷಿಸಿ, ಹೊಸ ಟ್ಯಾಬ್ಲೆಟ್ ಆಗಮನ ಸದ್ಯದಲ್ಲೇ!
ಇದೀಗ ಮಾರುಕಟ್ಟೆಯಲ್ಲಿ ಆಧುನಿಕ ಮೊಬೈಲ್ ಹಾಗೂ ಟ್ಯಾಬ್ಲೆಟ್ ಗಳದ್ದೇ ಕಾರುಬಾರು. ದಿನದಿನವೂ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುವುದರೊಂದಿಗೆ ಸ್ಪರ್ಧೆ ಹೆಚ್ಚಳ ಹಾಗೂ ಗ್ರಾಹಕರಿಗೆ ಹೇರಳವಾದ ಅವಕಾಶಕ್ಕೆ ಕಾರಣವಾಗಿದೆ. ಇದೀಗ ಮಾರುಕಟ್ಟೆಗೆ ಲಗ್ಗೆ ಇಡಲಿದೆ, ಎಮ್ ಟಿ ಎಸ್ ಆಂಡ್ರಾಯ್ಡ್ ಟ್ಯಾಬ್ಲೆಟ್.

ಜಗತ್ತಿಗೇ ತನ್ನದೇ ಆದ ಕೊಡುಗೆ ನೀಡಲು ನಿರ್ಧರಿಸಿರುವ ಎಮ್ ಟಿ ಎಸ್ ತನ್ನ ಪ್ರಪ್ರಥಮ ಟ್ಯಾಬ್ಲೆಟನ್ನು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆವೃತ್ತಿಯ ಅಳವಡಿಕೆಯೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಭಾರತ ಎಮ್ ಟಿ ಎಸ್ ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯದರ್ಶಿ ಶ್ರೀ ವೆಸವೋಲ್ಡ್ ರೋಜನೋವ್ ಹೇಳಿಕೆಯಂತೆ ಈ ವರ್ಷದ ಕೊನೆಯಲ್ಲಿ ಕಂಪೆನಿ ಹೊಸ ಟ್ಯಾಬ್ಲೆಟನ್ನು ಬಿಡುಗಡೆ ಮಾಡಲಿದೆ.

ಈಗ ಮಾರುಕಟ್ಟೆಯಲ್ಲಿ ಸಾಕಷ್ಟು GSM ಟ್ಯಾಬ್ಲೆಟ್ ಗಳಿವೆ. ಆದರೆ ಎಮ್ ಟಿ ಎಸ್ ಟ್ಯಾಬ್ಲೆಟ್ ಗಳು CDMA ಸಹಕಾರ ಹೊಂದಿವೆ. ಇದು 2 ಆಂಡ್ರಾಯ್ಡ್ ಬೇಸ್ಡ್ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಬಿಡುಗಡೆ ಮಾಡಲಿದೆ. ಇವು, ಹ್ಯುವೈ ಕಂಪೆನಿಯ MTAG 3.1 ಹಾಗೂ ZTE ಕಂಪೆನಿಯ MTS Livewire. ಆಶ್ಚರ್ಯವೆಂದರೆ ಎರಡರ ಬೆಲೆಯೂ ರು. 5,000.

ಈ ಎರಡೂ ಹ್ಯಾಂಡ್ ಸೆಟ್ ಗಳೂ ಸ್ನಾಪ್ ಡ್ರಗಾನ್ S1 ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸುತ್ತವೆ. ಈ CDMA ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ HTC ಪಲ್ಸ್ ಅತ್ಯಂತ ಯಶಸ್ವಿಯಾಗಿದೆ. ನೆಟ್ ವರ್ಕ್ ಕಡೆ ಸಾಕಷ್ಟು ಗಮನಹರಿಸಬೇಕಾಗಿರುವ ಈ ಫೋನ್, ಸಾಕಷ್ಟು ಫಾರ್ಮೆಟ್ ಗಳನ್ನು ಅಳವಡಿಸಿದೆ.

HD ವಿಡಿಯೋ ರೆಕಾರ್ಡಿಂಗ್, 3G/WiFi ಕನೆಕ್ಟಿವಿಟಿ ಇದರಲ್ಲಿವೆ. ಉಚಿತ SMS, ಡಾಟಾ ಬಳಕೆ, ಈ ಎಲ್ಲಾ ಆಧುನಿಕ ವಿಶೇಷತೆಗಳು ಇದರಲ್ಲಿ ಬಳಕೆಯಾಗಲಿವೆ.

ಒಟ್ಟಿನಲ್ಲಿ ಸಾಕಷ್ಟು ಲೇಟಾಗಿ ಮಾರುಕಟ್ಟೆ ಸ್ಪರ್ಧೆಗೆ ಧುಮುಕಿದರೂ ಈ ಹೊಸ ಟ್ಯಾಬ್ಲೆಟ್ ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡಲಿದೆ. ಈ ವರ್ಷದ ಕೊನೆಯವರೆಗೆ ಕಾಯಬೇಕಲ್ಲಾ ಎನ್ನುವುದೊಂದೇ ಕೊರಗು ಅಷ್ಟೇ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot