ಕಂಪ್ಯೂಟರ್ ನಿರ್ವಹಣೆ ಮರೆತರೆ ಅಪಾಯ ಖಂಡಿತ!

By Super
|
ಕಂಪ್ಯೂಟರ್ ನಿರ್ವಹಣೆ ಮರೆತರೆ ಅಪಾಯ ಖಂಡಿತ!
ಈಗಿನ ಕಾಲದಲ್ಲಿ ಕಂಪ್ಯೂಟರ್ ಇಲ್ಲದೇ ಜೀವನವೇ ಇಲ್ಲವೆನ್ನಬಹುದು. ಆಫಿಸಿನಲ್ಲಾಗಲಿ, ಮನೆಯಲ್ಲಾಗಲೀ ಕಂಪ್ಯೂಟರ್ ಇದ್ದೇ ಇರುತ್ತದೆ ಅಲ್ಲವೇ! ಅದರ ಕಾರ್ಯ ವೈಖರಿ ನಿಮಗೆ ಗೊತ್ತು. ಅಥವಾ ಅದರೊಂದಿಗೆ ಕೆಲಸ ಹೇಗೆ ನಿರ್ವಹಿಸುವುದೆಂಬುದೂ ಗೊತ್ತು.

ಆದರೆ ಕಂಪ್ಯೂಟರ್ ನಿರ್ವಹಣೆ ಹೇಗೆಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ವೈರಸ್ ನಿಂದ ರಕ್ಷಣೆ ಹಾಗೂ ಕಂಪ್ಯೂಟರ್ ನಿರ್ವಹಣೆ, ಕಂಪ್ಯೂಟರ್ ಹೊಂದಿರುವವರಿಗೆಲ್ಲ ತಿಳಿದಿರಲೇಬೇಕು.

ಅಮೇರಿಕಾದಲ್ಲಿ ಮಾಹಿತಿ ಕಳುವು ಮೊದಲನೇ ಸ್ಥಾನದಲ್ಲಿರುವ ಅಪರಾಧವಾಗಿದೆ. 2 ಸೆಕೆಂಡ್ ಗಳಿಗೊಮ್ಮೆ ಒಬ್ಬರ ಮಾಹಿತಿ ಕಳ್ಳತನ ನಡೆಯುತ್ತಿದೆ. ಈ ಮಾಹಿತಿ ವೈಯಕ್ತಿಕ, ವ್ಯಾಪಾರ ಅಥವಾ ಯಾವುದೇ ರೂಪದಲ್ಲಿದ್ದರೂ ಮಾಹಿತಿ ಸೋರಿಕೆ ಸಂಬಂಧಪಟ್ಟವರಿಗೆ ನಷ್ಟವನ್ನುಂಟುಮಾಡುವುದು ಖಂಡಿತ.

ಹಾಗಾಗದಿರಲು ಆಂಟಿ-ವೈರಸ್ ಸಾಫ್ಟ್ ವೇರ್ ಇನ್ ಸ್ಟಾಲ್ ಮಾಡಿರಲೇಬೇಕು. ಕಂಪ್ಯೂಟರ್ ಖರೀದಿ ಮಾಡುವಾಗಲೇ ಈ ವಿಷಯಕ್ಕೆ ಗಮನ ಕೊಡಬೇಕು. ರಕ್ಷಣೆಯ ಬಗ್ಗೆ ತೀವ್ರ ನಿಗಾ ವಹಿಸಬೇಕು ಮತ್ತು ಎರಡು ಬಾರಿ ಪ್ರತಿಯೊಂದನ್ನೂ ಪರಿಶೀಲನೆಗೆ ಒಳಪಡಿಸುವುದು ಒಳ್ಳೆಯದು. ಹೊಸ ಕಂಪ್ಯೂಟರ್ ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಆಂಟಿ-ವೈರಸ್ ಇದ್ದರೆ ಅದನ್ನು ಆಗಾಗ ನವೀಕರಿಸಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಖಂಡಿತ.

ಖರೀದಿಯ ಜೊತೆಯಲ್ಲಿ ಇಲ್ಲದ ಆಂಟಿ-ವೈರಸ್ ನಂತರದ ಅಳವಡಿಕೆ ದುಬಾರಿ ಎನಿಸುವುದರಿಂದ ಸಹಜವಾಗಿಯೇ ಜನರು ಹಾಗೇ ಬಿಟ್ಟುಬಿಡುತ್ತಾರೆ. ಇದು ಎಲ್ಲಾ ಅಪಾಯಕ್ಕೂ ಎಡೆ ಮಾಡಿಕೊಡುತ್ತದೆ. ಯಾರೇ ಆಗಲಿ ನಿರ್ವಹಣೆಯ ಖರ್ಚನ್ನು ಉಳಿಸಲು ಹೊರಟರೆ ಅದು ಕಂಪ್ಯೂಟರ್ ರಿಪೇರಿಗೆ ಖರ್ಚಾಗುತ್ತದೆ ಅಷ್ಟೇ!

ಈ ವಿಷಯಗಳಲ್ಲಿ ನೀವು ಅಜ್ಞಾನಿಯಾಗಿದ್ದರೆ ತಲೆ ಕೆಡಿಸಿಕೊಳ್ಳಬೇಡಿ. ಅದಕ್ಕೆ ಸಹಾಯ ಮಾಡಲು "ಗೀಕ್ಸ್ ಆನ್ ಕಾಲ್" ಇದೆ. ಇದು ವೈಯಕ್ತಿಕ ಟ್ರೇನಿಂಗ್ ಕೊಡುವುದರ ಜೊತೆಗೆ ಪ್ರತಿಬಂಧಕ ಯೋಜನೆ, ಇಂಟರ್ನೆಟ್ ಸುರಕ್ಷೆ, ಡಾಟಾ ಬ್ಯಾಕಪ್ ಮತ್ತು ಸಿಸ್ಟಮ್ ಅಪ್ ಗ್ರೇಡ್ಸ್ ಹೊಂದಿದೆ. ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಇದರಲ್ಲಿ ಲಭ್ಯ. ಇವುಗಳ ಜೊತೆ ಸೂಕ್ಷ್ಮವಾಗಿ ಕಂಪ್ಯೂಟರ್ ನ ಕೆಲಸ ನಿಭಾಯಿಸುವುದೂ ಕೂಡ ಅತ್ಯಂತ ಮುಖ್ಯ.

ಹೀಗೆ ಸರಿಯಾದ ಕಂಪ್ಯೂಟರ್ ನಿರ್ವಹಣೆ ಎಲ್ಲಾ ಸಮಸ್ಯೆಗಳಿಗೆ ಉತ್ತರವಾದೀತು. ಇಲ್ಲದಿದ್ದರೆ ರಿಪೇರಿ ಖರ್ಚಿನ ಜೊತೆ ಮಾಹಿತಿಯೂ ಸೋರಿಹೋಗಿ ತಲೆನೋವಿಗೆ ದಾರಿಯಾದೀತು, ಎಚ್ಚರ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X