ಅಮೆಝಾಜ್ ಟ್ಯಾಬ್ಲೆಟ್ ಫೀಚರ್ಸ್ ಅನಾವರಣ

Posted By: Staff

ಅಮೆಝಾಜ್ ಟ್ಯಾಬ್ಲೆಟ್ ಫೀಚರ್ಸ್ ಅನಾವರಣ
ಅಮೆಝಾನ್ ಹೊರತರುವ ಟೆಕ್ ಸಾಧನಗಳು ಎಲ್ಲರಿಗೂ ಅಚ್ಚುಮೆಚ್ಚು. ಅಮೆಝಾನ್ ಕಂಪನಿಯು ಹೊಸದೊಂದು ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲಿದೆ ಅಂತ ಈ ಹಿಂದೆಯೇ ತಿಳಿಸಿದ್ದೇವು. ಇದೀಗ ಅಮೆಝಾನ್ ಟ್ಯಾಬ್ಲೆಟಿನಲ್ಲಿ ಯಾವೆಲ್ಲ ಫೀಚರ್ಸ್ ಗಳಿರಲಿವೆ ಎಂಬ ಮಾಹಿತಿ ಗೊತ್ತಾಗಿದೆ.

ನೂತನ ಟ್ಯಾಬ್ಲೆಟ್ ಅಮೆಝಾನ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಇದರಲ್ಲಿ ಸಾಕಷ್ಟು ಫೀಚರುಗಳು ಅಡಕವಾಗಿರಲಿದೆ. ನೂತನ ಟ್ಯಾಬ್ಲೆಟ್ ಕಂಪ್ಯೂಟರಿಗೆ ಕಂಪನಿಯು ಅಮೆಝಾನ್ ಕಿಂಡಲ್ ಟ್ಯಾಬ್ಲೆಟ್ ಎಂದು ಹೆಸರಿಡುವ ಕುರಿತು ಪರಿಶೀಲಿಸುತ್ತಿದೆ.

ಈ ಟ್ಯಾಬ್ಲೆಟ್ 7 ಇಂಚಿನ ಕಲರ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿರಲಿದ್ದು ಮಲ್ಟಿ ಟಚ್ ಸೇರಿದಂತೆ ಹಲವು ಫೀಚರುಗಳು ಇರಲಿವೆ. ಇದರಲ್ಲಿ ಅಮೆಝಾನ್ ಅಪ್ಲಿಕೇಷನ್ ಕೂಡ ಇರುವ ನಿರೀಕ್ಷೆಯಿದೆ. ಅಮೆಝಾನ್ ಟ್ಯಾಬ್ಲೆಟ್ ನೋಡಲು ಪ್ರೊಟೊ ಟೈಪ್ ಸಾಧನಗಳಂತೆ ಕಂಡರೂ ಅದು ಆಂಡ್ರಾಯ್ಡ್ ತಂತ್ರಜ್ಞಾನದೊಂದಿಗೆ ಬರಲಿದೆ.

ನೂತನ ಟ್ಯಾಬ್ಲೆಟ್ ಲ್ಲಿ ಕಿಂಡಲ್ ರೀಡರ್, ವಿಡಿಯೊ ಪ್ಲೇಉರ್, ಅಮೆಝಾನ್ ಕ್ಲೌಡ್ ಪ್ಲೇಯರ್ ಇತ್ಯಾದಿ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಮಲ್ಟಿ ಟಚ್ ಆಯ್ಕೆ ಇದರಲ್ಲಿರುವ ಪ್ರಮುಖ ವಿಶೇಷತೆಯಾಗಿದೆ. ಈ ಸಾಧನಕ್ಕೆ ಒಂದು ಚಿಪ್ ಹೊಂದಿದ್ದು 6 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮತ್ತೆ ಆರು ಜಿಬಿಯಷ್ಟು ವಿಸ್ತರಿಸಬಹುದಾದ ಮೆಮೊರಿ ಕಾರ್ಡ್ ಹಾಕಬಹುದು.

ನೂತನ ಅಮೆಝಾನ್ ಟ್ಯಾಬ್ಲೆಟ್ ನಲ್ಲಿ ವೈಫೈ ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳಿರಲಿವೆ. ಈ ಸಾಧನ ಭಾರತಕ್ಕೆ ಯಾವಾಗ ಬರುತ್ತೆ ಅನ್ನೋದು ಖಚಿತವಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot