Subscribe to Gizbot

ಎಚ್ ಪಿ ಮತ್ತು ಡೆಲ್ ಗೆ ಲೆನೊವೊ ಸೆಡ್ಡು

Posted By: Staff

ಎಚ್ ಪಿ ಮತ್ತು ಡೆಲ್ ಗೆ ಲೆನೊವೊ ಸೆಡ್ಡು
ವಿಶ್ವದ ಪ್ರಮುಖ ಕಂಪ್ಯೂಟರ್ ತಯಾರಿಕಾ ಕಂಪನಿ ಲೆನೊವೊ ತನ್ನ ವಿಸ್ತರಣಾ ಯೋಜನೆಗಳನ್ನು ಪ್ರಕಟಿಸಿದೆ. ಕಂಪನಿಯು ಎಚ್ ಪಿ ಮತ್ತು ಡೆಲ್ ಕಂಪನಿಗಳನ್ನು ಹಿಂದಿಕ್ಕುವ ಯೋಜನೆಯನ್ನು ಹೊಂದಿದೆ.

ವಿವಿಧ ಕಂಪ್ಯೂಟರ್ ಉತ್ಪನ್ನಗಳ ಮೂಲಕ ಕಂಪನಿ ಈಗಾಗಲೇ ಬೃಹತ್ ಮಾರುಕಟ್ಟೆಯನ್ನು ಪಡೆದಿದೆ. ಸದ್ಯ ಜಾಗತಿಕವಾಗಿ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಲೆನೊವೊ ಮೂರನೇ ಸ್ಥಾನ ಹೊಂದಿದೆ. ಮೊದಲ ಎರಡು ಸ್ಥಾನಗಳನ್ನು ಪಡೆದಿರುವ ಎಚ್ ಪಿ ಮತ್ತು ಡೆಲ್ ಕಂಪ್ಯೂಟರನ್ನು ಹಿಂದಿಕ್ಕುವುದು ಪ್ರಮುಖ ಗುರಿಯಾಗಿದೆ ಎಂದು ಕಂಪನಿ ಹೇಳಿದೆ.

ಜಾಗತಿಕವಾಗಿ ಲೆನೊವೊ 2005ರಿಂದ ಪ್ರಾಬಲ್ಯಕ್ಕೆ ಬರಲಾರಂಬಿಸಿದೆ. ಇದೀಗ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇಕಡ 12.2ಕ್ಕೆ ತಲುಪಿದೆ. 2005ರಲ್ಲಿ ಕಂಪನಿಯು ಐಬಿಎಂನ್ನು ಹಿಂದಿಕ್ಕಿತ್ತು.

ಕಂಪನಿಯು ಭಾರತ ಮತ್ತು ಚೀನಾದಲ್ಲಿ ಎರಡು ಪ್ರಧಾನ ಕಚೇರಿ ಹೊಂದಿದೆ. ಕಂಪನಿಯು ಜರ್ಮನಿಯ ಮೆಡಿಯೊನ್ ಎಜಿಯನ್ನು ಸ್ವಾಧೀನಪಡಿಸಿಕೊಂಡಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot