ಡೆಲ್ ಲ್ಯಾಟಿಟ್ಯೂಡ್ ಎಕ್ಸ್ ಟಿ3 ಮಾರುಕಟ್ಟೆಗೆ

Posted By: Staff

ಡೆಲ್ ಲ್ಯಾಟಿಟ್ಯೂಡ್ ಎಕ್ಸ್ ಟಿ3 ಮಾರುಕಟ್ಟೆಗೆ
ಹೆಸರು ಡೆಲ್ ಲ್ಯಾಟಿಟ್ಯೂಡ್ ಎಕ್ಸ್ ಟಿ3. ಇದು ಟ್ಯಾಬ್ಲೆಟ್. ಇದು ಲ್ಯಾಪ್ ಟಾಪ್ ನಂತೆಯೂ ಕೆಲಸ ಮಾಡುತ್ತದೆ. ಹೀಗಾಗಿ ಹೆಣ್ಣೂ ಅಲ್ಲ ಗಂಡೂ ಅಲ್ಲ. ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳ ಯುಗಳಗೀತೆಯಿದು. ಗ್ಯಾಜೆಟ್ ಕನಸಿನ ಗ್ರಾಹಕರಿಗಿದು ಅತ್ಯುತ್ತಮ ಸಾಧನ.

ಲ್ಯಾಟಿಟ್ಯೂಡ್ 13.3 ಇಂಚಿನ ಹೈಡೆಫಿನೇಷನ್ ಡಿಸ್ ಪ್ಲೇ ಹೊಂದಿದೆ. ಈ ಸಾಧನವನ್ನು ಸುಲಭವಾಗಿ ಟ್ಯಾಬ್ಲೆಟ್ ಅಥವಾ ಲ್ಯಾಪ್ ಟಾಪ್ ಆಗಿ ಬದಲಾಯಿಸಿಕೊಳ್ಳಬಹುದಾಗಿದೆ.

ಡೆಲ್ ಕಂಪನಿಯು ಹೊರತರುತ್ತಿರುವ ಲ್ಯಾಟಿಟ್ಯೂಡ್ ಸೀರಿಸ್ ಲ್ಯಾಪ್ ಟಾಪ್ ಗಳೆಲ್ಲ ಜನಪ್ರಿಯವಾಗಿವೆ. ನೂತನ ಡೆಲ್ ಲ್ಯಾಟಿಟ್ಯೂಡ್ ಎಕ್ಸ್ ಟಿ3 ಲ್ಯಾಪ್ ಟಾಪ್ ಎಲ್ ಇಡಿ ಬ್ಯಾಕ್ ಲಿಟ್ ಕೂಡ ಹೊಂದಿದೆ. ಇದು ಇಂಟೆಲ್ ನ ಎರಡನೇ ತಲೆಮಾರಿನ ಐ5 ಪ್ರೊಸೆಸರ್ ಹೊಂದಿದೆ. ಇದಕ್ಕೆ ಟರ್ಬೊ ಬೂಸ್ಟ್ ತಂತ್ರಜ್ಞಾನ ಸಪೋರ್ಟ್ ಮಾಡುತ್ತಿದೆ.

ಒಂದು ಗಂಟೆ ಚಾರ್ಜ್ ಮಾಡಿದರೆ ಶೇಕಡ 80ರಷ್ಟು ಬ್ಯಾಟರಿ ಚಾರ್ಜ್ ಆಗುತ್ತಿದೆ. ಇದು ಪವರ್ ಮ್ಯಾನೆಜ್ ಮೆಂಟ್ ಗೆ ಸೂಕ್ತವಾಗಿದೆ. ಇದರಲ್ಲಿ 9 ಸೆಲ್ ವಿಸ್ತರಿಸಬಹುದಾದ ಬ್ಯಾಟರಿ ಹೊಂದಿದೆ. ಲ್ಯಾಪ್ ಟಾಪ್ ಕೆಲಸ ಮುಗಿದರೆ ಟ್ಯಾಬ್ಲೆಟ್ ಗೆ ಸುಲಭವಾಗಿ ಪರಿವರ್ತಿಸಿಕೊಳ್ಳಬಹುದು. ಅಲ್ಲೂ ಆಕರ್ಷಕ ಫೀಚರುಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ.

ಈ ಸಾಧನ ಹೆಚ್ಚು ಸುರಕ್ಷಿತವಾಗಿದೆ. ಯಾಕೆಂದರೆ ಇದು ಡೆಲ್ ಡೇಟಾ ಪ್ರೊಟೆಕ್ಷನ್ ಮತ್ತು ಯುನಿಕ್ಯೂ ಎನಕ್ರಿಪ್ಷನ್ ಹೊಂದಿವೆ. ನೋಡಲು ಆಕರ್ಷಕವಾಗಿರುವ ಈ ಲ್ಯಾಟಿಟ್ಯೂಡ್ ಎಕ್ಸಟಿ3 ದರ ಸುಮಾರು 1 ಲಕ್ಷ ರುಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot