Home
ಕಂಪ್ಯೂಟರ್‌‌

HTC ಜೆಟ್ ಸ್ಟ್ರೀಮ್: ರಾಕೇಟ್ ಅಲ್ಲ ಕಂಪ್ಯೂಟರ್

By Super
HTC ಜೆಟ್ ಸ್ಟ್ರೀಮ್: ರಾಕೇಟ್ ಅಲ್ಲ ಕಂಪ್ಯೂಟರ್
ಎಚ್ ಟಿಸಿ ಪ್ಲೈಯರ್ ಬಂದು ಹೆಚ್ಚು ದಿನ ಕಳೆದಿಲ್ಲ. ಆಗಲೇ ಹೊಸ ಟ್ಯಾಬ್ಲೇಟ್ ರಾಕೇಟ್ ಸ್ಟ್ರೀಮರ್ ಮಾರುಕಟ್ಟೆಗೆ ಬರುವ ಸೂಚನೆ ದೊರಕಿದೆ. ಟ್ಯಾಬ್ಲೇಟ್ ಸಾಧನಗಳಲ್ಲಿಯೇ ಇದರ ವಿನ್ಯಾಸ, ಕ್ಷಮತೆ ಅತ್ಯುತ್ತಮವಾಗಿರಲಿದೆ ಎನ್ನುವ ನಿರೀಕ್ಷೆ ಟೆಕ್ ವಿಶ್ಲೇಷಕರದ್ದು.

ಈ ಹಿಂದಿನ ಫ್ಲೈಯರ್ ಟ್ಯಾಬ್ಲೆಟ್ ಜಾಗತಿಕವಾಗಿ ಹೆಚ್ಚು ಜನಪ್ರಿಯಗೊಂಡಿತ್ತು. ನೂತನ ಟ್ಯಾಬ್ಲೆಟ್ 10 ಇಂಚಿನ ಸ್ಕ್ರೀನ್ ಹೊಂದಿರಲಿದೆಯಂತೆ. ಇದರಲ್ಲಿ ಸಾಕಷ್ಟು ವಿಶೇಷತೆಗಳು ಅಡಕವಾಗಿರುವ ನಿರೀಕ್ಷೆಯಿದೆ. ಇತ್ತೀಚಿನ ಆಂಡ್ರಾಯ್ಡ್ 3.1 ಇರಲಿದೆ. ಚಿತ್ರಗಳನ್ನು ಆಕರ್ಷಕವಾಗಿ ಕಾಣಲು 1280 X 768 ಡಿಸ್ ಪ್ಲೇ ಇರಲಿದೆ.

ಮಲ್ಟಿಟಚ್, ಲೈಟ್ ಸೆನ್ಸಾರ್ಸ್ ಮತ್ತು ಟಚ್ ಸ್ಕ್ರೀನ್ ಎಂಬ ಮೂರು ಆಕರ್ಷಣೆಯೊಂದಿಗೆ ಎಚ್ ಟಿಸಿ ನೂತನ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲಿದೆ.

ನೂತನ ಎಚ್ ಟಿಸಿ ಜೆಟ್ ಸ್ಟ್ರೀಮ್ ಟ್ಯಾಬ್ಲೆಟಿ ಶಕ್ತಿಶಾಲಿ ಡ್ಯೂಯಲ್ ಕೋರ್ ಸ್ನಾಪರ್ಡಾಗನ್ ಪ್ರೊಸೆಸರ್ ಹೊಂದಿರಲಿದೆ. ಇದರ ವೇಗ 1,500 ಮೆಗಾಹರ್ಟ್ಸ್ ಆಗಿದೆ. ಮಾಹಿತಿಗಳನ್ನು ಸಂಗ್ರಹಿಸಲು 32 ಜಿಬಿಯ ಆಂತರಿಕ ಸಂಗ್ರಹ ಸಾಮರ್ಥ್ಯ ಇರಲಿದೆ. ಜೊತೆಗೆ ಮೈಕ್ರೊ ಎಸ್ ಡಿ ಮೆಮೊರಿ ಕಾರ್ಡ್ ಮೂಲಕ ಹೆಚ್ಚುವರಿ 32 ಜಿಬಿ ಸಂಗ್ರಹ ಸಾಮರ್ಥ್ಯ ಪಡೆಯಬಹುದಾಗಿದೆ.

ಇದರಲ್ಲಿ ಹೆಚ್ಚು ಕಾರ್ಯಕ್ಷಮತೆಯ ವೈಫೈ ಮತ್ತು ಬ್ಲೂಟೂಥ್ ಸಾಧನಗಳಿರಲಿವೆ. ಜೊತೆಗೆ ಮಾಹಿತಿ ವರ್ಗಾಯಿಸಲು ಯುಎಸ್ ಬಿ ಸೌಲಭ್ಯವಿರಲಿದೆ.

ಇದರಲ್ಲಿರುವ ಇನ್ನೊಂದು ಅನುಕೂಲತೆಯೆಂದರೆ 8 ಎಂಪಿ ಕ್ಯಾಮರಾ. ಇದರು ಅವಳಿ ಎಲ್ಇಡಿ ಪ್ಲಾಷ್, ಆಟೋ ಫೋಕಸ್ ಇತ್ಯಾದಿ ಫೀಚರುಗಳ ಗಣಿ. ಮತ್ತೊಂದು 1.3 ಮೆಗಾ ಫಿಕ್ಸೆಲ್ ಕ್ಯಾಮರಾವಿದೆ. ಇದರಿಂದಾಗಿ ಈ ಟ್ಯಾಬ್ಲೆಟ್ ನಲ್ಲಿ ವಿಡಿಯೋ ಕರೆಗಳನ್ನು ಮಾಡಬಹುದಾಗಿದೆ.

ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಮಲ್ಟಿಮೀಡಿಯಾ ಪ್ಲೇಯರ್ ಕೂಡ ಇದೆ. ಆಲ್ಬಂ, ಆರ್ಟಿಸ್ಟ್ ಇತ್ಯಾದಿಗಳಲ್ಲಿ ಎಂಪಿ3 ಫೈಲುಗಳನ್ನು ಸಂಗ್ರಹಿಸಿಡಬಹುದಾಗಿದೆ. ಇದರಲ್ಲಿ ಯೂಟ್ಯೂಬ್ ಪ್ಲೇಯರ್ ಕೂಡ ಇರುವುದರಿಂದ ವಿಡಿಯೋ ವೀಕ್ಷಣೆ ಸುಲಭವಾಗಿದೆ.

ಉಳಿದಂತೆ ಕ್ಯಾಲೆಂಡರ್, ಅಲಾರಂ, ಕ್ಯಾಲ್ಕ್ಯುಲೆಟರ್ ಮುಂತಾದ ಅಪ್ಲಿಕೇಷನ್ ಗಳಿವೆ. ಗೂಗಲ್ ಟಾಕ್, ಇಮೇಲ್ ಇತ್ಯಾದಿ ಅಪ್ಲಿಕೇಷನ್ ಕೂಡ ಇವೆ. ಈ ಟ್ಯಾಬ್ಲೆಟ್ ಈ ತಿಂಗಳ ಅಂತ್ಯದೊಳಗೆ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಇದರ ದರ ಭಾರತದಲ್ಲಿ ಸುಮಾರು 31,500 ರುಪಾಯಿ ಇರಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+