ಆಪಲ್ ಗೆ ಸೆಡ್ಡು: ಸೋನಿ ಎಸ್ ಹೀಗಿದೆ ನೋಡಿ

Posted By: Staff

ಆಪಲ್ ಗೆ ಸೆಡ್ಡು: ಸೋನಿ ಎಸ್ ಹೀಗಿದೆ ನೋಡಿ
ಹೆಸರು ಸೋನಿ ಎಸ್. ಇದು ಸೋನಿ ಕಂಪನಿ ಹೊರತಂದ ಹೊಸ ವೈಫೈ ಟ್ಯಾಬ್ಲೆಟ್. ಆಕರ್ಷಕ ವಿನ್ಯಾಸ ಇದರ ಮೊದಲ ಆಕರ್ಷಣೆ. ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 3.1 ಜಿಂಜರ್ ಬ್ರೀಡ್ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಇದೇ ಬ್ರಾಂಡಿನ 3ಜಿ ಆವೃತ್ತಿ ಮಾತ್ರ ಆಂಡ್ರಾಯ್ಡ್ 3.2 ಸಿಸ್ಟಮ್ ಹೊಂದಿದೆ.

ಕಂಪನಿಯು ಕಾನ್ಪಿಗರೇಷನ್ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಭಯಪಡುವುದಿಲ್ಲವೆಂದು ಗ್ಯಾಜೆಟ್ ಗುರು ಅಭಿಪ್ರಾಯಪಡುತ್ತಾರೆ. ಕಂಪನಿಯು ಹೊಸ ತಂತ್ರಜ್ಞಾನ, ಆವಿಷ್ಕಾರಗಳಲ್ಲಿ ಯಾವತ್ತೂ ಪ್ರಪ್ರಥಮ ಕಂಪನಿಯಾಗಿ ಉಳಿಯುತ್ತದೆ. ಇದೇ ಕಾರಣಕ್ಕೆ ಹೆಚ್ಚು ಜನರು ಸೋನಿಯನ್ನು ಇಷ್ಟಪಡುತ್ತಾರೆ.

ಇದು ಆಪಲ್ ಟ್ಯಾಬ್ಲೆಟಿಗೆ ಪ್ರತಿಸ್ಪರ್ಧಿ. ಆಪಲ್ ಟ್ಯಾಬ್ಲೆಟ್ ದುಬಾರಿ ಅನಿಸಿದರೆ ಈ ಸೋನಿ ಟ್ಯಾಬ್ಲೆಟ್ ಖರೀದಿಸಬಹುದು. ಇದರ ದರ ಭಾರತದಲ್ಲಿ 36,750 ರುಪಾಯಿ. ಸೋನಿ ಕಂಪನಿಯ ನೂತನ ಟ್ಯಾಬ್ಲೆಟ್ ಹಲವು ಆಸಕ್ತಿದಾಯಕ ಫೀಚರುಗಳು ಮತ್ತು ಕೆಲವು ರೂಪಾಂತರಗೊಂಡ ವಿಶೇಷತೆಗಳಿಂದ ಗಮನಸೆಳೆಯುತ್ತದೆ.

ವಿಶೇಷತೆಗಳು
* ಆಂಡ್ರಾಯ್ಡ್ 2.3 ಮತ್ತು ಡ್ಯೂಯಲ್ ಕೋರ್ ಟೆಗ್ರಾ ಪ್ರೊಸೆಸರ್
* ಒಂದು ಜಿಬಿ RAM
* ಟಚ್ ಸ್ಕ್ರೀನ್, 1280 X 800 ಪಿಕ್ಸೆಲ್ ರೆಸಲ್ಯೂಷನ್
* 4.9 ಮೆಗಾ ಪಿಕ್ಸೆಲ್ ಕ್ಯಾಮರಾ(ಟ್ಯಾಬ್ಲೆಟ್ ಹಿಂಭಾಗದಲ್ಲಿದೆ)
* ವಿಡಿಯೋ ಕರೆ ಮಾಡಲು 0.3 ಮೆಗಾ ಪಿಕ್ಸೆಲ್ ಕ್ಯಾಮರಾ(ಆಟೋ ಫೋಕಸ್)
* ಇತ್ತೀಚಿನ 802.11 b/g/n ವೈಫೈ
* 2.0 ವರ್ಷನ್ ಬ್ಲೂಟೂಥ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot