ಸ್ಪೈಸ್ ನಿಂದ ಕಡಿಮೆ ದರದ ಟ್ಯಾಬ್ಲೆಟ್ ಕಂಪ್ಯೂಟರ್

Posted By: Staff

ಸ್ಪೈಸ್ ನಿಂದ ಕಡಿಮೆ ದರದ ಟ್ಯಾಬ್ಲೆಟ್ ಕಂಪ್ಯೂಟರ್
ಸದ್ಯ ಮಾರುಕಟ್ಟೆಯಲ್ಲಿರುವ ಆಂಡ್ರಾಯ್ಡ್ ಟ್ಯಾಬ್ಲೆಟ್ ಕಂಪ್ಯೂಟರ್ ಗಳನ್ನು ಸಾಮಾನ್ಯರು ಮುಟ್ಟುವಂತ್ತಿಲ್ಲ. ಟ್ಯಾಬ್ಲೆಟ್ ಕಂಪ್ಯೂಟರ್ ಖರೀದಿಸಲು ಹಲವು ತಿಂಗಳ ವೇತನ ಸಾಕಾಗದು. ಟೆಕ್ ಲೋಕದ ಸಾಮಾನ್ಯರ ಕಷ್ಟ ಸ್ಪೈಸ್ ಗೆ ಅರಿವಾದಂತೆ ಇದೆ. ಕಂಪನಿಯು ಶೀಘ್ರದಲ್ಲಿ ಹತ್ತು ಹನ್ನೆರಡು ಸಾವಿರ ರು.ವಿನ ಟ್ಯಾಬ್ಲೆಟ್ ಕಂಪ್ಯೂಟರ್ ಹೊರತರಲಿದೆಯಂತೆ.

ನೂತನ ಸ್ಪೈಸ್ ಟ್ಯಾಬ್ಲೆಟ್ ಎಂಐ 720 ಮುಂದಿನ ವಾರ ಮಾರುಕಟ್ಟೆಗೆ ಬರಲಿದೆ. ಇದು ಆಂಡ್ರಾಯ್ಡ್ 2.2, 800 ಮೆಗಾಹರ್ಟ್ಸ್ ಕ್ಯೂಯಲ್ ಕಮ್ ಪ್ರೊಸೆಸರ್ ಹೊಂದಿರಲಿದೆ. ಇದರಿಂದಾಗಿ ಇದರ ಕಾರ್ಯಕ್ಷಮತೆ ಕುರಿತು ಯಾವುದೇ ಸಂದೇಹ ಪಡುವಂತ್ತಿಲ್ಲ. ಇದು ಬಡವರ ಬಾದಾಮಿ ಟ್ಯಾಬ್ಲೆಟ್ ಆಗುವ ನಿರೀಕ್ಷೆಯಿದೆ.

Spice Mi-720 ಟ್ಯಾಬ್ಲೆಟ್ 800 x 480 ರೆಸಲ್ಯೂಷನ್ ನ 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿರಲಿದೆ. ಇನ್ನೊಂದು ಆಸಕ್ತಿದಾಯಕ ಫೀಚರ್ ಎಂದರೆ ಈ ಟ್ಯಾಬ್ಲೆಟ್ ಸ್ಮಾರ್ಟ್ ಫೋನಾಗಿಯೂ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸಿಮ್ ಕಾರ್ಡ್ ಕೂಡ ಹಾಕಬಹುದಾಗಿದೆ.

ಇದರಲ್ಲಿ ಇತ್ತೀಚಿನ ಬ್ಲೂಟೂಥ್ ಸೌಲಭ್ಯವಿದೆ. ಜೊತೆಗೆ ಶಕ್ತಿಶಾಲಿ ಆಡ್ರೆನೊ 200 ಗ್ರಾಫಿಕ್ಸ್ ಪ್ರೊಸೆಸರ್ ಕಾರ್ಡ್ ಕೂಡ ಇದೆ. ಇದರಿಂದಾಗಿ ಈ ಟ್ಯಾಬ್ಲೆಟ್ ನಲ್ಲಿ ಗೇಮ್ ಮತ್ತು ವಿಡಿಯೋ ವೀಕ್ಷಣೆ ಹೆಚ್ಚು ಆಕರ್ಷಕವಾಗಲಿದೆ. 3ಜಿ ಸಪೋರ್ಟ್ ಇದ್ದರೆ ಯಾವುದೇ ಡೇಟಾವನ್ನು ವೇಗವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಉಳಿದಂತೆ ಈ ಟ್ಯಾಬ್ಲೆಟ್ ನಲ್ಲಿ ಜಿಪಿಆರ್ಎಸ್, ಇಡಿಜಿಜಿ ಮತ್ತು ವೈಫೈ ಹಾಟ್ ಸ್ಪಾಟ್ ಫೀಚರುಗಳಿವೆ. ಆದರೆ ಈ ಟ್ಯಾಬ್ಲೆಟ್ ನಲ್ಲಿ ಅತ್ಯುತ್ತಮ ಕ್ಯಾಮರಾ ಮಾತ್ರ ನಿರೀಕ್ಷಿಸಬೇಡಿ. ಅಲ್ಪತೃಪ್ತಿಗಾಗಿ 2 ಮೆಗಾ ಫಿಕ್ಸೆಲ್ ಕ್ಯಾಮರಾವಿದೆ. ಯೂಟ್ಯೂಬ್ ಮೂಲಕ ನೇರವಾಗಿ ವಿಡಿಯೊ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

32 ಜಿಬಿ ಮೈಕ್ರೊ ಎಸ್ ಡಿ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಹೀಗೆ ಹತ್ತುಹಲವು ಫೀಚರ್ ಗಳನ್ನು ಹೊಂದಿರುವ ಈ ಟ್ಯಾಬ್ಲೆಟ್ ದರ ಹತ್ತು ಸಾವಿರ ರುಪಾಯಿಂದ ಕೊಂಚ ಹೆಚ್ಚಿದೆ. ಅಂದರೆ ಇದರ ದರ ಸುಮಾರು 12 ಸಾವಿರ ರುಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot