ಎಚ್ ಪಿ ಹೊಸ ಪೆವಿಲಿಯನ್ ಡಿಎಂ1 ಲ್ಯಾಪ್ ಟಾಪ್

Posted By: Staff

ಎಚ್ ಪಿ ಹೊಸ ಪೆವಿಲಿಯನ್ ಡಿಎಂ1 ಲ್ಯಾಪ್ ಟಾಪ್
ಕಂಪ್ಯೂಟರ್ ಅಭಿವೃದ್ಧಿಪಡಿಸೋ ವಲಯದಲ್ಲಿ ಎಚ್ ಪಿ ಪ್ರತಿವರ್ಷ ಬೆಳೆಯುತ್ತಲೇ ಇದೆ. ಕಂಪನಿಯು ಆಕರ್ಷಕ, ವಿನೂತನ, ಅನನ್ಯ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸುವುದರಲ್ಲಿ ಹಿಂದೆ ಬೀಳುವುದೇ ಇಲ್ಲ.

ಇಷ್ಟೇಲ್ಲ ಪೀಠಿಕೆ ಯಾಕಪ್ಪ ಅಂದ್ರೆ ಕಂಪನಿಯು ಪೆವಿಲಿಯನ್ ಡಿಎಂ1 ಲ್ಯಾಪ್ ಟಾಪಿನ ಪರಿಷ್ಕೃತ ಆವೃತ್ತಿಗಳನ್ನು ಹೊರತಂದಿದೆ. ಇದು ನೋಡಲು ಆಕರ್ಷಕವಾಗಿದ್ದು, ಕಾರ್ಯನಿರ್ವಹಣೆಯಲ್ಲೂ ಸೂಪರ ಆಗಿದೆ.

ನೂತನ ಪೆವಿಲಿಯನ್ ಡಿಎಂ1 ಎರಡು ಮಾಡೆಲ್ ಗಳಲ್ಲಿ ದೊರಕುತ್ತಿದೆ. ಅದರಲ್ಲಿ ಒಂದು ಮಾಡೆಲ್ ಎರಡನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು ಎಎಂಡಿ ಇ-ಸೀರಿಸ್ ಪ್ರೊಸೆಸರ್ ಹೊಂದಿದೆ. ಮತ್ತೊಂದು ಮಾಡೆಲ್ ಎಎಂಡಿ ರೆಡಿಯನ್ ಎಚ್ ಡಿ ಗ್ರಾಫಿಕ್ಸ್ ಯುನಿಟ್ ಸೌಲಭ್ಯವನ್ನೂ ಹೊಂದಿದೆ.

ಎಚ್ ಪಿ ಪೆವಿಲಿಯನ್ ಡಿಎಂ1 ಡಿಸ್ ಪ್ಲೇ 11.6 ಇಂಚಿದೆ. ಮೃದುರಬ್ಬರ್ ಫಿನಿಷಿಂಗ್ ಇರುವ ಈ ಲ್ಯಾಪಿ ಆಕರ್ಷಕವಾಗಿದೆ. ನೋಡಲು ನೋಟ್ ಬುಕ್ ನಂತ್ತಿದೆ. ಒಟ್ಟಾರೆ ವಿನ್ಯಾಸ ಸೂಪರ್. ಇದು ಪ್ರವಾಸ ಕೈಗೊಳ್ಳುವರಿಗೆ ಅತ್ಯಂತ ಸೂಕ್ತವಾದ ಲ್ಯಾಪಿಯಾಗಿದೆ.

ವಿಶೇಷತೆಗಳು
* ಕೆಲವು ಸಂದರ್ಭಗಳಲ್ಲಿ ಆಟೋಮ್ಯಾಟಿಕ್ ಆಗಿ ಫೈಲ್ ಸೇವ್ ಆಗೋ ಫೀಚರ್ಸ್
* ಸೌಂಡ್ ಗುಣಮಟ್ಟ ಅತ್ಯುತ್ತಮ
* ಪರಿಷ್ಕೃತ ಬ್ಯಾಟರಿ ಬಾಳಿಕೆ. 11.6 ಗಂಟೆ ಬ್ಯಾಟರಿ ಬಾಳಿಕೆ
* ಎಚ್ ಪಿ ಪ್ರೀಮಿಯರ್ ಎಕ್ಸ್ ಪೀರಿಯನ್ಸ್ ಸಾಫ್ಟ್ ವೇರ್
* ದರ: 30 ಸಾವಿರ ರುಪಾಯಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot