Subscribe to Gizbot

ಐಬಾಲ್ ಟ್ಯಾಬ್ಲೆಟ್ ಬಿಡುಗಡೆ, ಹೃತಿಕ್ ರಾಯಭಾರಿ

Posted By: Super

ಐಬಾಲ್ ಟ್ಯಾಬ್ಲೆಟ್ ಬಿಡುಗಡೆ, ಹೃತಿಕ್ ರಾಯಭಾರಿ
ಇದೀಗ ಐಬಾಲ್ ಕಂಪನಿಯು ಸ್ವತಃ ತನ್ನ ಬ್ರಾಂಡಿನ ಟ್ಯಾಬ್ಲೆಟೊಂದನ್ನು ಹೊರತಂದಿದೆ. ಇದರ ಹೆಸರು ಐಬಾಲ್ ಸ್ಲೈಡ್. ಇದಕ್ಕೆ ಬ್ರಾಂಡ್ ರಾಯಭಾರಿ ಜನಪ್ರಿಯ ಬಾಲಿವುಡ್ ನಟ ಹೃತಿಕ್ ರೋಷನ್.

ನೂತನ ಐಬಾಲ್ ಸ್ಲೈಡ್ 1 ಗಿಗಾಹರ್ಟ್ಸ್ ನ ಎಆರ್ಎಂ ಕೋರ್ಟೆಕ್ಸ್ ಎ8 ಪ್ರೊಸೆಸರ್ ಹೊಂದಿದೆ. ಇದರ 7 ಇಂಚಿನ ಟಚ್ ಸ್ಕ್ರೀನ್ ಅತ್ಯುತ್ತಮ ಡಿಸ್ ಪ್ಲೇ ಮಾತ್ರವಲ್ಲದೇ ಐಬಾಲ್ ಸ್ಲೈಡ್ ಸೌಂದರ್ಯ ಹೆಚ್ಚಿಸಿದೆ. ಈ ಸಾಧನ ಗೂಗಲ್ ಆಂಡ್ರಾಯ್ಡ್ ವಿ2.3 ಗಿಂಗರ್ ಬ್ರೀಡ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ.

ಈ ಸಾಧನಕ್ಕೆ ಹೊರಗಿನಿಂದ 8 ಜಿಬಿ ಮೆಮೊರಿ ಕಾರ್ಡ್ ಹಾಕಬಹುದಾಗಿದ್ದು, ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ವೈಫೈ ಮತ್ತು 3ಜಿ ಇತ್ಯಾದಿ ಫೀಚರುಗಳಿವೆ.

ಐಬಾಲ್ ಸ್ಲೈಡ್ ಗೆ ಕಿಬೋರ್ಡ್, ಹೆಡ್ ಸೆಟ್, ಮೌಸ್ ಇತ್ಯಾದಿಗಳನ್ನು ಬ್ಲೂಟೂಥ್ ಮೂಲಕ ಸಂಪರ್ಕ ಕಲ್ಪಿಸಲು ಸಾಧ್ಯವಿದೆ. ಇದರಿಂದ ಕೊಂಚ ಕಂಫರ್ಟ್ ಅನುಭವ ಬಳಕೆದಾರನಿಗೆ ದೊರಕಲಿದೆ.

4,400 ಮೆಗಾಹರ್ಟ್ಸ್ ನ ಲಿಥೀಯಂ ಐಯಾನ್ ಬ್ಯಾಟರಿ ಇನ್ನೊಂದು ಪ್ರಮುಖ ವಿಶೇಷತೆ. ಯಾಕೆಂದರೆ ಇದು ಹೆಚ್ಚು ಬ್ಯಾಟರಿ ಬಾಳಿಕೆಯ ಫೀಚರ್ ಹೊಂದಿದೆ. ಒಮ್ಮೆ ಪೂರ್ತಿ ಬ್ಯಾಟರಿ ಚಾರ್ಜ್ ಮಾಡಿದರೆ ಆರುವರೆ ಗಂಟೆ ಮ್ಯೂಸಿಕ್ ಕೇಳಬಹುದು ಮತ್ತು 5 ಗಂಟೆ ವಿಡಿಯೋ ಪ್ಲೇ ಮಾಡಬಹುದು.

ನಿಮಗೆ ಕೊಂಚ ನಿರಾಶೆ ಮಾಡುವ ವಿಷ್ಯವೆಂದರೆ ಕ್ಯಾಮರಾ. ಇದರ ಹಿಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮರಾವಿದೆ. ಆದರೆ ಕ್ಯಾಮರಾ ಗುಣಮಟ್ಟ ಮಾತ್ರ ಅತ್ಯುತ್ತಮವಾಗಿದೆ ಮತ್ತು ತೃಪ್ತಿದಾಯಕವಾಗಿದೆ. ಈ ಟ್ಯಾಬ್ಲೆಟಿನಲ್ಲಿ 3ಡಿ ಗೇಮ್ ಗಳನ್ನು ಕೂಡ ಆಡಬಹುದಾಗಿದೆ.

ಉಳಿದಂತೆ ವಿಶ್ಯುಯಲ್ ಸರ್ಚ್, ವಾಯ್ಸ್ ರೆಕಾಗ್ನೆಶನ್ ಮತ್ತು ಆಕ್ಸನ್ ಫೀಚರುಗಳಿವೆ. ಇಮೇಲ್, ಚಾಟಿಂಗ್, ಸಾಮಾಜಿಕ ಜಾಲತಾಣಗಳ ಅಪ್ಲಿಕೇಷನ್ ಗಳನ್ನು ಸುಲಭವಾಗಿ ಬಳಸಬಹುದಾಗಿದೆ. ನ್ಯೂಸ್ ಅಪ್ ಡೇಟ್, ಇಬುಕ್ಸ್ ಇತ್ಯಾದಿ ಅಪ್ಲಿಕೇಷನ್ ಗಳೂ ಇವೆ. ಇದರ ದರ ಸುಮಾರು 14 ಸಾವಿರ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot