ಐಪ್ಯಾಡ್ vs ಬ್ಲಾಕ್ ಬೆರಿ: ವ್ಯತ್ಯಾಸ ಕೇಳ್ರಿ

ಇವೆರಡು ಕಂಪನಿಗಳ ಐಪ್ಯಾಡ್ 2 ಮತ್ತು ಬ್ಲಾಕ್ ಬೆರ್ರಿ ಪ್ಲೇಬುಕ್ ಗಳನ್ನು ಕೈಗೆತ್ತಿಕೊಂಡಾಗ ಹೀಗಂತ ಅನಿಸಿದ್ದು ಸುಳ್ಳಲ್ಲ. ಆದರೂ ಇವೆರಡರ ನಡುವೆ ವ್ಯತ್ಯಾಸಗಳಿಲ್ಲ ಅಂತಲ್ಲ. ಇವೆರಡು ಸಾಕಷ್ಟು ಭಿನ್ನತೆ, ಸಾಮ್ಯತೆಯ ನಡುವೆಯೂ ಇಷ್ಟವಾಗುತ್ತದೆ.
* ವಿಸ್ತಾರದ ಲೆಕ್ಕದಲ್ಲಿ ಹೇಳುವುದಾದರೆ ಐಪ್ಯಾಡ್ 2 ಅಗ್ರಗಣ್ಯ. ಇದು 241.2 x 185.7 x 8.8 ಮಿಲಿಮೀಟರ್ ಗಿಗಾಂಟಿಕ್ ವಿಸ್ತಾರ ಹೊಂದಿದೆ. ಆದರೆ ಪ್ಲೇಬುಕ್ ವಿಸ್ತಾರ 194 x 130 x 10 ಮಿಲಿಮೀಟರ್ ಅಷ್ಟೇ!
* ತೂಕ ಮಾಡಿನೋಡಿದರೆ ಐಪ್ಯಾಡ್ 607 ಗ್ರಾಮ್ ಮತ್ತು ಪ್ಲೇಬುಕ್ 425 ಗ್ರಾಮ್ ತೂಗುತ್ತದೆ.
* ಬ್ಲಾಕ್ ಬೆರ್ರಿ ಪ್ಲೇಬುಕ್ 7 ಇಂಚಿನ, 600 x 1024 ರೆಸಲ್ಯೂಷನ್ ಟಿಎಫ್ ಟಚ್ ಸ್ಕ್ರೀನ್ ಹೊಂದಿದೆ. ಇಲ್ಲೂ ಐಪ್ಯಾಡ್ 2 ಮುಂದಿದ್ದು, 9 ಇಂಚಿನ, 16ಎಂ, 768 x 1024 ಪಿಕ್ಸೆಲ್ ರೆಸಲ್ಯೂಷನ್ ಕಲರ್ ಎಲ್ ಇಡಿ ಬಾಕ್ ಲಿಟ್ ಟಿಎಫ್ ಟಿ ಟಚ್ ಸ್ಕ್ರೀನ್ ಹೊಂದಿದೆ.
* ಇವೆರಡು ಟ್ಯಾಬ್ಲೆಟ್ ನಲ್ಲೂ ಆಕ್ಸೆಲರೊಮೀಟರ್ ಸೆನ್ಸಾರ್ ಮತ್ತು ಮಲ್ಟಿಟಚ್ ಸೌಲಭ್ಯವಿದೆ.
* ಇವೆರಡೂ 3.5 ಇಂಚಿನ ಆಡಿಯೋ ಜಾಕ್ ಹೊಂದಿವೆ. ಆದರೆ ಐಪ್ಯಾಡ್ 2ನ ಲೌಡ್ ಸ್ಪೀಕರ್ ಗುಣಮಟ್ಟ ಹೆಚ್ಚು ಇಷ್ಟವಾಗುತ್ತದೆ.
* ಐಪ್ಯಾಡಿಗಿಂತ ವೇಗವಾಗಿ ಅಪ್ಲಿಕೇಷನ್ ಗಳನ್ನು ಪ್ಲೇಬುಕ್ ನಲ್ಲಿ ಆಕ್ಸೆಸ್ ಮಾಡಬಹುದಾಗಿದೆ. ಪ್ಲೇಬುಕ್ 1 ಜಿಬಿ RAM ಮತ್ತು ಐಪ್ಯಾಡ್ 2 512 ಎಂಬಿ RAM ಹೊಂದಿವೆ. ಇವೆರಡೂ ಟ್ಯಾಬ್ಲೆಟ್ ಗಳು 64 ಜಿಬಿ ವರೆಗೆ ಸಂಗ್ರಹ ಸಾಮರ್ಥ್ಯ ಹೊಂದಿವೆ.
* ಐಪ್ಯಾಡ್ 1 GHz A5 ARM ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದೆ. ಆದರೆ ಪ್ಲೇಬುಕ್ ಡ್ಯೂಯಲ್ ಕೋರ್ ಎ9 ಪ್ರೊಸೆಸರ್ ಹೊಂದಿದೆ.
* ಇವೆರಡು ಟ್ಯಾಬ್ಲೆಟ್ ಗಳಲ್ಲಿ ಜೋಡಿ ಕ್ಯಾಮರಾಗಳಿವೆ. ಪ್ಲೇಬುಕ್ ನಲ್ಲಿ 1080p ರೆಸಲ್ಯೂಷನ್ ಮತ್ತು ಐಪ್ಯಾಡ್2ನಲ್ಲಿ 720p ರೆಸಲ್ಯೂಷನ್ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ.
* ಇವೆರಡು ಟ್ಯಾಬ್ಲೆಟ್ ಗಳು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಹೊಂದಿವೆ. ಐಪ್ಯಾಡ್ 2 ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರಕುತ್ತದೆ. ಆದರೆ ಪ್ಲೇಬುಕ್ ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ದೊರಕುತ್ತದೆ.
* ಆಪಲ್ ಐಪ್ಯಾಡ್ 2 ದರ ಸುಮಾರು 30-40 ಸಾವಿರ ರು. ಆಸುಪಾಸಿನಲ್ಲಿದೆ. ಆದರೆ ಪ್ಲೇಬುಕ್ ದರ 28-38 ಸಾವಿರ ರು. ಆಸುಪಾಸಿನಲ್ಲಿ ದೊರಕುತ್ತದೆ. ( ಮೆಮೊರಿ ಸಂಗ್ರಹ ಸಾಮರ್ಥಕ್ಕೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಿರುತ್ತದೆ).


Click it and Unblock the Notifications








