Subscribe to Gizbot

ಸ್ಯಾಮ್ ಸಂಗ್ ನ ಎನ್100 ನೆಟ್ ಬುಕ್ ಗೆ ವಿಂಡೋಸ್ ಸಾಥ್

Posted By: Staff

ಸ್ಯಾಮ್ ಸಂಗ್ ನ ಎನ್100 ನೆಟ್ ಬುಕ್ ಗೆ ವಿಂಡೋಸ್ ಸಾಥ್
ಸ್ಯಾಮ್ ಸಂಗ್ ನ ಎನ್100, ಮಿಗೊ ಅಪರೇಟಿಂಗ್ ಸಿಸ್ಟಮ್ ನಲ್ಲಿ ಪ್ರಥಮ ನೆಟ್ ಬುಕ್ ಆಗಿದೆ. ಇದು ಸಾಕಷ್ಟು ಜನಪ್ರಿಯವೂ ಹೌದು. ಆದರೆ ಈ ಸಾಧನ ವಿಂಡೋಸ್ ಅಪರೇಟಿಂಗ್ ಸಿಸ್ಟಮ್ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಹೆಚ್ಚಿನವರು ಭಾವಿಸುವುದು ಸುಳ್ಳಲ್ಲ.

ಹೆಚ್ಚಿನ ಜನರ ನಿರೀಕ್ಷಗೆ ತಕ್ಕಂತೆ ಸ್ಯಾಮ್ ಸಂಗ್ ವಿಂಡೋಸ್ ವರ್ಷನ್ ಎನ್100 ನೆಟ್ ಬುಕ್ ಹೊರತರಲು ಯೋಜಿಸುತ್ತಿದೆ. ನಂಬಲಾರ್ಹ ಮೂಲಗಳ ಪ್ರಕಾರ ಅತ್ಯುತ್ತಮ ಪ್ರೊಸೆಸರ್ ನೊಂದಿಗೆ ಕೈಗೆಟಕುವ ದರದಲ್ಲಿ ದೊರಕಲಿದೆಯಂತೆ. ಎನ್ಎಂ100 ಹೊಸ ಆವೃತ್ತಿಗೆ "ಸ್ಯಾಮ್ ಸಂಗ್ ಎನ್102 ನೆಟ್ ಬುಕ್" ಎಂದು ನಾಮಕರಣ ಮಾಡಲಾಗುವುದಂತೆ!

ನೂತನ ನೆಟ್ ಬುಕ್ ಇಂಟೆಲ್ ಅಟಾಂ ಪ್ರೊಸೆಸರ್, ವಿಂಡೋಸ್ 7 ಕ್ಯೂಎಸ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಒಟ್ಟಾರೆ ಈ ನೆಟ್ ಬುಕ್ ತೂಕ ಸುಮಾರು ಒಂದು ಕೆ.ಜಿ. ಇರಲಿದೆ. ಇದರ ದರ ಭಾರತದಲ್ಲಿ ಸುಮಾರು 15 ಸಾವಿರ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ವಿಶೇಷತೆಗಳು
* 10.1 ಇಂಚಿನ ಎಲ್ಇಡಿ ಡಿಸ್ ಪ್ಲೇ
* ಸ್ಟಾಂಡರ್ಡ್ ಕಂಪ್ಯೂಟರ್ ಸ್ಕ್ರೀನ್ ರೆಸಲ್ಯೂಸನ್(1024 x 768 ಪಿಕ್ಸೆಲ್).
* ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್
* ಇಂಟೆಲ್ ಜಿಎಂಎ 3150 ಗ್ರಾಫಿಕ್ಸ್ ಆಕ್ಸಿಲೆರೇಟರ್ ಕಾರ್ಡ್
* ಒಂದು ಜಿಬಿ ಡಿಡಿಆರ್3 RAM, ಡಿಸ್ಕ್ ಡ್ರೈವ್ ಗಾತ್ರ 250 ಜಿಬಿ
* ಅತ್ಯುತ್ತಮ ದಕ್ಷತೆಯ 3 ಸೆಲ್ ಲೀಥಿಯಂ ಐಯಾನ್ 40 ವೋಲ್ಟೆಜ್ ಬ್ಯಾಟರಿ(ಎಷ್ಟು ಗಂಟೆ ಬ್ಯಾಟರಿ ಬಾಳಿಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ).
* 4ಇನ್1 ಮೆಮೊರಿ ಕಾರ್ಡ್ ರೀಡರ್
* ವಿ2.0 ಯುಎಸ್ ಬಿ ಕಾರ್ಡ್
* ಲೇನ್ ಪೋರ್ಟ್, ಹೆಡ್ ಫೋನ್ ಔಟ್, ಮೈಕ್ರೊಫೋನ್ ಇನ್ ಪೋರ್ಟ್

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot