ಹುರ್ರೆ ಆರು ಸಾವಿರ ರು.ಗೆ ಟ್ಯಾಬ್ಲೆಟ್ ಕಂಪ್ಯೂಟರ್!!

Posted By: Staff

ಹುರ್ರೆ ಆರು ಸಾವಿರ ರು.ಗೆ ಟ್ಯಾಬ್ಲೆಟ್ ಕಂಪ್ಯೂಟರ್!!
ದೇಶದಲ್ಲಿ ಟ್ಯಾಬ್ಲೆಟ್ ದರ 8-10 ಸಾವಿರಕ್ಕಂತ ಕಡಿಮೆಗೆ ಸಿಗೋದೇ ಇಲ್ಲ. ಆದರೆ ಇದೀಗ ಸುಮಾರು 6 ಸಾವಿರ ರು.ಗೆ ಟ್ಯಾಬ್ಲೆಟ್ ಕಂಪ್ಯೂಟರೊಂದನ್ನು ಖರೀದಿಸುವ ಯೋಗ ಗ್ರಾಹಕರಿಗೆ ದೊರಕಲಿದೆ. ಯುರೋಪ್ ಮೂಲದ ಮೊಬೈಲ್ ಕಂಪನಿ "ಫ್ಲೈಮೊಬೈಲ್" ದೇಶಕ್ಕೆ ಅಗ್ಗದ ಟ್ಯಾಬ್ಲೆಟ್ ಪರಿಚಯಿಸಲು ಯೋಜಿಸಿದೆ.

ಫ್ಲೈ ಕಂಪನಿಯು ದೇಶದ ಟ್ಯಾಬ್ಲೆಟ್ ಮಾರುಕಟ್ಟೆಗೆ ಅಗ್ಗದ ಸಾಧನದೊಂದಿಗೆ ಪ್ರವೇಶಿಸಲು ನಿರ್ಧರಿಸಿದೆ. ಈ ಟ್ಯಾಬ್ಲೆಟ್ ಮುಂದಿನ ತಿಂಗಳೇ ಮಾರುಕಟ್ಟೆಗೆ ಆಗಮಿಸಲಿದೆ ಎಂದು ವರದಿಗಳು ಹೇಳಿವೆ. ಇದೀಗ ಈ ಟ್ಯಾಬ್ಲೆಟನ್ನು ರಷ್ಯಾದಲ್ಲಿ ಅನಾವರಣ ಮಾಡಲಾಗಿದೆ. ಇದು ಭಾರತಕ್ಕೆ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ನೊಂದಿಗೆ ಆಗಮಿಸಲಿದೆಯಂತೆ!

ಈ ಟ್ಯಾಬ್ಲೆಟ್ ಕಂಪ್ಯೂಟರ್ ಹೆಸರು ಫ್ಲೈ ವಿಷನ್. ಇದು 7 ಇಂಚಿನ ಆಕರ್ಷಕ ಟ್ಯಾಬ್ಲೆಟ್ ಆಗಿದೆ. ಇದು ಗೂಗಲ್ ಆಂಡ್ರಾಯ್ಡ್ ವಿ2.2 ಫ್ರೊಯೊ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಇದರ ಕಾರ್ಯಕ್ಷಮತೆ ಹೆಚ್ಚು ಆಕರ್ಷಕವಾಗಿಲ್ಲದಿದ್ದರೂ ಪರವಾಗಿಲ್ಲ ಅನ್ನೋ ರೀತಿಯಲ್ಲಿ ಇದೆ.

ವದಂತಿಗಳು ಸುಳ್ಳಾಗುವುದಿಲ್ಲ ಎಂಬುದನ್ನು ನೀವು ನಂಬಿದರೆ ಈ ಟ್ಯಾಬ್ಲೆಟ್ ಭಾರತದ ಅಗ್ಗದ ಟ್ಯಾಬ್ಲೆಟ್ ಆಗಲಿದೆ. ಅಂದರೆ ಇದರ ದರ ಸುಮಾರು 6 ಸಾವಿರ ರು. ಇರಲಿದೆಯಂತೆ. ಇದು 256 ಎಂಬಿ RAM ಹೊಂದಿರುವುದರಿಂದ ವೇಗವಾಗಿ ಅಪ್ಲಿಕೇಷನ್ ಆಕ್ಸೆಸ್ ಮಾಡಲು ಸಾಧ್ಯವಿಲ್ಲ. ತುಸು ನಿಧಾನದಲ್ಲಿ ಆಪ್ ಅಪರೇಟ್ ಮಾಡಬಹುದಾಗಿದೆ.

ಇದು 4 ಸಾವಿರ ಮೆಗಾವ್ಯಾಟಿನ ಲಿ ಐಯಾನ್ ಬ್ಯಾಟರಿ ಹೊಂದಿರಲಿದ್ದು ಸುಮಾರು 6ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ನೀಡಲಿದೆ. ಅಂದ್ರೆ ಸತತವಾಗಿ ಆರುಗಂಟೆಗಳ ಕಾಲ ಬಳಸಬಹುದಾಗಿದೆ. ಇದರಲ್ಲಿ ಸುಮಾರು 16 ಜಿಬಿ ವರೆಗೆ ಸಂಗ್ರಹ ಸಾಮರ್ಥ್ಯ ವಿಸ್ತರಿಸಬಹುದಾಗಿದೆ.

ಇದು ಎಚ್ ಡಿ ಸಾಮರ್ಥ್ಯ ಹೊಂದಿದ್ದು, ಹೈಡೆಫಿನೇಷನ್ ವಿಡಿಯೋಗಳನ್ನು ಸುಲಭವಾಗಿ ನೋಡಬಹುದಾಗಿದೆ. ಉಳಿದಂತೆ ಇದರಲ್ಲಿ ಎಂಎಸ್ ಆಫೀಸ್, ಗೂಗಲ್ ಟಾಕ್, ಜಿಮೇಲ್, ಮ್ಯಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಕಷ್ಟು ಅಪ್ಲಿಕೇಷನ್ ಗಳು ಇರಲಿವೆ. ಇಂಟರ್ ನೆಟಿಗಾಗಿ ವೈಫೈ ಮತ್ತು ಜಿಪಿಆರ್ಎಸ್ ಇರಲಿದೆ. ಇದು ಜಿಎಸ್ಎಂ ಸಿಮ್ ಕಾರ್ಡ್ ಗೂ ಸಪೋರ್ಟ್ ಮಾಡುತ್ತದಂತೆ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot