Subscribe to Gizbot

ಸೋನಿಯಿಂದ 15 ಇಂಚಿನ ಫುಲ್ ಎಚ್ ಡಿ ಲ್ಯಾಪ್ ಟಾಪ್

Posted By: Staff

ಸೋನಿಯಿಂದ 15 ಇಂಚಿನ ಫುಲ್ ಎಚ್ ಡಿ ಲ್ಯಾಪ್ ಟಾಪ್
ಸೋನಿ ವಿಯೊವೊ ಲ್ಯಾಪ್ ಟಾಪ್ ಗಳು ಮತ್ತೆ ಫಾರ್ಮಿಗೆ ಮರಳಿವೆ. ಸೋನಿ Vaio ಎಸ್ ಸರಣಿಯ ಜನಪ್ರಿಯ ಲ್ಯಾಪ್ ಟಾಪ್ ಗಳು ಕೂಡ ಹೌದು. ಆದರೆ ಅದರ ಡಿಸ್ ಪ್ಲೇ 13.3 ಇಂಚು ದೊಡ್ಡದಾಗಿರುವುದರಿಂದ ಕೆಲವರು ಇಷ್ಟಪಟ್ಟಿರಲಿಲ್ಲ.

ಕೊಂಚ ಡಿಸ್ ಪ್ಲೇ ದೊಡ್ಡದಿರಲಿ ಎಂದು ಹಲವು ಬಳಕೆದಾರರು ಕೇಳಿದ್ದು ಕಂಪನಿಯ ಕಿವಿಗೆ ತಲುಪಿದೆ. ಇದೀಗ ಒಂದಿಷ್ಟು ಹೊಸ ಫೀಚರುಗಳೊಂದಿಗೆ 15.5 ಇಂಚು ಡಿಸ್ ಪ್ಲೇಯ ವಿಯೊವೊ ಲ್ಯಾಪ್ ಟಾಪ್ ಗಳನ್ನು ಹೊರತರಲು ಕಂಪನಿ ಚಿಂತನೆ ನಡೆಸಿದೆ.

ನೂತನ ಲ್ಯಾಪ್ ಟಾಪ್ ಫುಲ್ ಹೈಡೆಫಿನೇಷನ್ ಫೀಚರ್ಸ್ ಹೊಂದಿರಲಿದೆ. ಜೊತೆಗೆ ಇದರ ಬಾಡಿ ವಿನ್ಯಾಸ ಹೆಚ್ಚು ಆಕರ್ಷಕವಾಗಿರಲಿದೆ. ಆದರೆ ಇದರ ತೂಕ ಮಾತ್ರ(4.4 ಪೌಂಡ್) ಕಡಿಮೆಯಾಗಲಿದೆ. ಹೀಗಾಗಿ ಹಗುರವಾದ ಅತ್ಯಧಿಕ ಕಾರ್ಯಕ್ಷಮತೆಯ ಸೋನಿ ಲ್ಯಾಪ್ ಟಾಪ್ ಎದುರು ನೋಡುತ್ತಿರುವರಿಗೆ ಇದು ಸೂಕ್ತ ಆಯ್ಕೆಯಾಗಬಹುದು.

ಇದರ ಸ್ಕ್ರೀನ್ ಗಾತ್ರ 1920 x 1080 ಪಿಕ್ಸೆಲ್ ಇರಲಿದೆ. ಈ ಲ್ಯಾಪ್ ಟಾಪ್ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿರಲಿದೆಯಂತೆ. ಆದರೆ ಎಷ್ಟು ಗಂಟೆ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿಲ್ಲ.

ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ ಐ7 ಪ್ರೊಸೆಸರ್ ಹೊಂದಿರಲಿದೆ. ಇದರಲ್ಲಿ 1080 ರೆಸಲ್ಯೂಷನ್ ವಿಡಿಯೋ ಪ್ಲೇ ಮಾಡಬಹುದಾಗಿದೆ. ನೂತನ ಲ್ಯಾಪ್ ಟಾಪ್ ಗೆ ಡೈನಾಮಿಕ್ ಹೈಬ್ರಿಡ್ ಗ್ರಾಫಿಕ್ಸ್ ಸಿಸ್ಟಮ್ ಎಂಬ ಹೊಸ ಕೂಲ್ ತಂತ್ರಜ್ಞಾನ ಕೂಡ ಅಳವಡಿಸಲು ಕಂಪನಿ ನಿರ್ಧರಿಸಿದೆ. ಇದರ ದರ ಭಾರತದಲ್ಲಿ ಸುಮಾರು 43 ಸಾವಿರ ರುಪಾಯಿ ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot