ಶೀಘ್ರದಲ್ಲಿ ನಿರೀಕ್ಷಿಸಿ ಆಸಸ್ ಯುಎಸ್21 ಅಲ್ಟ್ರಾ ಬುಕ್

Posted By: Staff

ಶೀಘ್ರದಲ್ಲಿ ನಿರೀಕ್ಷಿಸಿ ಆಸಸ್ ಯುಎಸ್21 ಅಲ್ಟ್ರಾ ಬುಕ್
ಎಲ್ಲಾ ಕಂಪನಿಗಳು ಹಗುರ ಲ್ಯಾಪ್ ಟಾಪ್, ನೆಟ್ ಬುಕ್ ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದೀಗ ಆಸಸ್ ಕಂಪನಿ ಕೂಡ ಅತ್ಯಂತ ಹಗುರ ಅಲ್ಟ್ರಾ ಬುಕ್ ಮಾಡೆಲ್ ಹೊರತಂದಿದೆ. ಇತ್ತೀಚೆಗೆ ನಡೆದ ಕಂಪ್ಯೂಟೆಕ್ಸ್ ಕಾರ್ಯಕ್ರಮವೊಂದರಲ್ಲಿ ಕಂಪನಿಯು ನೂತನ ಅಲ್ಟ್ರಾಬುಕ್ ಪ್ರದರ್ಶಿಸಿತ್ತು. ಇದರ ಕುರಿತಾದ ಒಂಚೂರು ಮಾಹಿತಿ ಇಲ್ಲಿದೆ.

ಇದು ಹಗುರ ಅಲ್ಟ್ರಾಬುಕ್. ಎಷ್ಟು ಹಗುರವೆಂದರೆ ನಿಮ್ಮ ಕೈಯಲ್ಲೊಂದು ಅಲ್ಟ್ರಾಬುಕ್ ಅಥವಾ ಲ್ಯಾಪ್ ಟಾಪ್ ಸಾಧನವೊಂದು ಇದೆಯೆಂದು ತಿಳಿಯುವುದಿಲ್ಲವಂತೆ. ಇದು ನಿಮಗೆ ಮೆಕ್ ಬುಕನ್ನು ನೆನಪಿಸಿದರೂ ನೆನಪಿಸಬಹುದು. ಯುಎಕ್ಸ್ 21 ಅಲ್ಟ್ರಾಬುಕ್ ನ್ನು ಐಷಾರಾಮಿ ಫೀಚರುಗಳಿಂದ ನಿರ್ಮಿಸಲಾಗಿದೆ. ಇದು 13 ಇಂಚಿನ ಪರದೆ ಹೊಂದಿದ್ದು ಕೇವಲ 2.5 ಪೌಂಡ್(1.13 ಕೆಜಿ) ತೂಕವಿದೆ.

ಕಂಪನಿಯು ಅತ್ಯಂತ ಸಣ್ಣ ಲ್ಯಾಪ್ ಟಾಪ್ ವಿನ್ಯಾಸ ಮಾಡಲು ಹಲವು ರಿಸ್ಕ್ ತೆಗೆದುಕೊಂಡಿದೆ. ಆದರೆ ಇದರ ದರ ಮಾತ್ರ ಹೆಚ್ಚು ದುಬಾರಿಯಲ್ಲ. ಇದರ ದರ ಭಾರತದಲ್ಲಿ ಸುಮಾರು 48 ಸಾವಿರ ರು. ಇರಲಿದೆ.

ವಿಶೇಷತೆ
* ಹಗುರ ಅಂದರೆ 1.13 ಕೆಜಿ.
* 13 ಇಂಚಿನ ಡಿಸ್ ಪ್ಲೇ
* ವಿ3.0 ಯುಎಸ್ ಬಿ ಪೋರ್ಟ್
* ಮೈಕ್ರೊ ಎಚ್ ಡಿಎಂಐ ಔಟ್, ಡಿಸಿ ಪವರ್ ಅಡಾಪ್ಟರ್
* 1.8 ಗಿಗಾಹರ್ಟ್ಸ್ ಇಂಟೆಲ್ ಕೊರ್ ಐ7-2677 ಎಂ ಪ್ರೊಸೆಸರ್
* 4 ಜಿಬಿ RAM
* ಅಂದಾಜು ದರ: 48 ಸಾವಿರ ರು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot