ಆಪಲ್ ಮೆಕ್ ಬುಕ್ 13 ಲ್ಯಾಪ್ ಟಾಪ್ ವಿಮರ್ಶೆ

Posted By: Staff

ಆಪಲ್ ಮೆಕ್ ಬುಕ್ 13 ಲ್ಯಾಪ್ ಟಾಪ್ ವಿಮರ್ಶೆ
ಆಪಲ್ ಕಂಪನಿ ಹೊರತರುವ ಉತ್ಪನ್ನಗಳು ಯಾವತ್ತೂ ಹೊಸ ಹವಾ ಸೃಷ್ಟಿಸುತ್ತವೆ. ಅದೇ ರೀತಿ ಕಂಪನಿಯ ಮೆಕ್ ಬುಕ್ ಸರಣಿಯ ಲ್ಯಾಪ್ ಟಾಪ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದವು. ಇದೀಗ ಕಂಪನಿಯು ಮೆಕ್ ಬುಕ್ ಸೀರಿಸ್ ನಲ್ಲಿ ಏರ್ 13 ಎಂಬ ನೂತನ ಲ್ಯಾಪ್ ಟಾಪ್ ಹೊರತರಲಿದೆ.

ಆಪಲ್ ಮೆಕ್ ಬುಕ್ ಏರ್ 13 ಲ್ಯಾಪ್ ಟಾಪ್ 13 ಇಂಚಿನ ಡಿಸ್ ಪ್ಲೇ ಹೊಂದಿದೆ. ಗ್ರಾಹಕರಿಗೆ ಇಷ್ಟವಾಗುವ ಹತ್ತು ಹಲವು ಫೀಚರುಗಳು ಈ ಆಪಲ್ ಲ್ಯಾಪ್ ಟಾಪ್ ನಲ್ಲಿವೆ ಅನ್ನೋದು ಸುಳ್ಳಲ್ಲ.

ಮೆಕ್ ಬುಕ್ ಏರ್ 13 ಮೂರನೇ ತಲೆಮಾರಿನ ಆಪಲ್ ಲ್ಯಾಪ್ ಟಾಪ್ ಆಗಿದೆ. ಇದು ತೆಳ್ಳಗಿದ್ದು ಅತ್ಯಧಿಕ ಕಾರ್ಯಕ್ಷಮತೆ ಹೊಂದಿದೆ. ಇದರ ಮೆಟಾಲಿಕ್ ಬಾಡಿ ವಿನ್ಯಾಸದಿಂದ ಹಿಡಿದು ಅದರ ಪ್ರತಿಭಾಗವೂ ಇಷ್ಟವಾಗುತ್ತದೆ. ಯಾಕೆಂದರೆ ಇದು ಆಪಲ್ ಪ್ರೊಡಕ್ಟ್.

ಆಪಲ್ ಯಾವತ್ತು ಹೆಣಭಾರದ ಉತ್ಪನ್ನ ತರುವುದಿಲ್ಲ. ಸಣ್ಣ ಐಪ್ಯಾಡ್, ಸಣ್ಣ ಟ್ಯಾಬ್ಲೆಟ್ ಸೇರಿದಂತೆ ಕಂಪನಿಯ ಹೆಚ್ಚಿನ ಗ್ಯಾಜೆಟ್ ಗಳೆಲ್ಲ ಹಗುರವಾಗಿವೆ. ನೂತನ ಲ್ಯಾಪ್ ಟಾಪ್ ಕೂಡ ಕೇವಲ 1.34 ಕೆಜಿ ಇದೆ ಅಷ್ಟೇ! ಇದು 13 ಇಂಚಿನ ಸ್ಕ್ರೀನ್ ಹೊಂದಿದೆ. ಈ ಲ್ಯಾಪ್ ಟಾಪ್ ದರ ಸುಮಾರು 60 ಸಾವಿರ ರುಪಾಯಿ.

ಪ್ರಮುಖ ಫೀಚರುಗಳು

* ಎಸ್ಎಸ್ ಡಿ ಡ್ರೈವ್
* ಕೋರ್ ಐ5 ಪ್ರೊಸೆಸರ್
* 4 ಜಿಬಿ RAM, ಎರಡು 2ಜಿಬಿ ಡಿಡಿಆರ್3 ಸ್ಟ್ರೀಕ್ಸ್
* ಯುಎಸ್ ಬಿ ವಿ2.0 ಪೋರ್ಟ್, 3.5 ಎಂಎಂ ಹೆಡ್ ಫೋನ್ ಜಾಕ್
* ಆಕರ್ಷಕ ಸ್ಟೀರಿಯೊ, ಸಬ್ ವೂಪರ್ಸ್
* ಹೈ ಡೆಫಿನೇಷನ್ ವೆಬ್ ಕ್ಯಾಮ್
* ಎಚ್ ಡಿ 3000 ಜಿಪಿಯು 384 ಎಂಬಿ ವಿಡಿಯೋ ಮೆಮೊರಿ
* ಆರು ಗಂಟೆ ಬ್ಯಾಟರಿ ಬ್ಯಾಕಪ್
* ದರ: 60 ಸಾವಿರ ರು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot