ಏಸರ್ ಪುಟ್ಟ ಲ್ಯಾಪಿ ದರ ಕೇವಲ 11 ಸಾವಿರ ರು.

By Super
|
ಏಸರ್ ಪುಟ್ಟ ಲ್ಯಾಪಿ ದರ ಕೇವಲ 11 ಸಾವಿರ ರು.
ಒಂದು ಕಡೆಯಿಂದ ಮತ್ತೊಂದೆಡೆ ಸಾಗಿಸಲು ಸುಲಭವಾದ ಲ್ಯಾಪ್ ಟಾಪ್ ಅಂದ್ರೆ ತಕ್ಷಣ ನೆನಪಿಗೆ ಬರುವುದು ಏಸರ್. ಇದೀಗ ಕಂಪನಿಯು ನೂತನ ಲ್ಯಾಪ್ ಟಾಪ್ ಹೊರತರಲು ನಿರ್ಧರಿಸಿದೆ. ಅದರ ಹೆಸರು ಏಸರ್ ಏಸ್ಪೈರ್ ಒನ್ ಎಒಡಿ257.

ನೀವು ಜಾಸ್ತಿ ಪ್ರವಾಸ ಮಾಡುವಿರಾದರೆ ಅಥವಾ ಊರೂರು ಸುತ್ತುವ ಬಿಸಿನೆಸ್ ಮ್ಯಾನ್ ಆಗಿದ್ದರೆ ಈ ಲ್ಯಾಪ್ ಟಾಪ್ ನಿಮಗೆ ಸೂಕ್ತ. ಇಷ್ಟು ಫೋರ್ಟೆಬಲ್ ವಿನ್ಯಾಸದ, ಹಗುರ, ಆಕರ್ಷಕ ಫೀಚರು ಮತ್ತು ವಿಶೇಷತೆಯುಳ್ಳ ಇನ್ನೊಂದು ಲ್ಯಾಪ್ ಟಾಪ್ ಇರಲಿಕ್ಕಿಲ್ಲ. ಇದು ಟ್ರಾವೆಲಿಗರಿಗೆ ಸೂಕ್ತ ಲ್ಯಾಪ್ ಟಾಪ್.

ಇದರ ಸುಂದರ ಬಣ್ಣ ಮೊದಲ ನೋಟಕ್ಕೆ ಇಷ್ಟವಾಗುತ್ತದೆ. ಇದರ ತೂಕ ಕೇವಲ 999 ಗ್ರಾಂ. ಅಂದ್ರೆ ಒಂದು ಕೆ.ಜಿಗೆ ಒಂದು ಗ್ರಾಂ ಕಡಿಮೆ. ಇದರ ಡಿಸ್ ಪ್ಲೇ ಕೇವಲ 10.1 ಇಂಚಿದೆ.

ಇದು ಕೇವಲ ಸೌಂದರ್ಯ ಮತ್ತು ವಿನ್ಯಾಸಕ್ಕೆ ಸೀಮಿತವಾದ ಲ್ಯಾಪ್ ಟಾಪ್ ಅಲ್ಲ. ಇದರ ಕಾರ್ಯಕ್ಷಮತೆ ಕೂಡ ಇಷ್ಟವಾಗುವಂತ್ತಿದೆ. 1.66 ಗಿಗಾಹರ್ಟ್ಸ್ ಇಂಟೆಲ್ ಅಟಾಂ ಎನ್570 ಡ್ಯೂಯಲ್ ಪ್ರೊಸೆಸರ್, 250 ಜಿಬಿ ಹಾರ್ಡ್ ಡ್ರೈವ್, ಒಂದು ಜಿಬಿಯ ಡಿಡಿಆರ್3 RAM ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ.

ಇದರ ಸ್ಪೀಕರ್ ಅತ್ಯಧಿಕ ಗುಣಮಟ್ಟ ಮತ್ತು ಸ್ಪಷ್ಟತೆಯಿಂದ ಇಷ್ಟವಾಗುತ್ತದೆ. ಹೆಚ್ಚಿನ ನೋಟ್ ಬುಕ್ ಗಳಲ್ಲಿ ಬೇರೆ ಸ್ಪೀಕರ್ ಅಳವಡಿಸಿ ಸಂಗೀತ ಕೇಳಬೇಕಾಗುತ್ತದೆ. ಆದರೆ ಏಸರ್ ಏಸ್ಪೈರ್ ಒನ್ ಎಒಡಿ 257ನಲ್ಲಿರುವ ಅತ್ಯುತ್ತಮ ಧ್ವನಿ ಗುಣಮಟ್ಟದಿಂದಾಗಿ ಬೇರೆ ಸ್ಪೀಕರಿನ ಅಗತ್ಯವೇ ಇಲ್ಲ.

ಈ ಲ್ಯಾಪ್ ಟಾಪ್ ಮೂಲಕ ಸಹೋದ್ಯೋಗಿ, ಬಾಸ್ ಅಥವಾ ಸ್ನೇಹಿತರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮಾಡಬಹುದು. ಚಾಟಿಂಗ್ ಮಾಡಬಹುದು. ವೆಬ್ ಕ್ಯಾಮಿಗಾಗಿ .03 ಮೆಗಾ ಪಿಕ್ಸೆಲಿನ ಕ್ಯಾಮರಾ ಕೂಡ ಇದೆ.

ಉಳಿದಂತೆ ವಿಂಡೋಸ್ 7 ಸ್ಟಾರ್ಟರ್ ಅಪರೇಟಿಂಗ್ ಸಿಸ್ಟಮ್ ಮತ್ತು ಮೈಕ್ರೊಸಾಫ್ಟ್ ಆಫೀಸ್ ಸ್ಟಾರ್ಟರ್ 2010 ಇದರಲ್ಲಿದೆ. ಇಂಟೆಲ್ ಗ್ರಾಫಿಕ್ಸ್ ಮೀಡಿಯ ಆಕ್ಸಿಲರೇಟರ್, ವೈ-ಫೈ, ಮಲ್ಟಿ ಗೆಸ್ಚರ್ ಟಚ್ ಪ್ಯಾಡ್ ಇತ್ಯಾದಿ ಫೀಚರುಗಳು ಇಷ್ಟವಾಗುತ್ತವೆ. ಇದರ ದರ ಭಾರತದಲ್ಲಿ ಸುಮಾರು 11,900 ರು. ಇರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X