ಏಸರ್ ಟೈಮ್ ಲೈನ್ ಸಣ್ಣ ಲ್ಯಾಪ್ ಟಾಪ್ ವಿಮರ್ಶೆ

Posted By: Staff

ಏಸರ್ ಟೈಮ್ ಲೈನ್ ಸಣ್ಣ ಲ್ಯಾಪ್ ಟಾಪ್ ವಿಮರ್ಶೆ

ಏಸರ್ ಕಂಪನಿಯ ನೂತನ ಲ್ಯಾಪ್ ಟಾಪ್ ಹೆಸರು Acer Travelmate Timeline 8481T. ಹೆಸರಿನಂತೆ ಇದು ಪ್ರವಾಸಿಸ್ನೇಹಿ. ನಿತ್ಯ ಊರಿಂದ ಊರಿಗೆ ದೇಶದಿಂದ ದೇಶಕ್ಕೆ ಪ್ರಯಾಣ ಕೈಗೊಳ್ಳುವ ಬಿಸಿನೆಸ್ ಮ್ಯಾನ್ ವ್ಯಕ್ತಿಗಳಿಗೆ ಇದು ಸೂಕ್ತವಾಗಿದೆ.

8481ಟಿ ಆಕರ್ಷಕ ಲ್ಯಾಪ್ ಟಾಪ್. ಇದರ ಬ್ಯಾಟರಿ ಬಾಳಿಕೆಯೂ ದೀರ್ಘವಾಗಿದೆ. ಕಂಪನಿ ಪ್ರಕಾರ ಇದರ ಬ್ಯಾಟರಿ ಬಾಳಿಕೆ 9 ಗಂಟೆ. ಇದು ಹಗುರ ಲ್ಯಾಪ್ ಟಾಪ್. ಇದರ ತೂಕ ಕೇವಲ 1.45 ಕೆಜಿ ಇದೆ.

ಸ್ಲಿಮ್ ನೋಟ್ ಬುಕ್ "ಏಸರ್ ಟ್ರಾವೆಲ್ ಮೇಟ್ 8481 ಟಿ"ಯಲ್ಲಿ ಇಷ್ಟವಾಗದ ಸಂಗತಿಯೆಂದರೆ ಇದರಲ್ಲಿ ಆಪ್ಟಿಕಲ್ ಡ್ರೈವ್ ಇಲ್ಲ. ಆದರೆ ಹೆಚ್ಚು ಕಾರ್ಯಕ್ಷಮತೆ ಹೊಂದಿದೆ. ಮ್ಯಾಗ್ನಿಷಿಯಂ ಮತ್ತು ಅಲ್ಯುಮಿನಿಯಂನಿಂದ ಇದರ ಚಾಸೀ ನಿರ್ಮಿಸಲಾಗಿದೆ.

ಇದು ಹದಿನಾಲ್ಕು ಇಂಚಿನ ಡಿಸ್ ಪ್ಲೇ ಹೊಂದಿದೆ. ಈ ಸ್ಕ್ರೀನ್ ಆಂಟಿ-ರಿಫ್ಲೆಕ್ಟಿವ್ ಫೀಚರ್ ಹೊಂದಿದೆ. ಆದರೆ ಸ್ಕ್ರೀನ್ ರೆಸಲ್ಯೂಷನ್ ಮಾತ್ರ 1366 x 768 ಪಿಕ್ಸೆಲ್ ಆಗಿದೆ. ಕನಿಷ್ಠ 1600 x 900 ಪಿಕ್ಸೆಲ್ ಆದರೂ ಇರಬೇಕಿತ್ತು.

ಈ ಲ್ಯಾಪ್ ಟಾಪ್ ಕೀಬೋರ್ಡ್ ಆಕರ್ಷಕವಾಗಿದ್ದು ಸುಲಭವಾಗಿ ಟೈಪಿಸಬಹುದು. ಒಂದು ಕೀಯಿಂದ ಮತ್ತೊಂದು ಕೀಗೆ ಸಾಕಷ್ಟು ಸ್ಥಳಾವಕಾಶವೂ ಇದೆ. ಆದರೆ ಕೀ ಸದೃಢತೆ ಎಷ್ಟು ದಿನ ಬಾಳಿಕೆ ಬರಬಹುದು ಅನ್ನೋದು ಖಚಿತವಾಗಿ ಹೇಳಲಾಗದು. ಈ ಲ್ಯಾಪ್ ಟಾಪ್ ಆರಂಭಿಕ ದರ 50 ಸಾವಿರ ರು.

ಪ್ರಮುಖ ವಿಶೇಷತೆಗಳು

* ವಿಂಡೋಸ್ 7 ಪ್ರೊಫೆಶನಲ್ ಅಪರೇಟಿಂಗ್ ಸಿಸ್ಟಮ್

* 1.6 ಗಿಗಾಹರ್ಟ್ಸ್ ಇಂಟೆಲ್ ಕೋರ್ ಐ5-2467ಎಂ ಪ್ರೊಸೆಸರ್

* 3 ಜಿಬಿ RAM. 8 ಜಿಬಿವರೆಗೆ ವಿಸ್ತರಿಸಬಹುದು.

* ಫುಲ್ ಎಚ್ ಡಿ ವಿಡಿಯೋ ಸಪೋರ್ಟ್, ಇಂಟೆಲ್ ಎಚ್ ಡಿ 3000 ಗ್ರಾಫಿಕ್ಸ್

* NVIDIA ಜಿಪಿಯು

* 320 ಜಿಬಿ ಹಾರ್ಡ್ ಡಿಸ್ಕ್, ಎಸ್ ಎಸ್ ಡಿ ಡಿಸ್ಕನ್ನು 64 ಜಿಬಿವರೆಗೆ ವಿಸ್ತರಿಸಬಹುದು.

* ವಿ3.0 ಬ್ಲೂಟೂಥ್ ತಂತ್ರಜ್ಞಾನ

* 3ಜಿ, 802.11 ವೈಫೈ(ಗಿಗಾಬಿಟ್ ಎಥರ್ನೆಟ್ ಸೌಲಭ್ಯವೂ ಇದೆ)

* ಇಂಟೆಲ್ ವೈರ್ ಲೆಸ್ ಡಿಸ್ ಪ್ಲೇ ತಂತ್ರಜ್ಞಾನ. ಇದು ಪ್ರಸಂಟೇಷನ್ ಇತ್ಯಾದಿಗಳಿಗೆ ಸುಲಭ. ವೈರ್ ಅಗತ್ಯವಿಲ್ಲ.

* ಬ್ಯಾಟರಿ ಬಾಳಿಕೆ ಸುಮಾರು 9 ಗಂಟೆ

* ಆರಂಭಿಕ ದರ: 50 ಸಾವಿರ ರು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot