ಆರ್ಕೊಸ್ ಜಿ9 ಟ್ಯಾಬ್ಲೆಟ್ ಕಂಪ್ಯೂಟರ್ ಬಿಡುಗಡೆ ಖಾತ್ರಿ

Posted By: Staff

ಆರ್ಕೊಸ್ ಜಿ9 ಟ್ಯಾಬ್ಲೆಟ್ ಕಂಪ್ಯೂಟರ್ ಬಿಡುಗಡೆ ಖಾತ್ರಿ
ಆರ್ಕೊಸ್ ಅಂದ್ರೆ ವಿಶೇಷ ತಂತ್ರಜ್ಞಾನ, ಕಂಪ್ಯೂಟರ್, ಟ್ಯಾಬ್ಲೇಟ್ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಜನಪ್ರಿಯ ಹೆಸರು. ಇದೀಗ ಕಂಪನಿಯು ನೂತನ ಅಡ್ವಾನ್ಸ್ ಡ್ ಟ್ಯಾಬ್ಲೆಟ್ ಕಂಪ್ಯೂಟರೊಂದನ್ನು ಹೊರತರಲು ನಿರ್ಧರಿಸಿದೆ. ಅದರ ಹೆಸರು ಆರ್ಕೊಸ್ ಜಿ9 ಟ್ಯಾಬ್ಲೆಟ್.

ನೂತನ ಟ್ಯಾಬ್ಲೆಟ್ 8 ಇಂಚು ಮತ್ತು 10 ಇಂಚಿನ ಡಿಸ್ ಪ್ಲೇಯ ಎರಡು ಆವೃತ್ತಿಗಳಲ್ಲಿ ದೊರಕಲಿದೆ. ಕಂಪನಿಯು ಇದನ್ನು ಸುಮಾರು 16 ದೇಶಗಳಲ್ಲಿ ಬಿಡುಗಡೆ ಮಾಡಲಿದೆ. ಇವೆರಡು ಆವೃತ್ತಿಗಳು ಕೆಲವು ವಿಶೇಷ ಫೀಚರುಗಳಿಂದ ಇಷ್ಟವಾಗುತ್ತದೆ.

ಇದರಲ್ಲಿ ಆರ್ಕೊಸ್ 8 ಜಿ9 ಟ್ಯಾಬ್ಲೆಟ್ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಹೊರತರಲಿದೆ. ಯಾಕೆಂದರೆ ಇದನ್ನು ಸುಲಭವಾಗಿ ಹೊತ್ತೊಯ್ಯಬಹುದು. ಇವೆರಡು ಟ್ಯಾಬ್ಲೆಟ್ ಗಳು ಆಂಡ್ರಾಯ್ಡ್ 3.2 ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರಲ್ಲಿ ಶಕ್ತಿಶಾಲಿ ಡ್ಯೂಯಲ್ ಕೋರ್ ಅಪರೇಟಿಂಗ್ ಸಿಸ್ಟಮ್ ಇದೆ.

ಇವೆರಡು ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ "3ಜಿ ಸ್ಟಿಕ್" ಇರೋದು ವಿಶೇಷ. ಇದನ್ನು ಹೊಂದು ಬಾಹ್ಯ ಯುಎಸ್ ಬಿ ಮೂಲಕ 3ಜಿ ಸಿಮ್ ಕಾರ್ಡಿಗೂ ಕನೆಕ್ಟ್ ಮಾಡಬಹುದಾಗಿದೆ. ಇದೇ ಸ್ಟಿಕ್ ನಿಮ್ಮ ಪಿಸಿ ಅಥವಾ ಲ್ಯಾಪ್ ಟಾಪ್ ಗಳಲ್ಲಿಯೂ ಇದೆ.

ಮೇಟಾ ಡೇಟಾ, ಫುಲ್ ಸ್ಕ್ರೀನ್ ಆಯ್ಕೆ, ವಿಡಿಯೋ ಪ್ಲೇಯರ್, ಮ್ಯೂಸಿಕ್ ಪ್ಲೇಯರ್ ಮತ್ತು ಅತ್ಯಧಿಕ ಗ್ರಾಫಿಕ್ ಬೆಂಬಲದ ಗೇಮಿಂಗ್ ಇತ್ಯಾದಿ ಫೀಚರುಗಳಿವೆ. ಹೀಗೆ ಹತ್ತು ಹಲವು ಫೀಚರುಗಳು ಇರಲಿವೆ. 8 ಇಂಚಿನ ಟ್ಯಾಬ್ಲೆಟ್ ದರ 20 ಸಾವಿರ ಮತ್ತು 10 ಇಂಚಿನ ಟ್ಯಾಬ್ಲೆಟ್ ದರ ಸುಮಾರು 25 ಸಾವಿರ ರು. ಇರುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot