2012ರಲ್ಲಿ ಗೇಮ್ಸ್ ಟಾಪ್ ಟ್ಯಾಬ್ಲೆಟ್ ಮಾರುಕಟ್ಟೆಗೆ

Posted By: Staff

2012ರಲ್ಲಿ ಗೇಮ್ಸ್ ಟಾಪ್ ಟ್ಯಾಬ್ಲೆಟ್ ಮಾರುಕಟ್ಟೆಗೆ
ಜನರ ವಿವಿಧ ಅವಶ್ಯಕತೆಗಳಿಗೆ ತಕ್ಕಂತೆ ಟ್ಯಾಬ್ಲೆಟ್ ಗಳಿಂದು ಮಾರುಕಟ್ಟೆಗೆ ಆಗಮಿಸುತ್ತಿವೆ. ಅಂದರೆ ಚಿತ್ರ ಬಿಡಿಸೋರಿಗೆ, ಡಾಕ್ಟರಿಗೆ, ಬಿಲ್ ಮಾಡೋರಿಗೆ, ಗೇಮ್ಸ್ ಪ್ರಿಯರಿಗೆ ಹೀಗೆ ಹಲವು ಅವಶ್ಯಕತೆಗಳಿಗೆ ತಕ್ಕಂತೆ ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಆಗಮಿಸುತ್ತಿವೆ.

ಇದೀಗ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಇರುವ ಗೇಮಿಂಗ್ ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಗೇಮ್ಸ್ ಸ್ಟಾಪ್ ಅನ್ನೋ ಕಂಪನಿ ಎಕ್ಸ್ ಕ್ಲೂಸಿವ್ ಆಗಿರೋ ಗೇಮಿಂಗ್ ಟ್ಯಾಬ್ಲೆಟ್ ಹೊರತರುವ ಸುದ್ದಿ ಆಟಪ್ರಿಯರಿಗೆ ಇಷ್ಟವಾದೀತು. ಗೇಮ್ಸ್ ಸ್ಟಾಪ್ ಕಂಪನಿಯು ವಿಡಿಯೋ ಗೇಮ್ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದೆ.

"ಹೊಸ ಆಂಡ್ರಾಯ್ಡ್ ಆಧರಿತ ಗೇಮಿಂಗ್ ಟ್ಯಾಬ್ಲೆಟ್ ಮುಂದಿನ ವರ್ಷ ಹೊರತರಲಿದ್ದೇವೆ. ಇದರಲ್ಲಿ ಹಲವು ಕ್ಲಾಸಿಕ್ ವಿಡಿಯೋ ಗೇಮ್ ಗಳನ್ನು ಮುಂಚಿತವಾಗಿಯೇ ಇನ್ ಸ್ಟಾಲ್ ಮಾಡಿರಲಿದ್ದೇವೆ. ಇದು ನಿಂಟೆಂಡೊ, ಮೈಕ್ರೊಸಾಫ್ಟ್, ಸೋನಿ, ಆಪಲ್ ಇತ್ಯಾದಿ ಕಂಪನಿಗಳ ಗೇಮಿಂಗ್ ಟ್ಯಾಬ್ಲೆಟ್ ಗಳಿಗೆ ಸಮರ್ಥ ಪೈಪೋಟಿ ನೀಡಲಿದೆ" ಎಂದು ಗೇಮ್ಸ್ ಸ್ಟಾಪ್ ಅಧ್ಯಕ್ಷರು ಹೇಳಿದ್ದಾರೆ.

ಹೊಸ ಗೇಮಿಂಗ್ ಟ್ಯಾಬ್ಲೆಟಿನಲ್ಲಿ ಅನನ್ಯ ಆಟದ ಅನುಭವ ಪಡೆಯಬಹುದು ಎಂದರು. ಇದು ಆಕರ್ಷಕ ತಂತ್ರಜ್ಞಾನ, ವರ್ಚ್ಯುಯಲ್ ಅನುಭವ, ಗ್ರಾಫಿಕ್ಸ್ ಇತ್ಯಾದಿಗಳಿಂದ ಇಷ್ಟವಾಗಲಿದೆ. ಇತರ ಗೇಮಿಂಗ್ ಲ್ಯಾಪ್ ಟಾಪ್ ಗಳಿಗಿಂತ ಕೊಂಚ ಹೆಚ್ಚು ಇದರಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ನೋಡೋಣ ಮಾರುಕಟ್ಟೆಗೆ ಬರಲಿ. ಚೆನ್ನಾಗಿದ್ದರೆ ಮುಂದಿನ ವರ್ಷ ಇದರಲ್ಲಿ ಆಡೋಣ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot