ಫ್ಯಾಷನ್ ವಿನ್ಯಾಸಕಿ HPಗೆ ಸೇರಿದ್ರೆ ಏನಾಗುತ್ತೆ?

Posted By: Staff

ಫ್ಯಾಷನ್ ವಿನ್ಯಾಸಕಿ HPಗೆ ಸೇರಿದ್ರೆ ಏನಾಗುತ್ತೆ?
ಕಂಪ್ಯೂಟರ್ ಮತ್ತು ಹಾರ್ಡ್ ವೇರ್ ತಯಾರಿಕೆಯಲ್ಲಿ ಎಚ್ ಪಿ ಜಗತ್ತಿನಲ್ಲಿಯೇ ಫೇಮಸ್. ಹೊಸ ಆವಿಷ್ಕಾರದಲ್ಲಿ ಈ ಕಂಪನಿ ಯಾವತ್ತೂ ಮುಂದು. ಅದು ತಂತ್ರಜ್ಞಾನದ ವಿಷ್ಯ ಇರಲಿ. ಅಥವಾ ವಿನ್ಯಾಸವೇ ಆಗಿರಲಿ. ಕಂಪನಿ ಸದಾ ಹೊಸ ಹೊಸ ವಿನ್ಯಾಸದ ಲ್ಯಾಪ್ ಟಾಪ್ ಹೊರತರುವ ಮೂಲಕ ಗ್ರಾಹಕರಿಗೆ ಮೋಡಿ ಮಾಡುತ್ತಲೇ ಇರುತ್ತದೆ.

ಎಚ್ ಪಿ ಇತ್ತೀಚೆಗೆ ವಿನ್ಯಾಸಕಿ ವಿವೆನೆ ಟ್ಯಾಮ್ ಜೊತೆಗೆಮೈತ್ರಿ ಮಾಡಿಕೊಂಡಿದೆ. Vivienne Tam ವಿಶ್ವದಲ್ಲಿಯೇ ಜನಪ್ರಿಯ ಫ್ಯಾಷನ್ ವಿನ್ಯಾಸಕಿ. ಆಕೆಗೂ ಕಂಪ್ಯೂಟರ್ ಕಂಪನಿಗೂ ಅದೇನೂ ಒಡಬಂಡಿಕೆ ಅನ್ನುತ್ತೀರಾ? ಆಕರ್ಷಕ ವಿನ್ಯಾಸದ ಲ್ಯಾಪ್ ಟಾಪ್ ವಿನ್ಯಾಸ ಮಾಡಲು ವಿಶ್ವದ ಜನಪ್ರಿಯ ವಿನ್ಯಾಸಕಿಯ ನೆರವನ್ನು ಕಂಪನಿ ಪಡೆದಿದೆ.

ಹೀಗಾಗಿ ಇನ್ನು ಮುಂದೆ ಎಚ್ ಪಿ ಲ್ಯಾಪ್ ಟಾಪ್ ನಲ್ಲಿ ಕಲಾತ್ಮಕತೆ, ಫ್ಯಾಷನ್, ಸ್ಟೈಲಿಶ್ ನಿರೀಕ್ಷಿಸಬಹುದು. ಇದರೊಂದಿಗೆ ಕಂಪನಿಯು ವಿಶೇಷ ಅಡಿಷನ್ ನೋಟ್ ಬುಕ್ ಹೊರತಂದಿದೆ. ಇದರ ವಿನ್ಯಾಸದ ಹಿಂದೆ ವಿವಿನೆ ಟ್ಯಾಮ್ ಕುಶಲತೆಯಿದೆ. ಈ ಸಣ್ಣ ನೋಟ್ ಬುಕ್ ನೋಡಲು ಟ್ರೆಂಡಿಯಾಗಿದೆ ಮತ್ತು ಕಾರ್ಯಕ್ಷಮತೆಯೂ ಅನನ್ಯವಾಗಿದೆ.

ಒಂದು ವರದಿಯ ಪ್ರಕಾರ ಕಂಪನಿ ಹೊರತರಲಿರುವ ಎಲ್ಲಾ ಆಕ್ಸೆಸರಿ ಮತ್ತು ನೋಟ್ ಬುಕ್ ಗಳ ವಿನ್ಯಾಸದ ಕುರಿತು Vivienne Tam ಕಾಳಜಿ ವಹಿಸಲಿದ್ದಾರಂತೆ. "ನನ್ನ ಪ್ರತಿನಿತ್ಯದ ಅಸೈನ್ ಮೆಂಟಿಗೆ ಹೋಲಿಸಿದರೆ ಇದು ಭಿನ್ನ. ಪ್ರಮುಖವಾಗಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅಡಿಷನ್ ನೋಟ್ ಬುಕ್ ವಿನ್ಯಾಸ ಮಾಡಿದ್ದೀನಿ" ಅಂತ ವಿವಿನೆ ಟ್ಯಾಮ್ ಹೇಳುತ್ತಾಳೆ.

ವಿವಿನೆ ಟ್ಯಾಮ್ ಕೈಚಳಕದಲ್ಲಿ ಮೂಡಿಬಂದ ಫ್ಯಾಷನೆಬಲ್ ನೋಟ್ ಬುಕ್ ಮುಂದಿನ ವರ್ಷದಲ್ಲಿ ಭಾರತಕ್ಕೂ ಆಗಮಿಸುವ ನಿರೀಕ್ಷೆಯಿದೆ. ಈ ನೋಟ್ ಬುಕ್ ದರವಿನ್ನೂ ಬಹಿರಂಗವಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot