ಎಚ್ ಪಿ ಟಚ್ ಸ್ಕ್ರೀನ್ ಡೆಸ್ಕ್ ಟಾಪ್ ಕಂಪ್ಯೂಟರ್

Posted By: Staff

ಎಚ್ ಪಿ ಟಚ್ ಸ್ಕ್ರೀನ್ ಡೆಸ್ಕ್ ಟಾಪ್ ಕಂಪ್ಯೂಟರ್
ಹ್ಯಾವ್ಲೆಟ್ ಪ್ಯಾಕರ್ಡ್ ಅಥವಾ ಸ್ವೀಟಾಗಿ ನಾವು ಕರೆಯುವ ಎಚ್ ಪಿ ಕಂಪನಿಯು ವಿನೂತನ ಕಂಪ್ಯೂಟರ್ ಗಳನ್ನು ಪರಿಚಯಿಸುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಇದೀಗ ಡೆಸ್ಕ್ ಟಾಪ್ ಕಂಪ್ಯೂಟರ್ ಗಳಿಗೆ ಟಚ್ ಸ್ಕ್ರೀನ್ ಸ್ಪರ್ಷ ನೀಡಲು ಮುಂದಾಗಿದೆ.

ಕೆಲವೇ ತಿಂಗಳಿನಲ್ಲಿ ಕಂಪನಿಯು ನೂತನ ಟಚ್ ಸ್ಕ್ರೀನ್ ಡೆಸ್ಕ್ ಟಾಪ್ ಕಂಪ್ಯೂಟರ್ ಗಳನ್ನು ಹೊರತರಲಿದೆ. ಹೀಗಾಗಿ ಕಂಪ್ಯೂಟರ್ ಪರದೆಯನ್ನು ಯಾವುದೇ ಅಳುಕಿಲ್ಲದೇ, ಅಂಜದೇ ಟಚ್ ಮಾಡಬಹುದು. ಈ ಟಚ್ಚಲ್ಲಿ ಏನೋ ಇದೆ ಅಂತ ಅನಿಸಬಹುದು.

ಇದೀಗ HP ಕಂಪನಿಯು ಮೂರು ಟಚ್ ಸ್ಮಾರ್ಟ್ ಮಾಡೆಲ್ಸ್ ಅಭಿವೃದ್ಧಿಪಡಿಸುವುದಾಗಿ ಹೇಳಿದೆ. ಇದರ ದರ ಕೂಡ ಟಚ್ ಮಾಡುವ ಅಂತರದಲ್ಲೇ ಇದೆ. ಅಂದರೆ ಟಚ್ ಸ್ಕ್ರೀನ್ ಕಂಪ್ಯೂಟರ್ ದರ ಸುಮಾರು 28 ಸಾವಿರ ರು.ನಿಂದ 42 ಸಾವಿರ ರು.ವರೆಗಿರಲಿದೆ. ಬಿಸಿನೆಸ್ ಉದ್ದೇಶದ ಟಚ್ ಸ್ಮಾರ್ಟ್ ಎಲೈಟ್ ಕಂಪ್ಯೂಟರ್ ದರ ಮಾತ್ರ ಸುಮಾರು 40 ಸಾವಿರ ರು. ಇರಲಿದೆ.

ಅಂದಹಾಗೇ ಇದನ್ನು ಟಚ್ ಮಾಡಲು ಸೆಪ್ಟಂಬರ್ 21ರವರೆಗೆ ಕಾಯಬೇಕು. ಕಂಪನಿಯು ಸೆಪ್ಟಂಬರ್ 21ರಂದು ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆ ಮಾಡಲಿದೆ. ಎಚ್ ಪಿ ಕಂಪನಿಯು ಜಾಗತಿಕವಾಗಿ ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿದೆ.

ನೂತನ ಟಚ್ ಸ್ಕ್ರೀನ್ ಡೆಸ್ಕ್ ಟಾಪ್ ಕಂಪ್ಯೂಟರ್ ಗಳ ಹೆಸರೇ ಹೇಳುವಂತೆ ಸ್ಕ್ರೀನ್ ಟಚ್ ಮಾಡಿ ಕಾರ್ಯನಿರ್ವಹಿಸಬಹುದಾಗಿದೆ. ಆದರೆ ಜಾಸ್ತಿ ಟಚ್ ಮಾಡುವುದು ನಿಮಗೆ ಇಷ್ಟವಾಗದೇ ಇದ್ರೆ ಮಾತ್ರ ಕೀಬೋರ್ಡ್ ಜೋಡಿಸಿಕೊಳ್ಳಬಹುದಾಗಿದೆ. ಅದರಲ್ಲಿ ಏನೆಲ್ಲ ವಿಶೇಷ ಫೀಚರುಗಳಿವೆ ಅಂತ ಕೇಳಿದ್ರೆ ಮಾತ್ರ ಕಂಪನಿ ಬಾಯಿಬಿಟ್ಟಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot