ಲೆನೊವೊ vs ಏಸರ್: ಯಾವುದು ಬೆಸ್ಟ್ ಸಾರ್?

Posted By: Staff

ಲೆನೊವೊ vs ಏಸರ್: ಯಾವುದು ಬೆಸ್ಟ್ ಸಾರ್?
ಇಲ್ಲಿವೆ ಎರಡು ಲ್ಯಾಪ್ ಟಾಪ್. ಹೆಸರು ಲೆನೊವೊ ಯು300 ಮತ್ತು ಏಸರ್ ಏಸ್ಪೈರ್ ಎಸ್3. ಇವೆರಡು ಲ್ಯಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಗೆಲುವು ಕೂಡ ಪಡಿದಿವೆ. ಆದರೆ ಇವೆರಡು ಲ್ಯಾಪ್ ಟಾಪ್ ನಲ್ಲಿ ಯಾವುದನ್ನು ನೀವು ಆಯ್ಕೆ ಮಾಡಬಹುದು. ಇವೆರಡರ ನಡುವೆ ಸಾಮ್ಯತೆ, ಭಿನ್ನತೆ ಏನಿದೆ?

* ವಿನ್ಯಾಸದಲ್ಲಿ ಇವೆರಡು ಸೂಪರ್. ಲೆನೊವೊ ಲ್ಯಾಪ್ ಟಾಪ್ ಪೂರ್ಣ ವಾಗಿ ಅಲ್ಯುಮಿನಿಯಂ ಗ್ರಾಫೈಟ್ ಸೆಲ್ ನಿಂದ ಮಿಂಚುತ್ತದೆ. ಏಸರ್ ಎಸ್ 3 ಹಗುರ ಮೆಟಲ್ ವಿನ್ಯಾಸ ಹೊಂದಿದೆ. ಲೆನೊವೊ ಯು300ಗೆ ಹೋಲಿಸಿದರೆ ಎಸ್ 3 ವಿನ್ಯಾಸ ಹೆಚ್ಚು ಇಷ್ಟವಾಗುತ್ತದೆ.

* ಡಿಸ್ ಪ್ಲೇ ವಿಷ್ಯದಲ್ಲಿ ಇವೆರಡರ ನಡುವೆ ಹೆಚ್ಚು ಭಿನ್ನತೆಯಿಲ್ಲ. ಇವೆರಡು 13.3 ಇಂಚಿನ ಡಿಸ್ ಪ್ಲೇ ಹೊಂದಿವೆ. ಎರಡೂ ಫುಲ್ ಹೈಡೆಫಿನೇಷನ್ ಡಿಸ್ ಪ್ಲೇ ಹೊಂದಿವೆ.

* ಎರಡರ ಸ್ಕ್ರೀನ್ ರೆಸಲ್ಯೂಷನ್ ಕೂಡ 1366 x 768 ಪಿಕ್ಸೆಲ್ ಆಗಿವೆ. ಇವೆರಡೂ ಲ್ಯಾಪ್ ಟಾಪ್ ಸೀರಿಸ್ ಗಳು ಮೂರು ಮಾಡೆಲ್ ಗಳಲ್ಲಿ ದೊರಕುತ್ತವೆ. ಮೂರು ಮಾಡಲ್ ಕೂಡ ಇಂಟೆಲ್ ಕೋರ್ ಐ3, ಕೋರ್ ಐ5 ಮತ್ತು ಕೋರ್ ಐ7 ಪ್ರೊಸೆಸರ್ ಹೊಂದಿವೆ.

* ಇವೆರಡು ಲ್ಯಾಪ್ ಟಾಪ್ ಗಳು ವಿಂಡೋಸ್ ಮತ್ತು ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್ ಹೊಂದಿವೆ. ಇವೆರಡು ಲ್ಯಾಪ್ ಟಾಪ್ ಗಳ ಸಂಗ್ರಹ ಸಾಮರ್ಥ್ಯ ಮತ್ತು ಮೆಮೊರಿ ಗಾತ್ರ ಒಂದೇ ರೀತಿ ಇವೆ.

* ಇವೆರಡು ಲ್ಯಾಪ್ ಟಾಫ್ ಗಳ ಹೊಸ ತಂತ್ರಜ್ಞಾನ ವಿಷಯ ಆಸಕ್ತಿದಾಯಕ. ಲೆನೊವೊ ಯು330 ಲ್ಯಾಪ್ ಟಾಪ್ ಇಂಟೆಲ್ ಅಡ್ವಾನ್ಸ್ ಡ್ ಕೂಲಿಂಗ್ ತಂತ್ರಜ್ಞಾನ ಹೊಂದಿದೆ. ಏಸರ್ ಎಸ್3 ಲ್ಯಾಪ್ ಟಾಪ್ ತಂಪಾಗಲು ಏಸರ್ ಗ್ರೀನ್ ಇನ್ಸ್ ಸ್ಟಾಂಟ್ ಇದೆ. ಇವೆರಡೂ ಕೂಲಿಂಗ್ ಸಿಸ್ಟಮ್ ಕೂಡ ಅತ್ಯುತ್ತಮವಾಗಿವೆ.

* ಏಸರ್ ಏಸ್ಪೈರ್ ಎಸ್ 3 ಲ್ಯಾಪಿ 320-500 ಜಿಬಿ ಹಾರ್ಡ್ ಡಿಸ್ಕ್ ಡ್ರೈವ್ ಹೊಂದಿದೆ. ಜೊತೆಗೆ ಸುಮಾರು 240 ಜಿಬಿ ವರೆಗೆ ಎಸ್ ಎಸ್ ಡಿ ಸಂಗ್ರಹ ಸಾಮರ್ಥ್ಯವಿದೆ. ಆದರೆ ಲೆನೊವೊ ಯು300 ನಲ್ಲಿ ಕೇವಲ 64 ಜಿಬಿ ವರೆಗೆ ಎಸ್ ಡಿ ಸೌಲಭ್ಯವಿದೆ. ಆದರೆ ಹಾರ್ಡ್ ಡಿಸ್ಕ್ ಸಾಮರ್ಥ್ಯ ಒಂದು ಟಿಬಿವರೆಗೆ ಮಾತ್ರವಿದೆ.

* ಇವೆರಡೂ ಲ್ಯಾಪ್ ಟಾಪ್ ಗಳು 1.3 ಮೆಗಾ ಪಿಕ್ಸೆಲಿನ ಹೈ ಡೆಫಿನೆಷನ್ ವೆಬ್ ಕ್ಯಾಮರಾ ಹೊಂದಿವೆ.

* ಏಸರ್ ಏಸ್ಪೈರ್ ಎಸ್ 3 ಅಲ್ಟ್ರಾ ಬುಕ್ ದರ ಸುಮಾರು 51,900 ರು.ನಿಂದ 77,900 ರು.ವರೆಗಿದೆ. ಲೆನೊವೊ ಐಡಿಯಾಪ್ಯಾಡ್ ಯು300 ಅಲ್ಟ್ರಾ ಬುಕ್ ದರ ಸುಮಾರು 37 ಸಾವಿರ ರು.ನಿಂದ 55 ಸಾವಿರ ರು.ವರೆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot