ಎಂಎಸ್ಐ ಜಿಟಿ780: ಗೇಮಿಂಗ್ ಲ್ಯಾಪ್ ಟಾಪ್ ವಿಮರ್ಶೆ

By Super
|
ಎಂಎಸ್ಐ ಜಿಟಿ780: ಗೇಮಿಂಗ್ ಲ್ಯಾಪ್ ಟಾಪ್ ವಿಮರ್ಶೆ
ದಕ್ಷತೆಯ ಲ್ಯಾಪ್ ಟಾಪ್ ಅಭಿವೃದ್ಧಿಪಡಿಸುವಲ್ಲಿ ಎಂಎಸ್ಐ ಕಂಪನಿ ಹೆಸರುವಾಸಿ. ಕಂಪನಿಯ ಲ್ಯಾಪ್ ಟಾಪ್ ಗಳಲ್ಲಿ ದೋಷಗಳು ಕಡಿಮೆ. ನಿಖರತೆ, ಪರಿಪೂರ್ಣತೆ ಮತ್ತು ದೋಷಾರಾಹಿತ್ಯ ಎಂಎಸ್ಐಗೆ ಇಷ್ಟವಾದ ಪದಗಳು. ಇದೀಗ ಕಂಪನಿಯು MSI GT780 ಎಂಬ ಗೇಮಿಂಗ್ ಲ್ಯಾಪ್ ಟಾಪ್ ಹೊರತಂದಿದೆ.

ಕಂಪನಿಯು ಇಷ್ಟು ಶೀಘ್ರದಲ್ಲಿ ಹೊಸ ಲ್ಯಾಪ್ ಟಾಪ್ ಹೊರತರುತ್ತಿದೆ ಎಂದು ಗ್ರಾಹಕರು ನಿರೀಕ್ಷಿಸಿರಲಿಕ್ಕಿಲ್ಲ. ಇದರ ಬ್ರಾಂಡ್ ನ್ಯೂ ಕೀಬೋರ್ಡ್ ಆಕರ್ಷಕವಾಗಿದೆ. ಇದರ ಸೌಂದರ್ಯ, ವಿನ್ಯಾಸ ಸೂಪರ್.

ಎಂಎಸ್ ಐ ಜಿಟಿ780ಗೂ ಇತರ ಗೇಮಿಂಗ್ ಲ್ಯಾಪ್ ಟಾಪ್ ಗಳಿಗೂ ಏನೂ ವ್ಯತ್ಯಾಸ. ಸಿಂಪಲ್ ಆಗಿ ಹೇಳಬೇಕೆಂದರೆ ಇದನ್ನು ಅಭಿವೃದ್ಧಿಸಲು ಕಂಪನಿ ಹೆಚ್ಚು ಕಠಿಣ ಮತ್ತು ಸ್ಮಾರ್ಟ್ ವರ್ಕ್ ಮಾಡಿದೆ. ಹೀಗಾಗಿ ಇದರಲ್ಲಿ ದೋಷಗಳನ್ನು ಹುಡುಕುವುದು ಕಷ್ಟ. ಪರಿಪೂರ್ಣ ಗೇಮಿಂಗ್ ಲ್ಯಾಪ್ ಟಾಪ್ ಅಂತ ಕೆಲವು ಗ್ಯಾಜೆಟ್ ಗುರುಗಳು ಅಭಿಪ್ರಾಯಪಡುತ್ತಾರೆ.

ಪರಿಪೂರ್ಣವಾಗಿರೋದು ಯಾವುದು ಇಲ್ಲ ಅನ್ನೋ ನಂಬಿಕೆ ನಮ್ಮದು. ಹೀಗಾಗಿ ಏನಾದರೂ ದೋಷಗಳಿವೆಯೇ ಅಂತ ಅಮೂಲಾಗ್ರವಾಗಿ ಪರಿಶೀಲಿಸಲಾಯಿತು. ಆಗ ಕಣ್ಣಿಗೆ ಬಿದ್ದದ್ದು ಅದರ ಟಚ್ ಪ್ಯಾಡ್.

ಹೀಗಲೂ ಗ್ರೇಮಿಂಗ್ ಪ್ರೇಮಿಗಳಿಗೆ ಮೌಸ್ ಇಷ್ಟವಾಗುತ್ತದೆ. ಆದರೆ ಕಂಪನಿ ಟಚ್ ಪ್ಯಾಡ್ ಅಳವಡಿಸಿದೆ. ಕಂಪನಿಯು ಟಚ್ ಪ್ಯಾಡನ್ನು ಎಡಭಾಗದ ಮಧ್ಯಮ ಸ್ಥಳದಲ್ಲಿ ಇಟ್ಟಿರುವುದರಿಂದ ತುಂಬಾ ಹೊತ್ತು ಆಡಲು ಒಂದಿಷ್ಟು ಅನ್ ಕಂಫರ್ಟ್ ಅನಿಸುತ್ತದೆ.

ಆ ದೋಷ ಮರೆತುಬಿಡೋಣ. ಇದರಲ್ಲಿರುವ ಒಳ್ಳೆಯ ವಿಚಾರವೆಂದರೆ ಇದರ ಕಾರ್ಯನಿರ್ವಹಣೆ. ಇದರ ದಕ್ಷತೆಯ ಕುರಿತು ಎರಡು ಮಾತು ಆಡುವ ಆಗಿಲ್ಲ. ಗೇಮಿಂಗ್ ಲ್ಯಾಪ್ ಟಾಪ್ ಲೋಕದಲ್ಲಿ ಇದು ಡಾನ್ ಆಗೋದರಲ್ಲಿ ಯಾವುದೇ ಡೌಟ್ ಇಲ್ಲ ಅಂತ ಗ್ಯಾಜೆಟ್ ಗುರು ಹೇಳುತ್ತಾರೆ. ಈ ಗೇಮಿಂಗ್ ಲ್ಯಾಪ್ ಟಾಪ್ ದರ ಸುಮಾರು 40 ಸಾವಿರ ರುಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X