Subscribe to Gizbot

ಏಸರ್ 5533 ಲ್ಯಾಪ್ ಟಾಪ್, ದರ 23 ಸಾವಿರ ರು.

Posted By: Super

ಏಸರ್ 5533 ಲ್ಯಾಪ್ ಟಾಪ್, ದರ 23 ಸಾವಿರ ರು.
ದೇಶದ ಹೆಚ್ಚಿನ ಗ್ರಾಹಕರು ಕೈಗೆಟಕುವ ದರದ ಲ್ಯಾಪ್ ಟಾಪ್ ಖರೀದಿಸಲು ಇಚ್ಚಿಸುತ್ತಾರೆ. ಅದು ಕೊಂಚ ಕಂಫರ್ಟ್ ಆಗಿದ್ದರೆ ಸಾಕು. ಹೈಎಂಡ್ ಲ್ಯಾಪ್ ಟಾಪ್ ಗಳಲ್ಲಿರುವ ಎಲ್ಲಾ ಫೀಚರು ಇರದಿದ್ದರೂ ಪರವಾಗಿಲ್ಲ. ಪರ್ಸನಲ್ ಕಂಪ್ಯೂಟರಿನಂತೆ ಕಾರ್ಯ ನಿರ್ವಹಿಸಿದರೆ ಸಾಕು. ಅಂತಹ ಲ್ಯಾಪ್ ಟಾಪ್ ಹೆಚ್ಚು ಜನರು ಖರೀದಿಸುತ್ತಾರೆ.

ಇದೇ ರೀತಿ ನೂತನ ಏಸರ್ ಏಸ್ಪೈರ್ 5733 ಲ್ಯಾಪ್ ಟಾಪ್ ಕೂಡ ಹೆಚ್ಚು ದುಬಾರಿಯಾಗಿಲ್ಲ. ಇದರಲ್ಲಿ ಆಕರ್ಷಕ ಫೀಚರುಗಳಿಂದ ಮಾಸ್ ಜನರಿಗೆ ಇಷ್ಟವಾಗುವ ನಿರೀಕ್ಷೆ ಕಂಪನಿಗಿದೆ.

ಈ ಲ್ಯಾಪ್ ಟಾಪ್ 15.6 ಇಂಚಿನ ಸ್ಕ್ರೀನ್ ಹೊಂದಿದ್ದು 1366 X 768 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತದೆ. Acer Aspire 5733 ಎರಡನೆ ತಲೆಮಾರಿನ ಪ್ರೊಸೆಸರ್ ಇಂಟೆಲ್ ಐ3-370ಎಂ ಹೊಂದಿದೆ. ಈ ಪ್ರೊಸೆಸರ್ ಬಳಕೆದಾರರ ಸಮಯವನ್ನು ಖಂಡಿತ ಉಳಿಸುತ್ತದೆ.

ಈ ಲ್ಯಾಪ್ ಟಾಪ್ ಲಿನಕ್ಸ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇಂಟೆಲ್ ಎಚ್ ಡಿ ಗ್ರಾಫಿಕ್ಸ್ ಹೆಚ್ಚಿನವರಿಗೆ ಇಷ್ಟವಾಗಬಹುದು. ದರ ಸುಮಾರು 23,500 ರುಪಾಯಿ.

ಫೀಚರುಗಳು
* ಇಂಟೆಲ್ ಐ3-370 ಪ್ರೊಸೆಸರ್
* ಡಿವಿಡಿ ಆಫ್ಟಿಕಲ್ ಡ್ರೈವ್
* 2 ಜಿಬಿ ಡಿಡಿಆರ್3 RAM
* ವೈಫೈ, ಬ್ಲೂಟೂಥ್ ಇತ್ಯಾದಿ ಕನೆಕ್ಟಿವಿಟಿ ಸರ್ವಿಸ್
* ವಿಜಿಎ, ಲ್ಯಾನ್ ಮತ್ತು ಯುಎಸ್ ಬಿ
* ದರ: 23,500 ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot