ಮೊಟೊರೊಲಾ ಟ್ಯಾಬ್ಲೆಟ್ ಕಂಪ್ಯೂಟರ್ ಬರಲಿದೆಯಂತೆ!!

By Super
|
ಮೊಟೊರೊಲಾ ಟ್ಯಾಬ್ಲೆಟ್ ಕಂಪ್ಯೂಟರ್ ಬರಲಿದೆಯಂತೆ!!
ದೇಶದ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಮೊಬೈಲ್ ಕಂಪನಿ ಮೊಟೊರೊಲಾ ಪ್ರವೇಶಿಸುವ ನಿರೀಕ್ಷೆಯಿದೆ. ಮೊಟೊರೊಲಾ ದೊಡ್ಡದಾದ ಮತ್ತು ಅತ್ಯುತ್ತಮ ಟ್ಯಾಬ್ಲೆಟ್ ಕಂಪ್ಯೂಟರ್ ಹೊರತರಲು ನಿರ್ಧರಿಸಿದೆ ಎಂದು ಕೆಲವು ವರದಿಗಳು ಹೇಳಿವೆ.

ಕಂಪನಿಯು 2 ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಬೃಹತ್ ಗಾತ್ರದ ಪರದೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದಾಗಲೇ ಖಚಿತವಾಗಿತ್ತು. ನೂತನ ಮೊಟೊರೊಲಾ ಟ್ಯಾಬ್ಲೆಟ್ ಗಳು ಆಂಡ್ರಾಯ್ಡ್ ಹನಿಕಾಂಬ್ ವರ್ಷನ್ ಸಿಸ್ಟಮ್ ಹೊಂದಿರಲಿದೆ ಮತ್ತು ಟ್ಯಾಬ್ಲೆಟ್ ಡಿಸ್ ಪ್ಲೇ 8 ಮತ್ತು 10 ಇಂಚು ಇರಲಿವೆ ಎಂಡ್ ಗ್ಯಾಜೆಟ್ ಅಭಿಪ್ರಾಯಪಟ್ಟಿದೆ.

ಮೊಟೊರೊಲಾ ಟ್ಯಾಬ್ಲೆಟ್ ಚಿತ್ರಗಳು ಕೂಡ ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ. ಮೊಟೊರೊಲೊ ಕ್ಷೂಮ್ 2 ಹೆಸರಿನ ಟ್ಯಾಬ್ಲೆಟ್ ಅಭಿವೃದ್ಧಿಪಡಿಸುತ್ತಿದೆ ಎಂದು ಇನ್ನೊಂದು ವದಂತಿ ಹರಿದಾಡುತ್ತಿದೆ. ಈ ಟ್ಯಾಬ್ಲೆಟ್ ಗಳಲ್ಲಿ ಯಾವೆಲ್ಲ ಫೀಚರುಗಳು ಇರಲಿವೆ ಎಂಬ ಕುರಿತು ಚರ್ಚೆಗಳು ಆರಂಭವಾಗಿವೆ. ಕಂಪನಿ ಅಧಿಕೃತವಾಗಿ ಪ್ರಕಟಿಸುವರೆಗೆ ತಾಳ್ಮೆಯಿಂದ ಇರೋಣ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X