Subscribe to Gizbot

ಏಳು ಇಂಚಿನ ಆಸಸ್ ಟಚ್ ಆಂಡ್ರಾಯ್ಡ್ ಟ್ಯಾಬ್ಲೆಟ್

Posted By: Super

ಏಳು ಇಂಚಿನ ಆಸಸ್ ಟಚ್ ಆಂಡ್ರಾಯ್ಡ್ ಟ್ಯಾಬ್ಲೆಟ್
ಆಸಸ್ ಕಂಪನಿ ನೂತನ ಟ್ಯಾಬ್ಲೆಟ್ ಕಂಪ್ಯೂಟರೊಂದನ್ನು ಶೀಘ್ರದಲ್ಲಿ ಪರಿಚಯಿಸಲಿದೆ. ಅದರ ಹೆಸರು ಆಸಸ್ ಟಚ್. ಇದು ನೀರು ಮತ್ತು ಧೂಳಿನಿಂದ ರಕ್ಷಿಸುವ ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ಫೀಚರನ್ನು ಹೊಂದಿದೆ. ನೂತನ ಆಸಸ್ ಟಚ್ ಆಂಡ್ರಾಯ್ಡ್ ಹನಿಕಾಂಬ್ 3.2 ವರ್ಷನ್ ಹೊಂದಿರಲಿದೆ.

ಆಸಸ್ ಟಚ್ ಟ್ಯಾಬ್ಲೆಟ್ ಕಂಪ್ಯೂಟರಿನ ಪ್ರಮುಖ ಫೀಚರೆಂದರೆ 7 ಇಂಚಿನ ಮಲ್ಟಿ ಟಚ್ ಸ್ಕ್ರೀನ್ ಡಿಸ್ ಪ್ಲೇ. ಇದು 1280 x 800 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಜೊತೆಗೆ ಡ್ಯೂಯಲ್ ಕೋರ್ 1ಗಿಗಾ ಹರ್ಟ್ಸ್ ಎನ್ವಿಡಿಯಾ ಟೆಗ್ರಾ 2 ಪ್ರೊಸೆಸರ್ ಹೊಂದಿದೆ.

ಆಸಸ್ ಟಚ್ ನಲ್ಲಿರುವ ಇತರ ವಿಶೇಷತೆಗಳೆಂದರೆ ಸಂಗ್ರಹ ಸಾಮರ್ಥ್ಯ 16 ಜಿಬಿ, ಜೊತೆಗೆ ಮೈಕ್ರೊಎಸ್ ಡಿ ಕಾರ್ಡ್ ಸ್ಲಾಟ್ ಇದೆ. ಜೊತೆಗೆ ವಿಡಿಯೋ ಮತ್ತು ಫೋಟೊ ತೆಗೆಯಲು 5 ಮೆಗಾ ಫಿಕ್ಸೆಲಿನ ಕ್ಯಾಮರಾವಿದೆ. ಉಳಿದಂತೆ ಜಿಒಎಸ್, ಬ್ಲೂಟೂಥ್, 802.11 b/g/n ವೈ-ಫೈ ಮತ್ತು 7,400 ಮೆಗಾವ್ಯಾಟ್ ಬ್ಯಾಟರಿಯಿದೆ.

ನೂತನ ಆಸಸ್ ಟಚ್ ದರ ಹೆಚ್ಚು ದುಬಾರಿಯಾಗಿರದು ಎಂದು ಟೆಕ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಆದರೆ ಕಂಪನಿ ಇನ್ನೂ ದರ ಪ್ರಕಟಿಸಿಲ್ಲ. ಆಸಸ್ ಟಚ್ ಈ ವರ್ಷದ ಅಂತ್ಯಕ್ಕೆ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot