Subscribe to Gizbot

ವಾಟರ್ ಪ್ರೂಫ್ ಟ್ಯಾಬ್ಲೆಟ್ ತರಲು ಫುಜಿತ್ಸು ಚಿಂತನೆ

Posted By: Super

ವಾಟರ್ ಪ್ರೂಫ್ ಟ್ಯಾಬ್ಲೆಟ್ ತರಲು ಫುಜಿತ್ಸು ಚಿಂತನೆ
ವಿಶ್ವದ ಪ್ರಮುಖ ಬೃಹತ್ ಐಟಿ ಮತ್ತು ಸೇವಾ ಕಂಪನಿ ಜಲನಿರೋಧಕ ಟ್ಯಾಬ್ಲೆಟ್ ಕಂಪ್ಯೂಟರೊಂದನ್ನು ಹೊರತರಲು ಯೋಜಿಸಿದೆ. ಇದು ಆಕರ್ಷಕ ಫೀಚರುಗಳನ್ನು ಹೊಂದಿರಲಿದೆ. ಒಂದು ವರದಿಯ ಪ್ರಕಾರ ಕಂಪನಿಯು ಈಗಾಗಲೇ ವಾಟರ್ ಪ್ರೂಪ್ ಟ್ಯಾಬ್ಲೆಟನ್ನು ಅಭಿವೃದ್ಧಿಪಡಿಸಿದೆ ಮತ್ತು ಶೀಘ್ರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆಯಂತೆ.

ಕಂಪನಿಯ ನೂತನ ವಾಟರ್ ಪ್ರೂಫ್ ಟ್ಯಾಬ್ಲೆಟ್ ಹೆಸರು Arrows LTE F-01D. ಇದು 10.1 ಇಂಚಿನ ಡಬ್ಲ್ಯುಎಕ್ಸ್ ಜಿಎ ಡಿಸ್ ಪ್ಲೇ ಹೊಂದಿದೆ ಎಂದು ವರದಿಗಳು ಹೇಳಿವೆ. ಜೊತೆಗೆ ಡ್ಯೂಯಲ್ ಕೋರ್ ಪ್ರೊಸೆಸರ್ ಇದೆ. ಇದು ಟೆಗ್ರಾ 2 ಅಥವಾ ಟ್ಯೊಮ್ಯಾಪ್ ಹೊಂದಿರುವ ಸಾಧ್ಯತೆ ಇದೆ.

ನೂತನ ಟ್ಯಾಬ್ಲೆಟ್ ಅಪರೇಟಿಂಗ್ ಸಿಸ್ಟಮ್ ಗೂಗಲ್ ಆಂಡ್ರಾಯ್ಡ್ ವಿ2.3.4 ಅಥವಾ ವಿ2.3.5 ಜಿಂಜರ್ ಬ್ರೀಡ್ ಇರುವ ನಿರೀಕ್ಷೆಯನ್ನು ಟೆಕ್ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಇದು ಅತ್ಯಧಿಕ ಕಾರ್ಯಕ್ಷಮತೆಯ ಟ್ಯಾಬ್ಲೆಟ್ ಆಗಿರಲಿದೆಯಂತೆ.

ನಿರೀಕ್ಷಿತ ಫೀಚರುಗಳು
* 10.1 ಝೊಲ್ ಟಚ್ ಸ್ಕ್ರೀನ್ ಡಿಸ್ ಪ್ಲೇ, ಡಬ್ಲ್ಯುಎಕ್ಸ್ ಜಿಎ
* ಡ್ಯೂಯಲ್ ಕೋರ್ ಪ್ರೊಸೆಸರ್
* ಆಂಡ್ರಾಯ್ಡ್ 3.2 ಹನಿಕೊಂಬ್ ಅಥವಾ ಗೂಗಲ್ ಆಂಡ್ರಾಯ್ಡ್ ವಿ2.2.3 ಅಥವಾ ವಿ2.3.5 ಜಿಂಜರ್ ಬ್ರೀಡ್ ಅಪರೇಟಿಂಗ್ ಸಿಸ್ಟಮ್
* ಮುಂಭಾಗದಲ್ಲಿ 1.3 ಮೆಗಾ ಫಿಕ್ಸೆಲ್ ಕ್ಯಾಮರಾ, ಹಿಂಭಾಗದಲ್ಲಿ 5 ಮೆಗಾ ಫಿಕ್ಸೆಲ್ ಕ್ಯಾಮರಾ
* 32 ಜಿಬಿವರೆಗೆ ಮೆಮೊರಿ ವಿಸ್ತರಣಾ ಸಾಮರ್ಥ್ಯ
* ವಾಟರ್ ಪ್ರೂಫ್ ಸೌಲಭ್ಯ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot