ಝಡ್ ಟಿಇ ಟಿ98 ಟ್ಯಾಬ್ಲೆಟ್ ಕಂಪ್ಯೂಟರ್ ಮೇನಿಯಾ

Posted By: Staff

ಝಡ್ ಟಿಇ ಟಿ98 ಟ್ಯಾಬ್ಲೆಟ್ ಕಂಪ್ಯೂಟರ್ ಮೇನಿಯಾ
ದೇಶದಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್ ಮೇನಿಯಾ ಜೋರಾಗಿದೆ. ಇದೀಗ ಜಾಗತಿಕ ಕಂಪನಿಗಳು ಇಲ್ಲಿ ಟ್ಯಾಬ್ಲೆಟ್ ಪರಿಚಯಿಸಲು ಹೆಚ್ಚು ಉತ್ಸುಕವಾಗುತ್ತಿವೆ. ಇದೀಗ ಝಡ್ ಟಿಇ ಕಂಪನಿಯ ನೂತನ ZTE T98 ಟ್ಯಾಬ್ಲೆಟ್ ಅತ್ಯುತ್ತಮ ಪ್ರೊಸೆಸರ್ ನೊಂದಿಗೆ ಬರಲಿದೆ.

ZTE T98 Tablet ನಿಜಕ್ಕೂ ಹೈಎಂಡ್ ಟ್ಯಾಬ್ಲೆಟ್ ಆಗಿದ್ದು ತೆಳು ಅಂದರೆ 7 ಇಂಚಿನ ಡಿಸ್ ಪ್ಲೇ ಹೊಂದಿದೆ. ಇದರ ಸ್ಕ್ರೀನ್ ರೆಸಲ್ಯೂಷನ್ ಡಬ್ಲ್ಯುಎಕ್ಸ್ ಜಿಎ 1280 x 800 ಪಿಕ್ಸೆಲ್ ಆಗಿದೆ. ಇದು ಗೂಗಲ್ ಆಂಡ್ರಾಯ್ಡ್ ವಿ3.2 ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ.

ಟಿ98 ಟ್ಯಾಬ್ಲೆಟ್ ಕಂಪ್ಯೂಟರಿಗೆ ಸಿಮ್ ಕೂಡ ಹಾಕಬಹುದು. ಹೀಗಾಗಿ ಇದು ಮೊಬೈಲ್ ಕಾರ್ಯವನ್ನೂ ಮಾಡುತ್ತದೆ. ಇದು ಕ್ವಾಡ್ ಕೋರ್ NVIDIA ಟೆಗ್ರಾ 3 ಪ್ರೊಸೆಸರ್ ಹೊಂದಿದೆ. ಇದು ವೇಗದ ಆಕ್ಸೆಸ್ ಗೆ ಬೆಸ್ಟ್. 11.5 ಮಿ.ಮಿ. ಸಣ್ಣದಾಗಿರುವ ಝಡ್ ಟಿಇ ಟಿ98 ಟ್ಯಾಬ್ಲೆಟ್ 16ಜಿಬಿ ಮೆಮೊರಿ ಮತ್ತು ಒಂದು ಜಿಬಿ RAM ಹೊಂದಿದೆ.

ಈ ಟ್ಯಾಬ್ಲೆಟ್ ನ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಕ್ಯಾಮರಾಗಳಿವೆ. ಮುಂಭಾಗದಲ್ಲಿ 5 ಮೆಗಾ ಫಿಕ್ಸೆಲ್ ಕ್ಯಾಮರಾ ಇದೆ. ಇದರಲ್ಲಿ ಎಲ್ ಇಡಿ ಫ್ಲಾಷ್ ಇದೆ. ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಕೂಡ ಅತ್ಯುತ್ತಮವಾಗಿದೆ. ವಿಡಿಯೋ ಕಾನ್ಫರೆನ್ಸ್ ಉದ್ದೇಶಕ್ಕಾಗಿ ಹಿಂಭಾಗದಲ್ಲಿ 2 ಮೆಗಾ ಫಿಕ್ಸೆಲ್ ಕ್ಯಾಮರಾವಿದೆ. ಈ ಟ್ಯಾಬ್ಲೆಟ್ ಯಾವಾಗ ಅನಾವರಣಗೊಳ್ಳಲಿದೆ ಅನ್ನೋದನ್ನು ಕಂಪನಿ ಪ್ರಕಟಿಸಿಲ್ಲ. ದರ ಕೂಡ ಬಹಿರಂಗವಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot