ಏಸರ್ ಒನ್ ಲ್ಯಾಪ್ ಟಾಪ್ ಆದಿತೇ ನಂಬರ್ ಒನ್

Posted By: Staff

ಏಸರ್ ಒನ್ ಲ್ಯಾಪ್ ಟಾಪ್ ಆದಿತೇ ನಂಬರ್ ಒನ್
ಕೈಗೆಟುಕುವ ದರದಲ್ಲಿ ದೊರಕುವ ಲ್ಯಾಪ್ ಟಾಪ್ ಗಳಲ್ಲಿ ಸಾಕಷ್ಟು ಕಾರ್ಯಕ್ಷಮತೆಯನ್ನು ನೋಡಬಾರದೆನ್ನುತ್ತಾರೆ. ಆದರೆ ಇದು ಏಸರ್ ಏಸ್ಪೈರ್ ಒನ್ ಎಒ722-ಸಿ58ಕೆಕೆ ಲ್ಯಾಪ್ ಟಾಪ್ ಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ಇದು ಅಗ್ಗದ ಮತ್ತು ಕಾರ್ಯಕ್ಷಮತೆಯುಳ್ಳ ಪುಟ್ಟ ಲ್ಯಾಪ್ ಟಾಪ್.

ಈ ನೋಟ್ ಬುಕ್ ನೋಡಲು ಆಕರ್ಷಕವಾಗಿದ್ದು, ಕೂಲ್ ಫೀಚರುಗಳೊಂದಿಗೆ ಬಂದಿದೆ. ಇದರ ಕಾರ್ಯಕ್ಷಮತೆಯಿಂದಾಗಿ ಟೆಕ್ ವಿಶ್ಲೇಷಕರಿಂದ ಸಾಕಷ್ಟು ಹೊಗಳಿಕೆ ಪಡೆದಿದೆ. ಇದು ಹಗುರ ಮಿನಿಗೊ ಅಡಾಪ್ಟರ್ ನೊಂದಿಗೆ ಬಂದಿದ್ದು ನೇರವಾಗಿ ವಿದ್ಯುತ್ ಕನೆಕ್ಟ್ ಮಾಡಬಹುದಾಗಿದೆ.

ಇದು ಹಗುರ ನೋಟ್ ಬುಕ್. ಇದರ ತೂಕ ಕೇವಲ 1.46 ಕೆ.ಜಿ. ಇದರಲ್ಲಿ ಎಥರ್ನೆಟ್, ಯುಎಸ್ ಬಿ, ವಿಜಿಎ ಮತ್ತು ಎಚ್ ಡಿಎಂಐ ಮುಂತಾದ ಪೋರ್ಟ್ ಗಳಿವೆ. ಈ ಪೋರ್ಟ್ ಗಳೆಲ್ಲ ನೋಟ್ ಬುಕ್ ನ ಎಡಭಾಗದಲ್ಲಿವೆ. ಕನೆಕ್ಟಿವಿಟಿ ಆಯ್ಕೆ ಕೂಡ ಅತ್ಯುತ್ತಮವಾಗಿದೆ. ಭಾರತದಲ್ಲಿ ಏಸರ್ ಏಸ್ಪೈರ್ ಒನ್ ಎಒ722-ಸಿ58ಕೆಕೆ ದರ 19,500 ರುಪಾಯಿ ಆಗಿದೆ.

ಪ್ರಮುಖ ವಿಶೇಷತೆಗಳು
* 11.6 ಇಂಚಿನ ಎಲ್ ಇಡಿ ಬ್ಯಾಕ್ ಲಿಟ್ ಎಲ್ಎಫ್ಟಿ ಎಲ್ ಸಿಡಿ ಡಿಸ್ ಪ್ಲೇ(ಸಿನಿಕ್ರಿಸ್ಟಲ್ ತಂತ್ರಜ್ಞಾನ).
* ಡಿಸ್ ಪ್ಲೇ ಗಾತ್ರ 1366 x 768 ಪಿಕ್ಸೆಲ್
* ಎಎಂಡಿ ಬ್ರಾಝೊಸ್ ಸಿ50 ಪ್ರೊಸೆಸರ್
* 2ಜಿಬಿ ಡಿಡಿಆರ್3 RAM
* 256 ಎಂಬಿ ಮೆಮೊರಿಯ ಎಟಿಐ ರೇಡಿಯನ್ ಎಚ್ ಡಿ 6250 ಗ್ರಾಫಿಕ್ಸ್ ಕಾರ್ಡ್
* ಮಲ್ಟಿ ಟಚ್ ಗೆಸ್ಚರ್
* ವಿಂಡೋಸ್ 7 ಸ್ಟಾರ್ಟರ್ ಎಡಿಷನ್ ಅಪರೇಟಿಂಗ್ ಸಿಸ್ಟಮ್
* 320 ಜಿನಿ ಹಾರ್ಡ್ ಡಿಸ್ಕ್ ಸಂಗ್ರಹ ಸಾಮರ್ಥ್ಯ
* 1.3 ಮೆಗಾಪಿಕ್ಸೆಲ್ ಕ್ಯಾಮರಾ(ವಿಡಿಯೋ ರೆಕಾರ್ಡಿಂಗ್ ಗೆ ಸೂಕ್ತವಾಗಿಲ್ಲ).
* ಬ್ಯಾಟರಿ ಬಾಳಿಕೆ: 7 ಗಂಟೆ
* ಏಸರ್ ಏಸ್ಪೈರ್ ಒನ್ ಎಒ722-ಸಿ58ಕೆಕೆ ದರ: 19,500 ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot