Subscribe to Gizbot

ಮಕ್ಕಳಿಗೆ ಅಗ್ಗದ ತೊಷಿಬಾ ಲ್ಯಾಪ್ ಟಾಪ್ ಕೊಡಿ!!

Posted By: Super

ಮಕ್ಕಳಿಗೆ ಅಗ್ಗದ ತೊಷಿಬಾ ಲ್ಯಾಪ್ ಟಾಪ್ ಕೊಡಿ!!
ಮುಂದಿನ ದೀಪಾವಳಿಗೆ ಅಥವಾ ಕ್ರಿಸ್ ಮಸ್ ಗೆ ಮಕ್ಕಳಿಗೆ ಯಾವ ಉಡುಗೊರೆ ನೀಡುವುದು ಎಂದು ಚಿಂತಿಸುತ್ತಿದ್ದೀರಾ? ಮಕ್ಕಳಿಗೆ ಲ್ಯಾಪ್ ಟಾಪ್ ಉಡುಗೊರೆ ನೀಡಿ. "ಲ್ಯಾಪ್ ಟಾಪ್ ತೆಗೆದುಕೊಡುವುದೆಂದರೆ ಮಕ್ಕಳಾಟಿಕೆಯೇ?" ಎಂದು ಗುರಾಯಿಸಬೇಡಿ. ವಿಷಯ ಏನಪ್ಪ ಅಂದ್ರೆ ತೊಷಿಬಾ ಮಕ್ಕಳಿಗಾಗಿ ವಿಶೇಷ ಲ್ಯಾಪ್ ಟಾಪ್ ಗಳನ್ನು ಹೊರತರಲಿದೆ.

ತೊಷಿಬಾ ಕೈಟೆಕುವ ದರದಲ್ಲಿ ಹಲವು ಲ್ಯಾಪ್ ಟಾಪ್ ಮತ್ತು ನೋಟ್ ಬುಕ್ ಗಳನ್ನು ಹೊರತರಲಿದೆ. ತೊಷಿಬಾ ಸ್ಯಾಟಲೈಟ್ ಸರಣಿಯಲ್ಲಿ C600, L700, L735D ಮತ್ತು P700 ಎಂಬ ಸಾಧನಗಳು ಮಾರುಕಟ್ಟೆಗೆ ಬರಲಿವೆ. ಇವುಗಳ ಡಿಸ್ ಪ್ಲೇ 13.3 ಇಂಚಿನಿಂದ 17.3 ಇಂಚಿನವರೆಗೆ ಇರಲಿವೆ.

ಇದರಲ್ಲಿ ಎಂಟ್ರಿ ಲೆವೆಲ್ ಲ್ಯಾಪ್ ಟಾಪ್ ಸ್ಯಾಟಲೈಟ್ ಸಿ600 ಸೀರಿಸ್ ದರ 17,164 ರುಪಾಯಿ ಇರಲಿದೆ. ಇದರ ಸ್ಕ್ರೀನ್ 15.6 ಇಂಚು ಇರಲಿದೆ. ಇದು 17.3 ಇಂಚಿನ ಡಿಸ್ ಪ್ಲೇ ಆಯ್ಕೆಯಲ್ಲೂ ದೊರಕಲಿದೆ.

ಈ ಅಗ್ಗದ ದರದ ಲ್ಯಾಪ್ ಟಾಪ್ ಗಳಲ್ಲಿ ಹೈಎಂಡ್ ಫೀಚರುಗಳು ಇರಲಿವೆಯಂತೆ. ಉಳಿದಂತೆ 640 ಜಿಬಿ ಹಾರ್ಡ್ ಡಿಸ್ಕ್ ಸಂಗ್ರಹ ಸಾಮರ್ಥ್ಯ ಮತ್ತು 4 ಜಿಬಿ ಡಿಡಿಆರ್ 3 ಮೆಮೊರಿ ಆಯ್ಕೆಯೂ ಇರಲಿದೆ. ಜೊತೆಗೆ ವರ್ಷನ್ 2.0 ಯುಎಸ್ ಬಿ ಪೊರ್ಟ್ ಮತ್ತು ಡಿವಿಡಿ ಸೂಪರ್ ಮಲ್ಟಿ ಡ್ರೈವ್ ಇರಲಿದೆ.

ತೊಷಿಬಾ ನೂತನ ಸೀರಿಸ್ ಲ್ಯಾಪ್ ಟಾಪ್ ಗಳು ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಸೂಕ್ತವಾಗಿವೆ. ವಿವಿಧ ಗಾತ್ರದ ಡಿಸ್ ಪ್ಲೇ ಗಳಲ್ಲಿ ದೊರಕುವುದರಿಂದ ಬೇಕಾದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ತೊಷಿಬಾ ಪಿ700 ದರ ಕೊಂಚ ದುಬಾರಿ ಅಂದರೆ ಸುಮಾರು 30,983 ರು. ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot