Subscribe to Gizbot

ಝಡ್ ಟಿಇ ವಿ9 ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ

Posted By: Staff

ಝಡ್ ಟಿಇ ವಿ9 ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ
ದೇಶದ ಮಾರುಕಟ್ಟೆಗೆ ನೂತನ ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಮಿಸಲಿದೆ. ಅದರ ಹೆಸರು ಝಡ್ ಟಿಇ ವಿ9. ಇದು ಅತ್ಯಧಿಕ ದಕ್ಷತೆಯ ಕಾನ್ಫಿಗರೇಶನ್ ಹೊಂದಿದೆ. ಇದು ಆಂಡ್ರಾಯ್ಡ್ ಒಎಸ್ ವರ್ಷನ್ 2.1 ಇಕ್ರೈರ್ ಹೊಂದಿದೆ. ಇದನ್ನು ನಂತರ ವರ್ಷನ್ 2.2 ಒಎಸ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದಂತೆ.

ಈ ಟ್ಯಾಬ್ಲೆಟ್ ಕಂಪ್ಯೂಟರ್ 7 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಡಿಸ್ ಪ್ಲೇ 480 X 800 ರೆಸಲ್ಯೂಷನ್ ಹೊಂದಿದ್ದು, ಹೈಎಂಡ್ ಕಾರ್ಯಕ್ಷಮತೆ ನಿರೀಕ್ಷಿಸಬಹುದಾಗಿದೆ. ವಿಡಿಯೋ ಕರೆಗಾಗಿ ಇದರಲ್ಲಿ ಸೆಕೆಂಡರಿ ಕ್ಯಾಮರಾ ಇಲ್ಲ. ಇದಕ್ಕೆ 32 ಜಿಬಿ ಮೆಮೊರಿ ಕನೆಕ್ಟ್ ಮಾಡಬಹುದು. ಹೀಗಾಗಿ ಫೋಟೊ, ವಿಡಿಯೋ, ಫೈಲುಗಳನ್ನು ಸಂಗ್ರಹಿಸುವ ಕುರಿತು ಚಿಂತೆ ಮಾಡಬೇಕಿಲ್ಲ.

ಟ್ಯಾಬ್ಲೆಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು 512 ಎಂಬಿ RAM ನೆರವಾಗುತ್ತದೆ. ಇದು 3ಜಿಗೆ ಬೆಂಬಲ ನೀಡುತ್ತದೆ. WLAN ಸೌಲಭ್ಯ ಇರುವುದರಿಂದ ನೆಟ್ ವರ್ಕ್ ಗಳನ್ನು ಸುಲಭವಾಗಿ ಆಕ್ಸೆಸ್ ಮಾಡಬಹುದಾಗಿದೆ. 802.11 b/g/n ವೈಫೈ ಕೂಡ ಇಷ್ಟವಾಗುವಂತ್ತಿದೆ.

ಈ ಟ್ಯಾಬ್ಲೆಟ್ ಸ್ಟಾಂಡರ್ಡ್ 3,400 ಮೆಗಾವ್ಯಾಟ್ ಲಿಯಾನ್ ಬ್ಯಾಟರಿ ಹೊಂದಿದ್ದು, ಬಳಸದೇ ಇದ್ದರೆ 500 ಗಂಟೆ(ಸರ್ವಿಂಗ್ ಯುನಿಟ್) ಬ್ಯಾಟರಿ ಬಾಳಿಕೆ ನೀಡುತ್ತದೆ. ಈ ಟ್ಯಾಬ್ಲೆಟ್ ಶೀಘ್ರದಲ್ಲಿ ದೇಶದ ಮಾರುಕಟ್ಟೆಗೆ ಆಗಮಿಸಲಿದೆ. ಇದರ ದರ ಸುಮಾರು 16 ಸಾವಿರ ರು. ಇರುವ ನಿರೀಕ್ಷೆಯಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot