ಲ್ಯಾಪ್ ಟಾಪ್ ಗೆ ಬೇಕಾದ 10 ಆವಶ್ಯಕ ಬಿಡಿ ಭಾಗಗಳು

ನಾವು ಸಾವಿರಗಟ್ಟಲೆ ಕೊಟ್ಟು ಒಳ್ಳೆಯ ಲ್ಯಾಪ್ ಟಾಪ್ ಕೊಂಡಮೇಲೆ ಅದರ ಬಿಡಿ ಭಾಗಗಳ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಇಲ್ಲಿದೆ ನೋಡಿ ಎರಡು ಸಾವಿರ ರೂಪಾಯಿ ಒಳಗಾಗಿ ನಿಮ್ಮ ಲ್ಯಾಪ್ ಟಾಪ್ ಗೆ ಬೇಕಾದ 10 ಆವಶ್ಯಕ ಬಿಡಿ ಭಾಗಗಳ ವಿವರ.
- ಲ್ಯಾಪ್ ಟಾಪ್ ಬ್ಯಾಗ್ - ಎಲ್ಲಿಗೆ ಬೇಕಾದರೂ ಸುರಕ್ಷಿತವಾಗಿ ನಿಮ್ಮ ಲ್ಯಾಪ್ ಟಾಪ್ ಕೊಂಡೋಗಲು ಹೊಸ ಸ್ಟೈಲ್ಗಳಲ್ಲಿ ಸಿಗುವ ಬ್ಯಾಗ್ ಗಳು 400 ರೂಪಾಯಿಗೆಲಭ್ಯ.
- ಲ್ಯಾಪ್ಟಾಪ್ ನ ಕವರ್- ನಿಮ್ಮ ಲ್ಯಾಪ್ ಟಾಪ್ ಅನ್ನು ಕೊಳೆ ಮತ್ತು ಗೀಚಿನಿಂದ ರಕ್ಷಿಸುತ್ತದೆ. ಇದರ ಬೆಲೆ ಕೇವಲ 200.
- ಸ್ಟ್ಯಾಂಡ್ - ಆರಾಮಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಕೆಲವು ಸ್ಟ್ಯಾಂಡ್ ಗಳು ಫ್ಯಾನ್ ನೊಂದಿಗೂ ಲಭ್ಯ. ಇದರ ಬೆಲೆ 300 ರೂಪಾಯಿ.
- ಹೆಡ್ ಫೋನ್- ನಿಮ್ಮಷ್ಟಕ್ಕೆ ನೀವೇ ಮ್ಯೂಸಿಕ್ ಕೇಳಲು ಹಾಗು ವಾಯ್ಸ್ ಚಾಟ್ ಮಾಡಲು ಇದು ಆವಶ್ಯಕ. ಇದರ ಬೆಲೆ 150 ರೂಪಾಯಿ.
- ಮೌಸ್- ಟಚ್ ಪ್ಯಾಡ್ ನ ಜೊತೆ ಇದ್ದರೆ ಕೆಲಸ ಇನ್ನು ಸುಲಭ. ಇದರ ಬೆಲೆ 150.
- ಸ್ಪೀಕರ್- ನಿಮ್ಮ ಲ್ಯಾಪ್ಟಾಪ್ ನ ಸೌಂಡ್ ಇನ್ನೂ ಹೆಚ್ಚಸಲು ಬೇಕೇ ಬೇಕು. 300 ರೂಪಾಯಿ ಯಿಂದ ಶುರು ಆಗುತ್ತದೆ.
- ಪೆನ್ ಡ್ರೈವ್- ನಿಮ್ಮ ಡಾಟಾ ಎಲ್ಲಿ ಬೇಕೆಂದರಲ್ಲಿ ಹಾಕಿಕೊಂಡು ಒಯ್ಯಬಹುದು. ಬೆಲೆ 200 ರೂಪಾಯಿ.
- ಸೆಕ್ಯೂರಿಟಿ ಲಾಕ್- ನಿಮ್ಮ ಲ್ಯಾಪ್ಟಾಪ್ ಗೆ ಸುರಕ್ಷೆ ನೀಡುತ್ತದೆ. ಎಲ್ಲಿ ಬೇಕಾದರೂ ಇನ್ಸ್ಟಾಲ್ ಮಾಡಬಹುದು. ಬೆಲೆ 100 ರೂಪಾಯಿ.
- ಕಾರ್ಡ್ ರೀಡರ್- ನಿಮ್ಮ ಮನೆ / ಆಫೀಸ್ ಕಂಪ್ಯೂಟರ್ ನಿಂದ ಡಾಟಾ ರವಾನಿಸಲು ಅತಿ ಅವಶ್ಯಕ. ಇದರ ಬೆಲೆ 100 ರೂಪಾಯಿ.
- ಎಚ್.ಡಿ.ಎಂ.ಐ ಕೇಬಲ್- ಈ ಕೇಬಲ್ ಮೂಲಕ ನೀವು ಲ್ಯಾಪ್ಟಾಪ್ ಅನ್ನು ಟಿ.ವಿ ಯ ರೀತಿ ಉಪಯೋಗಿಸಬಹುದು.ಇದರ ಬೆಲೆ 100 ರೂಪಾಯಿ.
ತಡಮಾಡದೆ ಇವತ್ತೇ ಖರೀದಿಸಿ ಲ್ಯಾಪ್ಟಾಪ್ ಅನುಭವ ಮತ್ತಷ್ಟು ಹೆಚ್ಚಿಸಿಕೊಳ್ಳಿ
Comments
Best Mobiles in India


Click it and Unblock the Notifications






