ಅಮೆಝಾನ್ ಕಿಂಡಲ್ ಗೆ ಹೊಸ ಬ್ರೌಸರ್- ಸಿಲ್ಕ್

ನೂತನ ಬ್ರೌಸರ್ ಹಲವು ವಿಶೇಷತೆಗಳ ಭಂಡಾರ. ವೆಬ್ ಪುಟಗಳ ಮಾಹಿತಿಯನ್ನು ಪ್ರೀಲೋಡಿಂಗ್ ಮಾಡುತ್ತದೆ. ಇದರಿಂದ ವೆಬ್ ಪುಟ ಸುಲಭವಾಗಿ ಲೋಡ್ ಆಗುತ್ತದೆ. ನೂತನ ಅಮೆಝಾನ್ ಬ್ರೌಸರಿನಿಂದ ವೆಬ್ ಪುಟಗಳನ್ನು ವೇಗವಾಗಿ ಆಕ್ಸೆಸ್ ಮಾಡಬಹುದಾಗಿದೆ.
ಇಂಟರ್ ನೆಟ್ ಸುದ್ದಿಪತ್ರಿಕೆಗಳ ಲಿಂಕ್ ಗಳನ್ನು ಇದು ಸೇವ್ ಮಾಡಿಟ್ಟುಕೊಳ್ಳುತ್ತದೆ. ಬಳಕೆದಾರ ಬ್ರೌಸರ್ ಆನ್ ಮಾಡಿದರೆ ಸಾಕು. ಈ ಲಿಂಕ್ ಗಳು ತನ್ನಷ್ಟಕ್ಕೆ ಆನ್ ಆಗಿರುತ್ತವೆ. ಓದಬೇಕೆಂದರೆ ಒಂದು ಕ್ಲಿಕ್ ಮಾಡಿದರೆ ಸಾಕು. ಸುಮ್ಮನೆ ಲಿಂಕ್ ವಿಳಾಸ ಕೊಟ್ಟು ಅದು ಲೋಡ್ ಆಗೋ ತನಕ ಕಾಯಬೇಕಿಲ್ಲ.
ಅಮೆಝಾನ್ ಸಿಲ್ಕ್ ಬ್ರೌಸರ್ ತನ್ನ ಕಂಪನಿಯ ಉತ್ಪನ್ನದ ಝೆರಾಕ್ಸ್ ಕಾಪಿ ಎಂದು ಅಪೆರಾ ಕಂಪನಿ ಹೇಳಿದೆ. ಸಿಲ್ಕ್ ಬ್ರೌಸರ್ ನಲ್ಲಿ ಇರೋ ಎಲ್ಲಾ ಫೀಚರುಗಳು ಈಗಾಗಲೇ ಮಾರುಕಟ್ಟೆಯಲ್ಲಿರುವ ತನ್ನ ಬ್ರೌಸರ್ ನಲ್ಲಿ ಇದೆ ಅನ್ನೋದೆ ಅಪೆರಾ ತಗಾದೆ. ಹೀಗಾಗಿ ಹೊಸ ಬ್ರೌಸರ್ ನಲ್ಲಿ ವಿಶೇಷತೆಯೇನಿಲ್ಲ ಎಂದು ಪ್ರತಿಸ್ಪರ್ಧಿ ಕಂಪನಿ ಅಪೆರಾ ಹೇಳಿದೆ.
ಈಗ ಅಮೆಝಾನ್ ಉತ್ಪನ್ನಗಳಿಗೆ ಅತ್ಯಧಿಕ ಬೇಡಿಕೆಯಿದೆ. ನೂತನ ಬ್ರೌಸರ್ ಅದರ ದಕ್ಷತೆಯನ್ನು ಹೆಚ್ಚಿಸುವ ಎಲ್ಲಾ ಸಾಧ್ಯತೆಗಳಿವೆ. ಸಿಲ್ಕ್ ಬ್ರೌಸರ್ ಕಂಪನಿಯ ಅತ್ಯುತ್ತಮ ಸಾಫ್ಟ್ ವೇರ್ ಎನ್ನಲಾಗಿದೆ. ಕಿಂಡಲ್ ಪ್ರಿಯರೂ ಅಳವಡಿಸಿಕೊಳ್ಳಬಹುದು.


Click it and Unblock the Notifications








