ರಜೆಯ ಮಜಕ್ಕೆ ಸೋನಿ ಲ್ಯಾಪ್ ಟಾಪ್ ಸರಣಿ

Posted By: Staff

ರಜೆಯ ಮಜಕ್ಕೆ ಸೋನಿ ಲ್ಯಾಪ್ ಟಾಪ್ ಸರಣಿ
ಸಾಲು ಸಾಲು ಹಬ್ಬಗಳು ನಮ್ಮ ಮುಂದಿವೆ. ರಜಾ ದಿನಗಳ ಮೋಜು ಹೆಚ್ಚಿಸಲು ಸೋನಿ ಹಲವು ಸರಣಿ ಲ್ಯಾಪ್ ಟಾಪ್ ಗಳನ್ನು ಹೊರತಂದಿವೆ. ಸೋನಿ ವಿಯೊ ಎಸ್ ಸೀರಿಸ್, ಎಲ್ ಸೀರಿಸ್, ಎಫ್ ಸೀರಿಸ್, ಇ ಸೀರಿಸ್ ಮತ್ತು ಸಿ ಸೀರಿಸ್ ಎಲ್ಲವೂ ಹೊಸ ಅನ್ವೇಷಣೆಗಳೆಂದೇ ಕಂಪನಿ ಪ್ರಕಟಿಸಿದೆ.

ಆದರೆ ಇವೆಲ್ಲ ಹಲವು ಹೆಸರುಗಳನ್ನು ಹೊಂದಿದ್ದರೂ ಫೀಚರುಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿಲ್ಲ. ಎಲ್ಲವೂ ಒಂದೇ ಮೂಸೆಯಲ್ಲಿ ತಯಾರಾದ ಉತ್ಪನ್ನಗಳು. ಸಾಲಾಗಿರಿಸಿದರೆ ಯಾವುದನ್ನು ಖರೀದಿಸಬೇಕು ಎಂದು ನಿಮಗೆ ಸಂದಿಗ್ಧತೆಯೂ ಕಾಡಬಹುದು.

ಲ್ಯಾಪ್ ಟಾಪ್ ನಲ್ಲಿ ಸಿನಿಮಾ ನೋಡೋ ಹುಚ್ಚು ಜಾಸ್ತಿ ಇರೋವರಿಗೆ ಹೊಸ ವಿಯೊ ಎಸ್ ಇ ಲ್ಯಾಪ್ ಟಾಪ್ ಒಳ್ಳೆಯದು. ಇದು 15.5 ಇಂಚಿನ ಸ್ಕ್ರೀನ್ ಹೊಂದಿದೆ. ಸೋನಿ ವಿಯೊ ಎಸ್ ಎ 13.3 ಇಂಚಿನ ಸ್ಕ್ರೀನ್ ಹೊಂದಿದೆ. ಇದು ಕೂಡ ಹೈಡೆಫಿನೇಷನ್ ಫೀಚರ್ಸ್ ಹೊಂದಿದೆ.

ವಿಯೊ ಎಸ್ ಸೀರಿಸ್ ಲ್ಯಾಪ್ ಟಾಪ್ ಗಳು ರೇಡಿಯನ್ ಹೈಬ್ರಿಡ್ ಗ್ರಾಫಿಕ್ಸ್ ಹೊಂದಿವೆ. ವಿಯೊ ಎಸ್ ಎ ಮತ್ತು ವಿಯೊ ಎಸ್ ಇ ಲ್ಯಾಪ್ ಟಾಪ್ ಆರಂಭಿಕ ದರ ಸುಮಾರು 50 ಸಾವಿರ ರು. ಆಗಿದೆ.

ಸೋನಿ ವಿಯೊ ಎಫ್ ಮತ್ತು ಎಲ್ ಸರಣಿಯ ಲ್ಯಾಪ್ ಟಾಪ್ ಗಳು ಕೂಡ ಆಕರ್ಷಕ ಫೀಚರುಗಳನ್ನು ಹೊಂದಿವೆ. ಅದರಲ್ಲಿ ಹಲವು ಪ್ರಿಇನ್ ಸ್ಟಾಲ್ ಮಾಡಿರುವ ಸಾಫ್ಟ್ ವೇರ್ ಗಳಿವೆ. ಇದರಲ್ಲಿ ಇತ್ತೀಚಿನ ಇಂಟೆಲ್ ಕೋರ್ ಪ್ರೊಸೆಸರ್ ಇದೆ. ಉಳಿದಂತೆ ವಿಯೊ ಸಿ ಮತ್ತು ಇ ಸರಣಿಯ ಲ್ಯಾಪ್ ಟಾಪ್ ಗಳು ಕ್ರಮವಾಗಿ ಕೋರ್ ಐ7 ಮತ್ತು ಐ5 ಮೈಕ್ರೊ ಪ್ರೊಸೆಸರ್ ಹೊಂದಿವೆ.

ಇದೀಗ ಕಂಪನಿಯು ಅಕ್ಟೋಬರ್ 6ರಿಂದ ಅನ್ ಲಿಮಿಟೆಡ್ ಮ್ಯೂಸಿಕ್ ಪ್ಲಾನ್ ಹೊರತರಲಿದೆ. ಸೋನಿ ವಿಯೊ ಗ್ರಾಹಕರಿಗೆ 180 ದಿನಗಳ ಟ್ರಯಲ್ ಪಿರೆಯಿಡ್ ಲಾಭವೂ ಇದೆ. ಅಂದರೆ ಇಷ್ಟು ದಿನ ಅನಿಯಮಿತ ಮ್ಯೂಸಿಕ್ ಕೇಳಬಹುದು. ಆಮೇಲೆ ಕಂಪನಿ ಹೇಳಿದಷ್ಟು ಶುಲ್ಕ ಪಾವತಿಸಿ ಈ ಪ್ಲಾನ್ ಮುಂದುವರೆಸಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot