ಸ್ಪೈಸ್ ಹೊರತರಲಿದೆ ಎರಡು ಟ್ಯಾಬ್ಲೆಟ್ ಕಂಪ್ಯೂಟರ್

Posted By: Staff

ಸ್ಪೈಸ್ ಹೊರತರಲಿದೆ ಎರಡು ಟ್ಯಾಬ್ಲೆಟ್ ಕಂಪ್ಯೂಟರ್

ದೂರಸಂಪರ್ಕ ಮಾರುಕಟ್ಟೆಯಲ್ಲಿ ಈಗಾಗಲೇ ಛಾಪು ಮೂಡಿಸಿರುವ ಸ್ಪೈಸ್ ಮೊಬೈಲ್ಸ್ ಕಂಪನಿಯು ಶೀಘ್ರದಲ್ಲಿ ಎರಡು ಟ್ಯಾಬ್ಲೆಟ್ ಕಂಪ್ಯೂಟರ್ ಗಳನ್ನು ಹೊರತರಲಿದೆ. ಮಧ್ಯಮ ಗಾತ್ರದ ಫೀಚರುಗಳು ಮತ್ತು ಸ್ಟೈಲಿಷ್ ಹ್ಯಾಂಡ್ ಸೆಟ್ ಹೊರತರುವ ಮೂಲಕ ಈಗಾಗಲೇ ಕಂಪನಿ ಗ್ರಾಹಕರ ಮನಗೆದ್ದಿದೆ. ಸ್ಪೈಸ್ ಉತ್ಪನ್ನಗಳ ದರ ಕೂಡ ಕಡಿಮೆ.

"ಕಂಪನಿಯು 9.7 ಇಂಚಿನ ಡಿಸ್ ಪ್ಲೇ ಹೊಂದಿರುವ ಎರಡು ಆಂಡ್ರಾಯ್ಡ್ ಟ್ಯಾಬ್ಲೆಟ್ ಹೊರತರಲಿದೆ. ಇದರಲ್ಲಿ ಒಂದು ಟ್ಯಾಬ್ಲೆಟ್ ಸಾಕಷ್ಟು ವಿಶೇಷ ಫೀಚರುಗಳನ್ನು ಹೊಂದಿರಲಿದೆ. ಇವೆರಡು ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳ ದರ 20 ಸಾವಿರ ರು.ಗಿಂತ ಕಡಿಮೆ ಇರಲಿದೆ" ಎಂದು ಸ್ಪೈಸ್ ಮೊಬೈಲ್ಸ್ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಪಾಯಲ್ ಗಾಬಾ ಹೇಳಿದ್ದಾರೆ.

ಹೆಚ್ಚಿನ ಟ್ಯಾಬ್ಲೆಟ್ ಗಳು ದುಬಾರಿಯಾಗಿವೆ. ಆದರೆ ಕಂಪನಿಯು ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಕೈಗೆಟುಕುವ ದರದ ಟ್ಯಾಬ್ಲೆಟ್ ಹೊರತರಲಿದೆ. ಈ ಟ್ಯಾಬ್ಲೆಟ್ ಳಲ್ಲಿರುವ ಪ್ರಮುಖ ವಿಶೇಷತೆಗಳನ್ನು ನೋಡೋಣ.

ಸ್ಪೈಸ್ ನೂತನ ಟ್ಯಾಬ್ಲೆಟ್ ವಿಮರ್ಶೆ

* ಇವೆರಡು ಟ್ಯಾಬ್ಲೆಟ್ ಗಳು 800 ಮೆಗಾಹರ್ಟ್ಸ್ ನ ಕ್ಯೂಯಲ್ ಕಾಮ್ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿರಲಿವೆ.

* ಎರಡು ಆಂಡ್ರಾಯ್ಡ್ ವರ್ಷನ್ ಗಳು ಫ್ರೊಯೊ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿವೆ.

* 7 ಇಂಚಿನ ಡಿಸ್ ಪ್ಲೇ ಹೊಂದಿರುವ ಟ್ಯಾಬ್ಲೆಟ್ ಕೂಡ ಇರಲಿದೆ.

* 800/ 480 ರೆಸಲ್ಯೂಷನ್ ನ ಟಚ್ ಸ್ಕ್ರೀನ್ ಡಿಸ್ ಪ್ಲೇ

* ಎಚ್ ಡಿ ವಿಡಿಯೋ ಪ್ಲೇಬ್ಯಾಕ್

* ನಿಸ್ತಂತು ಮತ್ತು ಬ್ಲೂಟೂಥ್

* ಎರಡು ಕ್ಯಾಮರಾ. ಹಿಂಭಾಗದಲ್ಲಿ 2 ಮೆಗಾ ಫಿಕ್ಸೆಲ್ ಮತ್ತು ಮುಂಭಾಗದಲ್ಲಿ 0.3 ಮೆಗಾಫಿಕ್ಸೆಲ್ ಕ್ಯಾಮರಾ

* 3.5 ಮಿ.ಮೀ. ಸ್ಟಿರಿಯೋಫೋನಿಕ್ ಹೆಡ್ ಸೆಟ್

* ವಿಡಿಯೋ ರೆಕಾರ್ಡಿಂಗ್ ಸೌಲಭ್ಯ

* 155 ಎಂಬಿ ಆಂತರಿಕ ಮೆಮೊರಿ. ಮೆಮೊರಿ ಕಾರ್ಡ್ ಮೂಲಕ 32 ಜಿಬಿ ವರೆಗೆ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳಬಹುದು.

* ಜಿಪಿಎಸ್ ಮತ್ತು ಎಚ್ ಡಿಎಸ್ ಪಿಎ ಬೆಂಬಲ

* ತೂಕ 485 ಗ್ರಾಂ

* ಬ್ಯಾಟರಿ ಬಾಳಿಕೆ: ಟಾಕ್ ಟೈಂ-20-25 ಗಂಟೆ, ಸ್ಟಾಂಡ್ ಬೈಕ್-500 ಗಂಟೆ

* ಲೌಡ್ ಸ್ಪೀಕರ್, ವಿಡಿಯೋ ಪ್ಲೇಯರ್ ಮತ್ತು ಮ್ಯೂಸಿಕ್ ಪ್ಲೇಯರ್ ಸೌಲಭ್ಯ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot