ತೋಷಿಬಾ ಹೊಸ ಗೇಮಿಂಗ್ ಲ್ಯಾಪ್ ಟಾಪ್

By Super
|
ತೋಷಿಬಾ ಹೊಸ ಗೇಮಿಂಗ್ ಲ್ಯಾಪ್ ಟಾಪ್
ತೋಷಿಬಾ ಕಂಪ್ಯೂಟರ್ ಸಿಸ್ಟಮ್ಸ್ ಲ್ಯಾಪ್ ಟಾಪ್ ಗಳು ಹಲವು ವಿಶೇಷತೆಗಳನ್ನು ಹೊಂದಿವೆ. ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಮತ್ತು ಹೊಸ ಅನ್ವೇಷಣೆಯ ಉತ್ಪನ್ನಗಳಿಗೆ ತೋಷಿಬಾ ಜನಪ್ರಿಯ. ತೋಷಿಬಾ ಇತ್ತೀಚೆಗೆ Qosmio X770 ಹೊರತಂದಿದೆ. ಇದು ಪ್ರಮುಖವಾಗಿ ಕಂಪ್ಯೂಟರ್ ಗೇಮಿಂಗ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹೊರಬಂದಿದೆ.

ಇದು ತ್ರಿಡಿ ಅವತಾರದ ಲ್ಯಾಪ್ ಟಾಪ್. ಇದು ತ್ರಿಡಿ ಷಟರ್ ಗ್ಲಾಸ್ ಹೊಂದಿದ್ದು, ಅತ್ಯುತ್ತಮ ಅನುಭವ ನೀಡುತ್ತದೆ. ಜೊತೆಗೆ NVIDIA ಗ್ರಾಫಿಕ್ಸ್ ಬೆಂಬಲ ಇರುವುದರಿಂದ ಈ ಲ್ಯಾಪ್ ಟಾಪ್ ಇಷ್ಟಪಡದಿರಲು ಕಾರಣವೇ ಇಲ್ಲ. ಇದು ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ.

ಇವೆಲ್ಲ ಫೀಚರುಗಳು ಗೇಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ. ಇದಕ್ಕೆ ವಿವಿಧ ಗಾತ್ರದ ಮೆಮೊರಿ ಕಾರ್ಡ್ ಗಳನ್ನು ಹಾಕಬಹುದು. ಅಂದರೆ 4ಜಿಬಿ, 6 ಜಿಬಿ ಅಥವಾ 8ಜಿಬಿ ಮೆಮೊರಿ ಕಾರ್ಡ್ ಗಳನ್ನು ಬಳಕೆ ಮಾಡಬಹುದು.

ಇದರ ಡಿಸ್ ಪ್ಲೇ ಸ್ಕ್ರೀನ್ ಕೂಡ ಸುಂದರವಾಗಿದೆ. ಇದು 17.3 ಇಂಚಿನ ಹೈಡೆಫಿನೇಷನ್ ಡಿಸ್ ಪ್ಲೇ ಹೊಂದಿದೆ. Toshiba Qosmio X770 ಕೊಂಚ ದೊಡ್ಡದೆನಿಸಿದರೂ ಮಣಭಾರವಲ್ಲ. ಈ ಲ್ಯಾಪ್ ಟಾಪ್ ನಲ್ಲಿ ತ್ರಿಡಿ ಫೀಚರುಗಳೇ ಪ್ರಮುಖ ಆಕರ್ಷಣೆ. ತ್ರಿಡಿ ವೆಬ್ ಕ್ಯಾಮರಾ ಮೂಲಕ ತ್ರಿಡಿ ವಿಡಿಯೋ ಕಾನ್ಪರೆನ್ಸ್ ಮಾಡಬಹುದು. ತ್ರಿಡಿ ಚಿತ್ರಗಳನ್ನು ಕೂಡ ಇದರಿಂದ ಪಡೆಯಬಹುದು.

ಹಾರ್ಮನ್/ಕಾರ್ಡೊನ್ ಸ್ಟಿರಿಯೋ ಸ್ಪೀಕರ್ ಇರುವುದರಿಂದ ಮ್ಯೂಸಿಕ್ ಮಸ್ತಿಯೂ ಅತ್ಯುತ್ತಮವಾಗಿದೆ. ಹಾರ್ಮನ್ ಕಾರ್ಡೊನ್ ಪ್ರಮುಖ ಸ್ಟಿರಿಯೋ ಬ್ರಾಂಡ್ ಆಗಿದೆ. ಇದರಿಂದ ಅತ್ಯಧಿಕ ಗುಣಮಟ್ಟದ ಸೌಂಡ್ ಕೇಳಬಹುದಾಗಿದೆ. ಈ ಲ್ಯಾಪ್ ಟಾಪ್ ಹೊರಗಿನ ವಿನ್ಯಾಸವೂ ಸೂಪರ್ ಆಗಿದೆ. ಟಚ್ ಕಂಟ್ರೊಲ್ ಬಟನ್ ಗಳು ಇಷ್ಟವಾಗುತ್ತವೆ.

ಈ ಗೇಮಿಂಗ್ ಲ್ಯಾಪ್ ಟಾಪ್ ದರ ಕೊಂಚ ಜಾಸ್ತಿ ಎನಿಸಬಹುದು. ಇಷ್ಟೇಲ್ಲ ಹೈಫೈ ಫೀಚರುಗಳಿರುವ Toshiba Qosmio X770 ದರ ಸುಮಾರು 75 ಸಾವಿರ ರು. ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X