ಡೆಲ್ ಹೈ ಫರ್ಪಾಮೆನ್ಸ್ ಲ್ಯಾಪ್ ಟಾಪ್ ತಗೋಳಿ

Posted By: Staff

ಡೆಲ್ ಹೈ ಫರ್ಪಾಮೆನ್ಸ್ ಲ್ಯಾಪ್ ಟಾಪ್ ತಗೋಳಿ
ಡೆಲ್ ಶೀಘ್ರದಲ್ಲಿ Dell XPS 14Z ಎಂಬ ಹೊಸ ಲ್ಯಾಪ್ ಟಾಪ್ ಪರಿಚಯಿಸಲಿದೆಯಂತೆ. ಅದು ಕೂಡ ಅತ್ಯಧಿಕ ಕಾರ್ಯಕ್ಷಮತೆಯ ಲ್ಯಾಪ್ ಟಾಪ್. ಅಲ್ಯುಮಿನಿಯಂ ಲೇಪಿತ ಬಾಡಿ ಫ್ರೇಮ್ ನಿಂದ ನೂತನ ಲ್ಯಾಪ್ ಟಾಪ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಇದು 14 ಇಂಚಿನ ಎಲ್ ಇಡಿ ಡಿಸ್ ಪ್ಲೇ ಹೊಂದಿದೆ. 1366 x 768 ರೆಸಲ್ಯೂಷನ್ ನೀಡುತ್ತದೆ. ಇದು ಆಪಲ್ ಲ್ಯಾಪ್ ಟಾಪ್ ಗೆ ಪೈಪೋಟಿ ನೀಡಲಿದೆಯೆಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ನೂತನ Dell XPS 14Z ಲ್ಯಾಪ್ ಟಾಪ್ ಇಂಟೆಲ್ ಕೋರ್ ಐ5 ಪ್ರೊಸೆಸರ್ ಹೊಂದಿದೆ. ಇದು ವಿಂಡೋಸ್ 7 ಹೋಮ್ ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್ ಹೊಂದಿದೆ.

ಉಳಿದಂತೆ ಇದರಲ್ಲಿ ಹಲವು ಫೀಚರುಗಳು ಇಷ್ಟವಾಗುತ್ತದೆ. 8 ಜಿಬಿ RAM ಮತ್ತು 500 ಜಿಬಿಯ ಹಾರ್ಡ್ ಡಿಸ್ಕ್ ಡ್ರೈವ್ ಇದರಲ್ಲಿದೆ. ಇತ್ತೀಚಿನ "ಆಪ್ಟಿಕಲ್ ಡ್ರೈವ್" ಇದರಲ್ಲಿರುವ ಇನ್ನೊಂದು ಪ್ರಮುಖ ವಿಶೇಷತೆಯಾಗಿದೆ. ಬ್ಲೂಟೂಥ್ ಮತ್ತು ನಿಸ್ತಂತು ಕನೆಕ್ಟಿವಿಟಿಗಳು ಇದರಲ್ಲಿರುವ ಇನ್ನಿತರ ಮಾಮೂಲಿ ಫೀಚರುಗಳು.

ನೂತನ ಲ್ಯಾಪ್ ಟಾಪ್ ದರವನ್ನು ಡೆಲ್ ಇನ್ನೂ ಪ್ರಕಟಿಸಿಲ್ಲ. ಇದರ ದರ ಸುಮಾರು 38 ಸಾವಿರ ರು.ನಿಂದ 41 ಸಾವಿರ ರು.ವರೆಗಿರಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ಇನ್ನಿತರ ವಿಶೇಷತೆಗಳು ಸಂಕ್ಷಿಪ್ತವಾಗಿ
* 1 ಜಿಬಿ ವಿಡಿಯೋ ಕಾರ್ಡ್
* 7 ಗಂಟೆ ಬ್ಯಾಟರಿ ಬಾಳಿಕೆ
* ಕಾರ್ಡ್ ರೀಡರ್ ಮತ್ತು ಮಲ್ಟಿ ಟಚ್ ಪ್ಯಾಡ್
* ಲೇನ್ ಕನೆಕ್ಷನ್, ಯುಎಸ್ ಬಿ 3.0 ಪೋರ್ಟ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot