ಏಸರ್ ಟೈಮ್ ಲೈನೆಕ್ಸ್ 5830 ಟಿಜಿ ಲ್ಯಾಪ್ ಟಾಪ್ ವಿಮರ್ಶೆ

ನೂತನ ಟೈಮ್ ಲೈನೆಕ್ಸ್ 5830 ಟಿಜಿ ಆಕರ್ಷಕ ಲ್ಯಾಪ್ ಟಾಪ್. ಇದರ ಸೌಂದರ್ಯ, ನಿಖರತೆ ಮತ್ತು ತಾಂತ್ರಿಕ ಪರಿಪೂರ್ಣತೆಯ ನಡುವೆ ಕಣ್ಣು ಹಾಯಿಸಿದಾಗ ನಿಜಕ್ಕೂ ಇಷ್ಟವಾಗುತ್ತದೆ. ಇದರ ದರ ಕೂಡ ಈ ಸೆಗ್ಮೆಂಟಿನಲ್ಲಿ ಕೈಗೆಟುಕುವ ಮಟ್ಟದಲ್ಲಿದೆ.
Aspire TimelineX ಸ್ಕ್ರೀನ್ ರೆಸಲ್ಯೂಷನ್ 1366x768 ಪಿಕ್ಸೆಲ್ ಆಗಿದೆ. ನೀಲಿ, ಬೆಳ್ಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರಕುವ ಈ ಲ್ಯಾಪ್ ಟಾಪ್ ತೂಕ 2.5 ಕೆ.ಜಿಗಿಂತ ಕಡಿಮೆಯಿದೆ.
ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ ಐ5-2410ಎಂ 2.30 ಗಿಗಾಹರ್ಟ್ಸ್ ನ ಸ್ಯಾಂಡಿ ಬ್ರಿಡ್ಜ್ ಪ್ರೊಸೆಸರ್ ಹೊಂದಿದೆ. ಡಿಡಿಆರ್3 3ಜಿಬಿ RAM ಮತ್ತು ಜಿಫೋರ್ಸ್ ಜಿಟಿ 540ಎಂ ಇಂಟೆಲ್ ಎಚ್ ಡಿ3000 ಗ್ರಾಫಿಕ್ಸ್ ಕಾರ್ಡ್ ಕೂಡ ಇದೆ. ಈ ಲ್ಯಾಪ್ ಟಾಪ್ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ.
ವಿಶೇಷತೆಗಳು
* ಬ್ಯಾಟರಿ ಚಾರ್ಜ್ ಕುರಿತು ಮಾಹಿತಿ ನೀಡುತ್ತದೆ. ನೀಲಿ, ಕೆಂಪು ಬಣ್ಣಗಳ ಬಟನ್ ಮೂಲಕ ಬ್ಯಾಟರಿ ಇನ್ನೂ ಎಷ್ಟು ಇದೆ ಎಂದು ತಿಳಿದುಕೊಳ್ಳಬಹುದು. ಶೇ. 10ರಷ್ಟು ಬ್ಯಾಟರಿ ಉಳಿದಾಗ ಬಟನ್ ಕೆಂಪು ಬಣ್ಣಕ್ಕೆ ತಿರುಗುತ್ತದೆ.
* ಇಂಟೆಲ್ ಕೋರ್ ಐ5-2410ಎಂ 2.30 ಗಿಗಾಹರ್ಟ್ಸ್ ನ ಸ್ಯಾಂಡಿ ಬ್ರಿಡ್ಜ್ ಪ್ರೊಸೆಸರ್
* ಡಿಡಿಆರ್3 3ಜಿಬಿ RAM
* ಜಿಫೋರ್ಸ್ ಜಿಟಿ 540ಎಂ ಇಂಟೆಲ್ ಎಚ್ ಡಿ3000 ಗ್ರಾಫಿಕ್ಸ್ ಕಾರ್ಡ್
* ಯುಎಸ್ ಬಿ ಪೋರ್ಟ್ ಯುಎಸ್ ಬಿ ಚಾರ್ಜರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
* ವಿಂಡೋಸ್ 7 ಹೋಂ ಪ್ರೀಮಿಯಂ 64 ಬಿಟ್ ಎಡಿಷನ್ ಸರ್ವಿಸ್ ಪ್ಯಾಕ್
* ದರ: 42,500 ರುಪಾಯಿ


Click it and Unblock the Notifications








